Bengaluru: ರಾಜ್ಯ ಸರ್ಕಾರವು ಹಾಲಿನ ಮಾರಾಟ ದರವನ್ನು 3 ರೂಪಾಯಿಗೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ವಿಚಾರವಾಗಿ ಮಾಜಿ ಸಿಎಂ (hdk v/s Siddaramaiah) ಎಚ್.ಡಿ ಕುಮಾರಸ್ವಾಮಿ
(H.D.Kumaraswamy) ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಈ ಸರ್ಕಾರಕ್ಕೆ ಆಲ್ಕೋಹಾಲಾರರೇನು
(Alcohol)? ಹಾಲಾದರೇನು? ಖಜಾನೆ ತುಂಬಬೇಕಷ್ಟೇ ಎಂದು ಆಕ್ರೋಶ (hdk v/s Siddaramaiah) ವ್ಯಕ್ತಪಡಿಸಿದ್ದಾರೆ.

ನಂದಿನಿ (Nandini) ಹಾಲಿನ ಬೆಲೆಯನ್ನು ಜಾಸ್ತಿಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಇನ್ನು ಹಾಲಿನ ದರವನ್ನು ಹೆಚ್ಚಿಸುವ
ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಒಂದು ಕೈಯಲ್ಲಿ ಕೊಟ್ಟು, ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸವನ್ನು ಮಾಡುತ್ತಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ (Tweet) ಮಾಡಿರುವ ಅವರು, ಆಲ್ಕೋಹಾಲಿನ (Alcohol) ಬೆಲೆ ಹೆಚ್ಚಿಸಿದ ನಂತರ ಸಿದ್ದರಾಮಯ್ಯ ಸರ್ಕಾರ ಹಾಲಿನ ಬೆಲೆಯನ್ನೂ ಲೀಟರಿಗೆ 3 ರೂ ರಂತೆ ಜಾಸ್ತಿ ಮಾಡಿ
ಇದನ್ನು ಓದಿ: ನಿಮಗೆ ಹೃದಯದ ಆರೋಗ್ಯ ಬೇಕಾ? ಹಾಗಾದ್ರೆ ಈ 5 ಆಹಾರ ತಿನ್ನಲೇ ಬೇಡಿ !
ಶ್ರಮಜೀವಿಗಳ ಜೇಬಿಗೆ ಕನ್ನ ಹಾಕಿದೆ ಎಂದು ಗುಡುಗಿದರು. ಇನ್ನು ಈ ಸರ್ಕಾರ ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುತ್ತಿದೆ. ತಮ್ಮ ಕಿವಿಯಲ್ಲಿ ತಾವೇ ಹೂವಿಟ್ಟುಕೊಂಡಿದ್ದ
ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಹೂವಿನ ಕುಂಡ ಇಡುತ್ತಿದ್ದಾರೆ ಎಂದು ಗೊಣಗಿದ್ದಾರೆ.
ಈ ಸರ್ಕಾರ ಅಧಿಕಾರಕ್ಕೆ ಬಂಡ ಕೂಡಲೆ ಬೆಲೆ ಹೆಚ್ಚಳದ ಸರಣಿ ಶಾಕ್ (Shock) ಕೊಡುತ್ತಿದೆ. ಕಾಂಗ್ರೆಸ್ ಚುನಾವಣೆಗೆ ಮುಂಚೆ ಬೆಲೆ ಏರಿಕೆ ಬಗ್ಗೆ ಬಾಯಿ ಬಾಯಿ ಬಡ್ಕೊಳ್ತಿತ್ತು.
ಕೈ ಕರಾಮತ್ತು ಹೇಗಿದೆ ನೋಡಿ ಅನ್ನಭಾಗ್ಯದ ಹಣವನ್ನು ಹಾಲು ಮತ್ತು ಆಲ್ಕೋಹಾಲಿನಿಂದಲೇ ವಸೂಲಿ ಮಾಡಲು ಇಳಿದಿರುವ ಕಾಂಗ್ರೆಸ್ (Congress) ಚಿಕ್ಕ ಮೊನಿಟರಿ
ಪಾಲಿಸಿಗೆ ಧಿಕ್ಕಾರ ಎಂದು ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವು ಆರಂಭದಲ್ಲಿಯೇ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಕೊಟ್ಟಿದ್ದು, ಜನರ ಪಾಲಿಗೆ ಗೃಹಜ್ಯೋತಿಯನ್ನು ಸುಡುಜ್ಯೋತಿ ಮಾಡಿತ್ತು. ಏರಿಕೆಯಾದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರ್ಕಾರವು,
ವಿಧಾನ ಕಲಾಪದಲ್ಲಿ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ (Guarantee), ಬೆಲೆಭಾಗ್ಯವನ್ನು ಕರುಣಿಸಿ ಕೈತೊಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದರು.
ಹಾಲಿನ ಬೆಲೆ ಹೆಚ್ಚಳ!
ರಾಜ್ಯದ ರೈತರ ಜೀವನಾಡಿಯಾಗಿರುವ ಹೈನೋದ್ಯಮಕ್ಕೆ ಧೈರ್ಯ ತುಂಬುವ ಸಲುವಾಗಿ ಹಾಲು ಮಾರಾಟ ದರದಲ್ಲಿ ಸರ್ಕಾರವು ಲೀಟರ್‌ಗೆ 3 ರೂ. ಹೆಚ್ಚಿಸಲು ನಿರ್ಧರಿಸಿದ್ದು, ಪರಿಷ್ಕೃತ ದರದ ಜಾರಿಗೆಯನ್ನು
(August) 1ರಿಂದ ತರಲಿದೆ. ಹಾಲು ಉತ್ಪಾದನೆ ಕುಸಿತ, ಚರ್ಮ ಗಂಟು ರೋಗ ಹಾಗೂ ಬರ ಪರಿಸ್ಥಿತಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವ ಹೈನುಗಾರಿಕೆಗೆ ಬೆಂಬಲ ನೀಡುವ ಸಲುವಾಗಿ ಹಾಲು
ಮಾರಾಟ ದರವನ್ನು ಲೀಟರ್‌ಗೆ 5 ರೂ. ಹೆಚ್ಚಳ ಮಾಡಬೇಕೆಂದು ‘ಕೆಎಂಎಫ್’ (KMF) ಹಾಗೂ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದವು.
ಭವ್ಯಶ್ರೀ ಆರ್.ಜೆ