ಕಟೀಲ್ ಬದಲು ಪಿಟೀಲು ಅಂತ ಹೆಸರಿಟ್ಟುಕೊಳ್ಳಲಿ : ಹೆಚ್.ಡಿ.‌ಕುಮಾರ್‌ಸ್ವಾಮಿ

Bengaluru : ಉತ್ತರ ಕನ್ನಡ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ, ಜೆಡಿಎಸ್‌ ನಾಯಕ ಹೆಚ್.ಡಿ.‌ಕುಮಾರಸ್ವಾಮಿ(HD Kumaraswamy) ಅವರು 62ನೇ ದಿನದ ಯಾತ್ರೆಯನ್ನು (HDK satirized Nalin Kumar)ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆಸಿದ್ದಾರೆ.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರ ಬಗ್ಗೆ ಹೆಚ್.ಡಿಕೆ ವ್ಯಂಗ್ಯವಾಡಿದ್ದಾರೆ.

ಜನರನ್ನು ಉದ್ದೇಶಿಸಿ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ(Uthara Kannada District) ಎರಡರಿಂದ ಮೂರು ಸ್ಥಾನವನ್ನು ಜೆಡಿಎಸ್(JDS) ಗೆಲ್ಲಲಿದೆ.

ನಾವು ಬ್ರಾಹ್ಮಣ ವಿರೋಧಿಯಲ್ಲ! ರಾಮಕೃಷ್ಣ ಹೆಗಡೆ(Ramakrishna Hegde) ಅವರನ್ನ ಸಿಎಂ ಮಾಡಿದ್ದು, ದೇವೆಗೌಡರು(Devegowda).

ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ..? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದನ್ನು ರಾಜ್ಯದ ಜನರೇ ನಿರ್ಧರಿಸುತ್ತಾರೆ.

ಬಿಜೆಪಿ(BJP) ನಾಯಕರು ನಿರ್ಧರಿಸುವುದಲ್ಲ. ಹಿಂದೂ ಧರ್ಮ ರಕ್ಷಣೆ ನಾವು ಮಾಡುತ್ತೇವೆ.

ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ತೆರೆದ ಪುಸ್ತಕದಂತೆ ಎಂದು ನಳೀನ್‌ ಕುಮಾರ್‌ ಕಟೀಲ್‌ (HDK satirized Nalin Kumar) ಅವರ ವಿರುದ್ಧ ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

ಇನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಬಾರಿಯ ಚುನಾವಣೆ ಟಿಪ್ಪು ವರ್ಸಸ್ ಸಾವರ್ಕರ್ ಬಗ್ಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಚುನಾವಣೆ ಟಿಪ್ಪು(Tippu) ವರ್ಸಸ್ ಸಾವರ್ಕರ್ ವಿರುದ್ಧದ ಚುನಾವಣೆ ಆಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಏರ್‌ಪೋರ್ಟ್‌ಗೆ ಬಿಎಸ್‌ವೈ ಹೆಸರಿಡಿ : ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾದ ಸಿಎಂ

ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ನಳೀನ್‌ ಕುಮಾರ್‌ ಕಟೀಲ್‌, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುವುದಿಲ್ಲ,

ಬದಲಿಗೆ ಸಾವರ್ಕರ್ ಮತ್ತು ಟಿಪ್ಪು ಸಿದ್ಧಾಂತಗಳ ನಡುವೆ ನಡೆಯಲಿದೆ ಎಂದು ಘಟುಧ್ವನಿಯಲ್ಲಿ ಹೇಳಿದ್ದಾರೆ.

ನಳೀನ್‌ ಕುಮಾರ್‌ ಅವರ ಈ ಹೇಳಿಕೆಗೂ ಮುನ್ನ ರಾಜ್ಯಕ್ಕೆ ಯಾರು ಮುಖ್ಯ ಎಂಬ ಬಗ್ಗೆ ಚರ್ಚೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲನ್ನು ಹಾಕಿದ್ದರು!

ಇದೀಗ ಸಿದ್ದರಾಮಯ್ಯ(Siddaramaiah) ಅವರಿಗೆ ನಳೀನ್‌ ಕುಮಾರ್ ಕಟೀಲ್‌ ಅವರು ಹೊಸದೊಂದು ಸವಾಲನ್ನು ಎಸಗಿದ್ದಾರೆ.


ಈ ರಾಜ್ಯದಲ್ಲಿ ಬೇಡವಾದ ಟಿಪ್ಪು ಜಯಂತಿ(Tippu Jayanthi) ಆಚರಿಸಲು ಅವರಿಗೆ ಅವಕಾಶ ಇದೆ, ನಾನು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುತ್ತೇನೆ, ಮುಂದಿನ ಚುನಾವಣೆ ಟಿಪ್ಪು ಮತ್ತು ಸಾವರ್ಕರ್ ನಡುವೆ ನಡೆಯಲಿದೆ.

ಈ ದೇಶಕ್ಕೆ ಸಾವರ್ಕರ್ ಅಂತ ದೇಶಭಕ್ತರು ಅಗತ್ಯವಿದೆಯಾ? ಅಥವಾ ಟಿಪ್ಪು ಸುಲ್ತಾನ್‌ ಅಗತ್ಯವಿದೆಯಾ? ಎಂಬುದನ್ನು ಚರ್ಚಿಸೋಣ, ಬನ್ನಿ? ಎಂದು ಸವಾಲು ಹಾಕಿರುವುದು ಇದೀಗ ಮುನ್ನೆಲೆಗೆ ಬಂದಿದೆ.

Exit mobile version