Uttar Pradesh: ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಕನಿಷ್ಠ 18 ಬಾಲಕಿಯರಿಗೆ ಶಿಕ್ಷಕನೊಬ್ಬ ಲೈಂಗಿಕ (Harassment on school girls)ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಇಂತಹ ಒಂದು ಆಘಾತಕಾರಿ ಘಟನೆ ನಡೆದಿದ್ದು ಉತ್ತರ ಪ್ರದೇಶದ ಷಹಜಹಾನ್ಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ.ಆರೋಪಿಯನ್ನು ಈಗಾಗಲೇ ಬಂಧಿಸಿದ್ದು ಶಾಲೆಯ ಪ್ರಾಂಶುಪಾಲರು ಮತ್ತು ಸಹಾಯಕ ಶಿಕ್ಷಕನನ್ನು ಆರೋಪಿಗೆ ಬೆಂಬಲಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.
ಕಂಪ್ಯೂಟರ್ (Computer) ಶಿಕ್ಷಕ ಮೊಹಮ್ಮದ್ ಅಲಿ (Mohammad Ali) ಕಂಪ್ಯೂಟರ್ ಬೋಧಕ ಶಾಲೆಯಲ್ಲಿ ಓದುತ್ತಿರುವ ಸುಮಾರು 18 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಕಿರುಕುಳ ನೀಡುತ್ತಿದ್ದರು.
ಅವನಿಗೆ ಪ್ರಾಂಶುಪಾಲ ಅನಿಲ್ ಪಾಠಕ್ ಮತ್ತು ಸಾಜಿಯಾ ಎನ್ನುವ ಶಿಕ್ಷಕಿ ಬೆಂಬಲ ನೀಡಿದ್ದಾರೆ ಎಂದು ಎಸ್ ಆನಂದ್ ಶಹಜಹಾನ್ಪುರದ ಹಿರಿಯ (Harassment on school girls) ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಗೆ ಈಗಾಗಲೇ ತಿಳಿಸಲಾಗಿದ್ದು ಕಾನೂನು ಕ್ರಮ ಕೈಗೊಂದಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಹಜಹಾನ್ಪುರ ಜಿಲ್ಲೆಯ ತಿಲ್ದಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶಾಲೆಗೆ ಈ ಪ್ರಕಾರಣವು ಸಂಬಂಧಿಸಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ತನ್ನನ್ನು ಮತ್ತು ಇತರ ವಿದ್ಯಾರ್ಥಿನಿಯರನ್ನು ಕಂಪ್ಯೂಟರ್ (Computer) ಶಿಕ್ಷಕನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು ಎಂದು ಪೋಷಕರಲ್ಲಿ ಬಾಲಕಿಯೊಬ್ಬಳು ಹೇಳಿಕೊಂಡಿದ್ದಾಳೆ.ಪೋಷಕರು ತಕ್ಷಣ ಶಾಲೆಯ ಮೇಲೆ ದಾಳಿ ನಡೆಸಿದರು.
ಅಷ್ಟೇ ಅಲ್ಲದೆ ಶಾಲೆಯ ಶೌಚಾಲಯದಿಂದ ಅನೇಕ ಬಳಸಿದ ಕಾಂಡೋಮ್ಗಳನ್ನು (Condom) ವಶಪಡಿಸಿಕೊಂಡಿದ್ದಾರೆ.ಈ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ: ಬಜೆಟ್ ಸಿದ್ಧಪಡಿಸುವಲ್ಲಿ 246 ಪಂಚಾಯಿತಿಗಳು ವಿಫಲ : 274 ಗ್ರಾಮ ಪಂಚಾಯತ್ಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ
ಈ ಲೈಂಗಿಕ ಕಿರುಕುಳವು ಬಹುತೇಕ ದಲಿತ ಸಮುದಾಯದವರಾದ ಬಾಲಕಿಯರ ಮೇಲೆ ನಡೆದಿದ್ದು ಈ ಬಗ್ಗೆ ಮಾತನಾಡಿದ ಸಚಿವರು ಈ ಘಟನೆಯು ದಲಿತರು ಅನ್ನೋದಕ್ಕಿಂತಲೂ ಹೆಣ್ಣುಮಕ್ಕಳಿಗೆ ಸಂಬಂಧಿಸಿದ್ದು,
ನಾವು ಎಲ್ಲ ಜಾತಿ, ಸಮುದಾಯಗಳನ್ನು ಗೌರವಿಸುತ್ತೇವೆ, ಆರೋಪಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುತ್ತೇವೆ (Harassment on school girls)ಎಂದಿದ್ದಾರೆ.
ಆರೋಪಿ ಮೊಹಮ್ಮದ್ ಅಲಿ `
(Mohammad Ali), ಸಹಾಯಕ ಶಿಕ್ಷಕಿ ಸಾಜಿಯಾ ಮತ್ತು ಶಾಲೆಯ ಪ್ರಾಂಶುಪಾಲ ಅನಿಲ್ ಪಾಠಕ್ (Anil Pathak) ಮೂವರು ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದೆ.
ಶಹಜಹಾನ್ಪುರದ ತಿಲ್ದಾರ್ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾರೆ.ಈ ಆರೋಪಿಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, ಐಪಿಸಿ ಮತ್ತು ಪೋಕ್ಸ್ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗೆ ಬೆಂಬಲ ನೀಡಿದಕ್ಕಾಗಿ ಪ್ರಾಂಶುಪಾಲರು ಹಾಗೂ ಸಹಾಯಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ,ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಶ್ಮಿತಾ ಅನೀಶ್