ಪ್ರೊ ಕಬ್ಬಡಿ ಲೀಗ್ನ 102 ಮತ್ತು 103ನೇ ಪಂದ್ಯದಲ್ಲಿ ಕ್ರಮವಾಗಿ ಹರಿಯಾಣ ಪಾಟ್ನಾ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದ ಮೊದಲಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ 15 ಪಾಯಿಂಟ್ಸ್ ಕಲೆಹಾಕಿದ್ದು, ತಮಿಳ್ ತಲೈವಾಸ್ 12 ಪಾಯಿಂಟ್ಸ್ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲೂ ಕೂಡ ತಮಿಳ್ ತಲೈವಾಸ್ ಹಿಂದಿಕ್ಕಿದ ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿತು. ತಲೈವಾಸ್ 17 ಪಾಯಿಂಟ್ಸ್ ಗಳಿಸಿಕೊಂಡಿತು. ಕೊನೆಯ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನ ನಗೆ ಬೀರಿತು.
![pro kabbadi pro kabbadi](https://staticg.sportskeeda.com/editor/2022/02/2a5e0-16443383350571-1920.jpg)
ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಯು ಮುಂಬಾ ವಿರುದ್ಧ ಸುಲಭ ಜಯ ದಾಖಲಿಸಿತು. ಮೊದಲಾರ್ಧದಲ್ಲಿ 28-16 ಪಾಯಿಂಟ್ಸ್ ಮುನ್ನಡೆ ಸಾಧಿಸಿದ್ದ ಪಾಟ್ನಾ ಪೈರೇಟ್ಸ್, ದ್ವಿತಿಯಾರ್ಧದಲ್ಲಿ 21-18 ಪಾಯಿಂಟ್ಸ್ ಗಳಿಸುವಲ್ಲಿ ಸಫಲವಾಯಿತು. ಅಂತಿಮವಾಗಿ ಪಾಟ್ನಾ ಪೈರೇಟ್ಸ್ 47-36 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು. ಪಾಟ್ನಾ ಪರ ರೈಡಿಂಗ್ನಲ್ಲಿ ಮಿಂಚಿದ ಸಚಿನ್ 16 ಪಾಯಿಂಟ್ಸ್ ಗಳಿಸಿದರು.
![haryana steelers haryana steelers](https://cdn.kabaddiadda.com/sites/default/files/2020-12/vikas_kandola_dharmaraj_cheralathan_haryana_steelers_2019_pkl.jpg)
ಗುಮನ್ ಸಿಂಗ್ 11 ಪಾಯಿಂಟ್ಸ್ ಪಡೆದುಕೊಂಡರೆ, ಯು ಮುಂಬಾ ಪರ ಅಭಿಷೇಕ್ ಸಿಂಗ್ 13 ಪಾಯಿಂಟ್ಸ್ , ವಿ. ಅಜಿತ್ ಕುಮಾರ್ 11 ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಈ ಪಂದ್ಯದ ಗೆಲುವಿನ ಮೂಲಕ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿದ್ದು, 17 ಪಂದ್ಯಗಳಲ್ಲಿ 12 ಜಯಗಳಿಂದ ಒಟ್ಟು 65 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಸ್ಥಾನ ಪಡೆದಿದೆ. ದಬಾಂಗ್ ಡೆಲ್ಲಿ 57 ಪಾಯಿಂಟ್ಸ್ನಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.