ಏಲಕ್ಕಿ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಗೊತ್ತಾ ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ

Health Tips : ನಮ್ಮ ಸುತ್ತಮುತ್ತಲೇ ನಮ್ಮ ಆರೋಗ್ಯವನ್ನು (health-Benefits-of-cardamom) ಸರಿ ಮಾಡುವಂತಹ ಹಲವಾರು ಪದಾರ್ಥಗಳು ಇರುತ್ತವೆ. ಅದು ನಮ್ಮ ಮನೆಯಲ್ಲಿಯೇ ಸಿಗುತ್ತದೆ.

ಅಡುಗೆ ಮನೆಯಲ್ಲಿ ಸಿಗುವಂತಹ ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಒಂದು ಮಸಾಲೆ ಪದಾರ್ಥವನ್ನು ಬಳಸಿಕೊಂಡು ಹೇಗೆ ನಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ. ಏಲಕ್ಕಿಯನ್ನು (Cardamom) ನೀವೆಲ್ಲರೂ ಕೇಳಿರುತ್ತೀರಿ.

ಈ ಒಂದು ಏಲಕ್ಕಿ ಕಾಯಿಯನ್ನು ಆಯುರ್ವೇದದಲ್ಲಿ (health-Benefits-of-cardamom) ಕೂಡ ಹೆಚ್ಚಾಗಿ ಬಳಸುತ್ತಾರೆ.

ಯಾಕೆ ಅಂದರೆ ಏಲಕ್ಕಿ ಮನುಷ್ಯನ ಆರೋಗ್ಯ ಕಾಪಾಡುವುದರಲ್ಲಿ ಉತ್ತಮವಾಗಿದೆ ಮತ್ತು ಒಂದು ಏಲಕ್ಕಿ ಅದೆಷ್ಟೋ ಪ್ರಯೋಜನವನ್ನು ನಮ್ಮ ದೇಹಕ್ಕೆ ನೀಡುತ್ತದೆ.

ಅಡುಗೆಯಲ್ಲಿ ಏಲಕ್ಕಿಯನ್ನು ಬಳಸುವುದರಿಂದ ಅಡುಗೆಯ ರುಚಿ ಇನ್ನೂ ಹೆಚ್ಚುತ್ತದೆ ಮತ್ತು ಆರೋಗ್ಯವೂ ಕೂಡ ತುಂಬಾ ಚೆನ್ನಾಗಿ ಇರುತ್ತದೆ.

ಇದನ್ನೂ ಓದಿ : https://vijayatimes.com/dengue-cases-rise-in-up/

ಏಲಕ್ಕಿಯನ್ನು ಪ್ರತಿದಿನ ಊಟವಾದ ನಂತರ ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆಯಿಂದ ಮತ್ತು ಬೊಜ್ಜು ಕರಗುವಿಕೆ ಕೂಡ ತುಂಬಾನೇ ಉತ್ತಮವಾಗಿದೆ.

ಏಲಕ್ಕಿಯನ್ನು ಪ್ರತಿದಿನ ತಿನ್ನುವುದರಿಂದ ಹೊಟ್ಟೆ ಬಾವು ಕಡಿಮೆಯಾಗುತ್ತದೆ ಮತ್ತು ಗಂಟಲು ಉರಿ, ಹೊಟ್ಟೆ ಉರಿ ಸಮಸ್ಯೆಗೂ ಕೂಡ ಉತ್ತಮ ಔಷಧಿಯಾಗಿದೆ.

ಏಳು ದಿನಗಳ ಕಾಲ ಏಲಕ್ಕಿಯನ್ನು ಸೇವಿಸುತ್ತಾ ಬಂದರೆ ಪಚನಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ. ಹೊಟ್ಟೆ ಕೆಟ್ಟಿದ್ದರೆ ಏಲಕ್ಕಿಯನ್ನು ತಿನ್ನುವುದರಿಂದ ಈ ಒಂದು ಸಮಸ್ಯೆಯು ಕೂಡ ಅತಿ ಬೇಗ ನಿವಾರಣೆಯಾಗುತ್ತದೆ. ಮಕ್ಕಳ ಆರೋಗ್ಯ ಕಾಪಾಡುವುದರಲ್ಲಿ ಕೂಡ ಏಲಕ್ಕಿ ಒಂದು ಉತ್ತಮ ಔಷಧಿಯಾಗಿದೆ.

ಆದ್ದರಿಂದ ಈ ಒಂದು ಏಲಕ್ಕಿಯನ್ನು ಪುಡಿ ಮಾಡಿ ಮಕ್ಕಳಿಗೆ ಯಾವುದಾದರೂ ಒಂದು ರೂಪದಲ್ಲಿ ಕೊಡುತ್ತ ಬಂದರೆ ಮಕ್ಕಳ ಪಚನ ಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗೂ ಕೂಡ ಒಂದು ಉ`ತ್ತಮ ಔಷಧಿ.

ಆಯುರ್ವೇದದಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕೆ ಅಂದರೆ ಹಿಂದಿನ ಕಾಲದಿಂದಲೂ ಕೂಡ ಏಲಕ್ಕಿ ಕಾಯಿಗೆ ಅಷ್ಟು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ ನಮ್ಮ ಹಿರಿಯರು.

https://youtu.be/PklE3lxMxUE

ಯಾಕೆ ಅಂದರೆ ಆರೋಗ್ಯ ಸಮಸ್ಯೆಗೆ ಆದಷ್ಟು ಬೇಗ ಪರಿಹಾರವನ್ನು ಕೊಡುತ್ತದೆ. ಆದ್ದರಿಂದ ಸ್ನೇಹಿತರೇ ಪಚನಕ್ರಿಯೆ ಸರಿಯಾಗಿ ಆಗದೇ ಇದ್ದವರು ಹೊಟ್ಟೆ ಸಮಸ್ಯೆ ಇದ್ದವರು ಮತ್ತು ಹೊಟ್ಟೆ ಕೆಟ್ಟಿರುವ ಸಮಸ್ಯೆ ಇದ್ದವರು ಆರಂಭವಾಗಿ ಏಲಕ್ಕಿಯನ್ನು ಬಳಸಬಹುದು.

ಇದನ್ನೂ ಓದಿ : https://vijayatimes.com/monday-is-worst-day/

ಹೀಗೆ ಮಾಡುವುದರಿಂದ ನಿಜಕ್ಕೂ ಒಳ್ಳೆಯ ಫಲಿತಾಂಶ ನಮಗೆ ಸಿಗುತ್ತದೆ. ಆದ್ದರಿಂದ ಸುಲಭವಾಗಿ ಸಿಗುವಂತಹ ಏಲಕ್ಕಿಯನ್ನು ಬಳಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

Exit mobile version