Hariyana: ಸೋಮವಾರ ಧಾರ್ಮಿಕ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ ನಡೆದಿದ್ದು, ಕೋಮು ಗಲಭೆಯಲ್ಲಿ 5 ಮಂದಿ ಬಲಿಯಾದ (hariyana voilence) ಘಟನೆ ಹರ್ಯಾಣದ
ನುಹ್‌ನಲ್ಲಿ (Nuh) ನಡೆದಿದೆ. ಸಂಜೆ ವೇಳೆ ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ಸಫಲರಾಗಿದ್ದರೂ, ರಾತ್ರಿ ಮತ್ತೆ ಹಿಂಸಾಚಾರ ನಡೆದಿದೆ.

ಸೋಮವಾರ ರಾತ್ರಿ ಸೆಕ್ಟರ್ 57 ರಲ್ಲಿ ಅಂಜುಮನ್ ಜಮಾ (Anjumana Jama) ಮಸೀದಿಗೆ ಬೆಂಕಿ ಹಚ್ಚಲಾಗಿದ್ದು, ಮಂಗಳವಾರ ಬೆಳಿಗ್ಗೆ ಸುಮಾರು 70-80 ಜನರ ಗುಂಪೊಂದು ಗುರ್ಗಾಂವ್‌ನ ಮಸೀದಿಗೆ ಬೆಂಕಿ
ಹಚ್ಚಿ ನೈಬ್ ಇಮಾಮ್ ಅನ್ನುವರನ್ನು ಕೊಂದಿದೆ ಎಂದು (hariyana voilence) ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಕೆಲವರನ್ನು ಗುರುತಿಸಿದ್ದು, ಸೆಕ್ಟರ್ (Sector) 57 ರಲ್ಲಿರುವ ಅಂಜುಮನ್ ಜಮಾ ಮಸೀದಿಗೆ ಸೋಮವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಹಾಗಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು
ಡಿಸಿಪಿ (ಪೂರ್ವ) ನಿತೀಶ್ ಅಗರ್ವಾಲ್ (Nithish Agarwal) ಅವರು ಹೇಳಿದರು.
ಇದನ್ನು ಓದಿ: ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
“ನಾಯಿಬ್ ಇಮಾಮ್ (Nahib Imam) ಮತ್ತು ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯಲ್ಪಟ್ಟರು ಇಮಾಮ್‌ಗೆ ತೀವ್ರವಾದ ಗಾಯಗಳಾಗಿವೆ ಎಂದು ಡಿಸಿಪಿ
(DCP) ಹೇಳಿದರು. ಈ ವೇಳೆ ಆರೋಪಿಗಳು ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪುರುಷರ ಗುಂಪೊಂದು ಪಿ.ಎಸ್ ಸೆಕ್ಷನ್ (P.S Section) 56 ಜಿಜಿಎಂ ಪ್ರದೇಶದಲ್ಲಿನ ಸೆಕ್ಟರ್ 57 ರಲ್ಲಿನ ಅಂಜುಮನ್ ಮಸೀದಿಯ ಮೇಲೆ ಇಂದು ಮುಂಜಾನೆ 12:10 ರ ಸುಮಾರಿಗೆ ದಾಳಿ ನಡೆಸಿದಾಗ ಒಬ್ಬರು
ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ಹಾರಿಸಿದ್ದಾರೆ.
ಪೊಲೀಸರು ದಾಳಿಕೋರರನ್ನು ಗುರುತಿಸಿದ್ದು, ಮತ್ತು ರಾತ್ರಿಯಿಡೀ ನಡೆಸಿದ ದಾಳಿಯ ನಂತರ ಹಲವು ದಾಳಿಕೋರರನ್ನು ಸುತ್ತುವರೆದಿದ್ದಾರೆ. ಪ್ರಾರ್ಥನಾ ಸ್ಥಳಗಳ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು,
ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತು ಆಡಳಿತವು ಎರಡೂ ಸಮುದಾಯಗಳ ಪ್ರಮುಖ ಸದಸ್ಯರೊಂದಿಗೆ ಸಭೆಗಳನ್ನು ನಡೆಸುತ್ತಿದೆ.
ಜಿಲ್ಲೆಯಲ್ಲಿ ಮಂಗಳವಾರ ಕರ್ಫ್ಯೂ (Curfew) ಹೇರಲಾಗಿದ್ದು, ವಿಎಚ್‌ಪಿ (VHP) ಮತ್ತು ಬಜರಂಗದಳದ ಮೆರವಣಿಗೆಯಲ್ಲಿ ನುಹ್‌ನಲ್ಲಿ ನಡೆದ ಘರ್ಷಣೆಯ ಕೆಲವು ಗಂಟೆಗಳ ನಂತರ ಹಿಂಸಾಚಾರ ಸಂಭವಿಸಿದೆ.
ಇದರಲ್ಲಿ ಇಬ್ಬರು ಗೃಹರಕ್ಷಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಯಾವುದೇ ಹೊಸ ಹಿಂಸಾಚಾರದ ವರದಿಗಳು ಇಲ್ಲದಿದ್ದರೂ ಸಹ ನುಹ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಎಂದು ಹರಿಯಾಣ (Hariyana)
ಗೃಹ ಸಚಿವ ಅನಿಲ್ ವಿಜ್ (Anil Viz) ಹೇಳಿದ್ದಾರೆ.
ನುಹ್ ಮತ್ತು ಇತರ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿದೆ. ಸೋಹ್ನಾ / ಪಟೌಡಿ / ಮನೇಸರ್ ಪ್ರದೇಶಗಳಲ್ಲಿ ಇಂಟರ್ನೆಟ್ (Internet)
ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಅವರು ಹೇಳಿದರು.
ಭವ್ಯಶ್ರೀ ಆರ್.ಜೆ