ಬೀಟ್‌ರೂಟ್‌ನ ಆರೋಗ್ಯ ಪ್ರಯೋಜನಗಳು ಹೀಗಿವೆ ನೋಡಿ

Beetroot health tips : ರಕ್ತ ಬಣ್ಣವನ್ನು ಬಿಂಬಿಸುವಂತಿರುವ ಬೀಟ್‌ರೂಟ್‌ ತರಕಾರಿಯ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಬೀಟ್‌ರೂಟ್‌(Beetroot) ಸೇವನೆಯಿಂದ ನಮ್ಮ ದೇಹಕ್ಕೆ (Health benefits of Beetroot) ದೊರೆಯುವ ಲಾಭಾಂಶಗಳ ಮಾಹಿತಿ.

ನಮ್ಮ ದಿನನಿತ್ಯದ ಆಹಾರ ಪಟ್ಟಿಯಲ್ಲಿ ಬೀಟ್‌ರೂಟ್‌ ಬಳಸುವುದು ಅತೀ ಕಡಿಮೆ ಎಂದೇ ಹೇಳಬಹುದು.

ಯಾಕಂದರೆ ಬೀಟ್‌ರೂಟ್‌ ಬಳಸಿ ಮಾಡುವ ಅಡುಗೆ ಎಂದರೆ ಅದು ಬೀಟ್ರೂಟ್ ಪಲ್ಯ ಅಥವಾ ಬೀಟ್‌ರೂಟ್‌ ಗೊಜ್ಜು.

ಈ ಪಲ್ಯವನ್ನು ಹೆಚ್ಚಾಗಿ ಬೆಳಗಿನ ಉಪಹಾರ ದೋಸೆ, ಚಪಾತಿ, ಪರೋಟ ಜೊತೆಗೆ ಸೇವನೆ ಮಾಡುವುದು ಸಾಮಾನ್ಯವಾಗಿದೆ.

ಇದನ್ನು ಹೊರೆತುಪಡಿಸಿದರೆ ಕೆಲವರು ಬೀಟ್‌ರೂಟ್‌ ಅನ್ನು ಉದ್ದವಾಗಿ ಕತ್ತರಿಸಿ ಹಸಿಯಾಗಿ ಸೇವಿಸುತ್ತಾರೆ. ಈ ಮೂಲಕ ಇದನ್ನು ತಮ್ಮ ಡೈಯೆಟ್‌ಗೆ ಸೇರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಹೌದು ಎಂದು ಹೇಳಲು ನನಗೆ ಕನಿಷ್ಠ 7-8 ವರ್ಷಗಳು ಬೇಕಾಯ್ತು : ನಟಿ ಹನ್ಸಿಕಾ ಮೋಟ್ವಾನಿ

ಬೀಟ್ರೂಟ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬೀಟ್‌ರೂಟ್‌ ನೈಟ್ರೇಟ್ಗಳನ್ನು ಹೊಂದಿರುತ್ತದೆ.

ಅಂದರೆ ಅವು ನಮ್ಮ ದೇಹದ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತವೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಕೇವಲ ಒಂದು ಗ್ಲಾಸ್ ಬೀಟ್‌ರೂಟ್‌ ರಸವನ್ನು ಕುಡಿಯುವುದರಿಂದ ಅಥವಾ ಅದೇ ಪ್ರಮಾಣದಲ್ಲಿ ತಿನ್ನುವುದರಿಂದ ರಕ್ತದೊತ್ತಡವನ್ನು

ಗಮನಾರ್ಹ 4-5 mmHg ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವು ತಿಳಿಸಿಕೊಟ್ಟಿದೆ.

ಬೀಟ್ರೂಟ್ ಹೃದಯ ವೈಫಲ್ಯ ಮತ್ತು ಹೃದಯ ಕಾಯಿಲೆ ಇರುವವರಿಗೆ ಸಹಾಯಕಾರಿ : ಬೀಟ್‌ರೂಟ್‌ ಮತ್ತೊಂದು ಆರೋಗ್ಯ ಪ್ರಯೋಜನವೆಂದರೆ ಅದರ ನೈಟ್ರೇಟ್(Nitrate) ಮಟ್ಟಗಳು,

ಇದು ನಮ್ಮ ಹೃದಯವನ್ನು ಒಳಗೊಂಡಂತೆ ನಮ್ಮ ಸ್ನಾಯುಗಳಲ್ಲಿ ಹೆಚ್ಚಿದ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ.

ಒಂದು ಲೋಟ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಹೃದಯ ವೈಫಲ್ಯದ ರೋಗಿಗಳಲ್ಲಿ ಸ್ನಾಯುವಿನ ಶಕ್ತಿಯನ್ನು (Health benefits of Beetroot) ಸುಧಾರಿಸುತ್ತದೆ ಎಂದು ಹೇಳಲಾಗಿದೆ.

ಬೀಟ್ರೂಟ್ ಆರೋಗ್ಯಕರ ಯಕೃತ್ತನ್ನು ನಿರ್ವಹಿಸುತ್ತದೆ : ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಕುಡಿಯುವುದು ಅಥವಾ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಕೆಲವು ನಿರ್ವಿಶೀಕರಣ ಯಕೃತ್ತಿನ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.

ಇದು ಅಂಗವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಚರ್ಮದ ಆರೋಗ್ಯ ಕಾಪಾಡುತ್ತದೆ : ಬೀಟ್ರೂಟ್ ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಗಟ್ಟಬಹುದಾಗಿದೆ.

ಬೀಟ್ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡುತ್ತದೆ.

ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ರೂಡಿಸಿಕೊಳ್ಳುವುದರಿಂದ ಕಾಂತಿಯುತ ಚರ್ಮ ಪಡೆಯಬಹುದಾಗಿದೆ.


ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

Exit mobile version