ಮೂಲಂಗಿ ನಮ್ಮ ಆರೋಗ್ಯಕ್ಕೆಷ್ಟು ಪ್ರಯೋಜನಕಾರಿ ಗೊತ್ತಾ?

veggie

ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ವಯಸ್ಕರಿಗೂ ಕೂಡ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ಕೂಡ ಉತ್ತಮವಾದ ಆರೋಗ್ಯಭರಿತ ತರಕಾರಿ ಸೇವನೆ ಮಾಡುತ್ತಿದ್ದರು. ಆದರೆ ನವಯುಗದಲ್ಲಿ ವಯಸ್ಕರು ತರಕಾರಿಯ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಈಗ ಬರುತ್ತಿರುವ ತರಕಾರಿಗಳು ಕೂಡ ಕೆಮಿಕಲ್ ಭರಿತವಾಗಿದೆ. ಇದು ಕೂಡ ನಮ್ಮ ಆರೋಗ್ಯ ಕೆಡಿಸುವಲ್ಲಿ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಮೂಲಂಗಿ ಸೇವನೆ ಮಾಡುವುದರಿಂದ ಅನೇಕ ಖಾಯಿಲೆಗಳು ಮನುಷ್ಯರ ಹತ್ತಿರವೂ ಬರುವುದಿಲ್ಲ. ಹಾಗೆಯೇ ಮೂಲಂಗಿಯು ಮೂಲವ್ಯಾಧಿ ಮತ್ತು ಬಿಪಿಗೆ ಉತ್ತಮವಾದ ತರಕಾರಿಯಾಗಿದೆ. ಹೀಗೆ ಅನೇಕ ರೋಗಗಳನ್ನು ತಡೆಯುವ ಶಕ್ತಿ ಮೂಲಂಗಿಗಿದೆ.

ಪ್ರತಿ ಮಾರುಕಟ್ಟೆಯಲ್ಲೂ ಕೂಡ ಸರ್ವೆಸಾಮಾನ್ಯವಾಗಿ ಮೂಲಂಗಿಯು ಇದ್ದೇ ಇರುತ್ತದೆ. ಆದರೆ ಅದನ್ನು ಯಾರು ಕೂಡ ಖರೀದಿಸಲು ಹೋಗುವುದಿಲ್ಲ. ಆದರೆ ಮೂಲಂಗಿಯನ್ನು ಸೇವಿಸುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ಅರಿತರೆ ಖಂಡಿತವಾಗಿಯೂ ನೀವು ಖರೀದಿಸುತ್ತೀರಾ. ಇನ್ನು ಕೆಲವರಿಗಂತೂ ಮೂಲಂಗಿಯನ್ನು ಕಂಡರೆ ಆಗುವುದಿಲ್ಲ. ಆದರೂ ನಮ್ಮ ಆರೋಗ್ಯದ ದೃಷ್ಟಿಯಿಂದ ಮೂಲಂಗಿ ಸೇವನೆ ಮಾಡುವುದು ಉಪಯುಕ್ತ.

ಹಾಗದರೆ ಮೂಲಂಗಿಯಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಮುಂದೆ ಓದಿ.

ನಮ್ಮ ದೇಹದಲ್ಲಿ ರೋಗ ತಡೆಗಟ್ಟುವ ಶಕ್ತಿ ಮೂಲಂಗಿಯಲ್ಲಿದೆ.
ಮೂಲಂಗಿಯನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀಳದ ಹಾಗೆ ನೋಡಿಕೊಳ್ಳುತ್ತದೆ.

ಜೀರ್ಣಕ್ರಿಯೆ ಸುಲಭವಾಗಿ ನಡೆಯುತ್ತದೆ. ಮೂಲಂಗಿಯನ್ನು ಸೇವಿಸುವುದರಿಂದ ಊಟದ ನಂತರ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ. ತೂಕ ಹೆಚ್ಚಳವನ್ನು ತಪ್ಪಿಸಬಹುದು. ಆರೋಗ್ಯಕರವಾದ ಮೂಲಂಗಿ ಪದಾರ್ಥವನ್ನು ಸೇವಿಸುವುದರಿಂದ ದೇಹದ ತೂಕವನ್ನು ಇಳಿಸುತ್ತದೆ. ಇನ್ನು ಕೆಲವರು ಬಹಳ ದಪ್ಪ ಇದ್ದೇವೆ ಎಂದು ಕೊರಗುತ್ತಿರುತ್ತಾರೆ. ಆದರೆ ಮೂಲಂಗಿಯ ಸೇವನೆಯಿಂದ ತಮ್ಮ ದೇಹದ ತೂಕವನ್ನು ಕೂಡ ಇಳಿಸಬಹುದು.

ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೂಲಂಗಿ ಸೇವನೆಯಿಂದ ರಕ್ತ ಸಂಚಾರವು ಸರಾಗವಾಗಿ ನಡೆದು ರಕ್ತದ ಒತ್ತಡದ ಸಮಸ್ಯೆಯನ್ನು ಆದಷ್ಟು ಹತೋಟಿಗೆ ತರುತ್ತದೆ. ಬಿಪಿ ಮತ್ತು ಮೂಲವ್ಯಾಧಿಯನ್ನು ತಡೆಗಟ್ಟುವ ಸಾಮರ್ಥ್ಯ ಮೂಲಂಗಿಗಿದೆ. ಹಿಂದಿನ ಕಾಲದಲ್ಲಿ ಎಲ್ಲರೂ ಕೂಡ ಮೂಲಂಗಿ ಮತ್ತು ಇನ್ನಿತರ ತರಕಾರಿಗಳ ಸೇವನೆಯನ್ನು ಮಾಡುತ್ತಿದ್ದರು ಮತ್ತು ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿರಲಿಲ್ಲ.

ಹೆಚ್ಚಾಗಿ ಈ ಮೂಲವ್ಯಾಧಿ ಮತ್ತು ಬಿಪಿ ಸಮಸ್ಯೆಗಳು ಹಿರಿಯರಲ್ಲಿ ಕಂಡುಬರುತ್ತಿತ್ತು. ಆದರೆ ಇಂದಿನ ದಿನದಲ್ಲಿ ವಯಸ್ಕರಿಗೆ ಕೂಡ ಹೈ ಬಿಪಿ ಮತ್ತು ಮೂಲವ್ಯಾಧಿಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಮೂಲಂಗಿಯನ್ನು ತುರಿದು ಅದರ ರಸವನ್ನು ಶೇಖರಿಸಿ ಕುಡಿಯುವುದರಿಂದ ಇಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಇದು ಸ್ವಲ್ಪ ಕಹಿ ಇರುವುದರಿಂದ ಮೊದಲಿಗೆ ಸ್ವಲ್ಪವೇ ಕುಡಿಯಿರಿ. ಆನಂತರ ದಿನ ಹೋದಂತೆ ಕ್ರಮೇಣ ಒಂದು ಕಪ್ ಅಥವಾ 2 ಕಪ್ ಕುಡಿಯಲು ಪ್ರಾರಂಭಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಇನ್ನೂ ಹೆಚ್ಚುತ್ತದೆ.

ಮೂಲಂಗಿಯ ರಸದಲ್ಲಿರುವ ಪೋಷಕಾಂಶಗಳು ಹಸಿವನ್ನು ಹೆಚ್ಚಿಸುತ್ತದೆ. ಸರ್ವೇ ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಈ ವಯಸ್ಕರೆಲ್ಲರೂ ಕೂಡಾ ಹೊರಗಿನ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಹಸಿವು ಇಲ್ಲದಂತಾಗುತ್ತದೆ. ಆದರೆ ಮೂಲಂಗಿಯ ರಸ ಅಥವಾ ಮೂಲಂಗಿಯನ್ನು ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಕರುಳಿನ ಭಾಗವೂ ಕೂಡಾ ಶುದ್ಧವಾಗುತ್ತದೆ. ಊಟ ಮಾಡುವಾಗ ಹಸಿ ಮೂಲಂಗಿಯನ್ನು ಸೇವಿಸಿದರೆ ಕಣ್ಣು, ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಗೊಳ್ಳುತ್ತದೆ. ಹಸಿ ಮೂಲಂಗಿಯನ್ನು ಸೇವಿಸುವುದರಿಂದ ಅನೇಕ ಉಪಯೋಗಗಳಿವೆ.

ಮೂತ್ರಕೋಶ ಮತ್ತು ಮೂತ್ರಪಿಂಡಗಳ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೂಲಂಗಿಯ ರಸವನ್ನು ಕುಡಿದರೆ ಮೂತ್ರಕೋಶದಲ್ಲಿ ಕಲ್ಲು ಅಥವಾ ಬೇರೆ ತೊಂದರೆಗಳಿದ್ದರೆ ಆ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ. ಮೂಲಂಗಿಯು ಕ್ಯಾನ್ಸರ್ ಅನ್ನು ತಡೆಗಟ್ಟಲು ಉಪಯುಕ್ತವಾಗಿದೆ. ಮೂಲಂಗಿಯಲ್ಲಿ ಕಂಡುಬರುವ ಐಸೊಥಿಯೊಸೈನೇಟ್ಗಳು ಕ್ಯಾನ್ಸರ್ ಅನ್ನು ತಡೆಗಟ್ಟಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಸಿ ಮೂಲಂಗಿಯನ್ನು ರುಬ್ಬಿ ಮಿಶ್ರಣ ಮಾಡಿ ಅದರೊಟ್ಟಿಗೆ ನಿಂಬೆರಸ ಮತ್ತು ಉಪ್ಪನ್ನು ಹಾಕಿ ಸೇವಿಸುವುದರಿಂದ ಕಾಮಾಲೆ ರೋಗ ಮತ್ತು ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ.

ಮೂಲಂಗಿ ಮಾತ್ರವಲ್ಲದೆ ಮೂಲಂಗಿಯ ಎಲೆಗಳು ಕೂಡ ಆರೋಗ್ಯಕ್ಕೆ ಬಹಳ ಉಪಯುಕ್ತ. ಮೂಲಂಗಿಯ ಎಲೆಯ ರಸವನ್ನು ಕುಡಿಯುವುದರಿಂದ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ನಿವಾರಣೆಯಾಗುತ್ತದೆ. ಮೂಲಂಗಿಯನ್ನು ಸೇವಿಸುವುದರಿಂದ ಕೂದಲಿನ ಹೊಳಪು ಕೂಡ ಹೆಚ್ಚುತ್ತದೆ. ಹೆಚ್ಚಿನ ಹೆಣ್ಣುಮಕ್ಕಳಿಗೆ ಕೂದಲಿನ ಮೇಲೆ ಬಹಳ ವಿಶೇಷವಾದ ಪ್ರೀತಿ ಇರುತ್ತದೆ. ಅದನ್ನು ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತವರು ಈ ಮೂಲಂಗಿ ಸೇವನೆ ಮಾಡುವುದರಿಂದ ನಿಮ್ಮ ಕೂದಲು ಹೊಳಪು ಉಪಯುಕ್ತವಾಗುತ್ತದೆ.

ಮಕ್ಕಳಿಗೆ ಹಸಿ ಮೂಲಂಗಿಯನ್ನು ತಿನಿಸುವುದರಿಂದ ಅವರ ಬುದ್ಧಿಶಕ್ತಿ ಮತ್ತು ಜ್ಞಾನ ಹಿತವಾಗುತ್ತದೆ. ಸಾಮಾನ್ಯವಾಗಿ ಹೆತ್ತವರಿಗೆ ತಮ್ಮ ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸಲು ತಮ್ಮ ಪ್ರಯತ್ನಗಳನ್ನು ಮಾಡುತ್ತಾರೆ. ಅವರೆಲ್ಲ ಕೂಡ ಈ ಸೇವನೆ ಮಾಡುವುದರಿಂದ ಮಕ್ಕಳ ಬುದ್ಧಿಶಕ್ತಿ ಮತ್ತು ಜ್ಞಾನ ಹೆಚ್ಚುತ್ತದೆ.

ಹೀಗೆ ಅನೇಕ ರೀತಿಯಲ್ಲಿ ಮೂಲಂಗಿಯು ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಆರೋಗ್ಯದ ದೃಷ್ಟಿಯಲ್ಲಿ ಸಹಕಾರಿಯಾಗಿದೆ.
ತರಕಾರಿಯನ್ನು ಖರೀದಿಸುವುದರ ಜೊತೆಗೆ ಮೂಲಂಗಿಯನ್ನೂ ಖರೀದಿಸಿ ಅದನ್ನು ಸೇವಿಸಿದರೆ ಎಲ್ಲರೂ ಕೂಡ ಅದನ್ನು ಸೇವಿಸಿದರೆ ಪ್ರತಿಯೊಬ್ಬರು ಕೂಡ ತಮ್ಮ ಆರೋಗ್ಯ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು. ಮೂಲಂಗಿಯಲ್ಲಿ ಮುಖ್ಯವಾಗಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಗಳೆಲ್ಲವೂ ಕೂಡ ದೇಹದ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.

Exit mobile version