Betel Nut : ಕೇವಲ ಶುಭಕಾರ್ಯಗಳಲ್ಲಷ್ಟೇ ಅಲ್ಲ, ಕೆಲವು ಆರೋಗ್ಯದ ಸಮಸ್ಯೆಗಳಿಗೂ ರಾಮಬಾಣ ಈ ಅಡಿಕೆ!

Betel

India : ನಮ್ಮ ದೇಶದಲ್ಲಿ ಪ್ರತಿಯೊಂದು ಶುಭ ಕಾರ್ಯಗಳಲ್ಲೂ ಅಡಿಕೆಗೆ(Betel Nut) ಅಗ್ರ ಸ್ಥಾನವಿದೆ. ಮಂಗಳದ್ರವ್ಯವಾಗಿ ವಿಶೇಷ ಸ್ಥಾನ ಪಡೆದಿರುವ ಅಡಿಕೆ, ಔಷದೀಯ ಗುಣಗಳಿಂದಲೂ ಸಮೃದ್ಧವಾಗಿದೆ. ಹೌದು, ಹಿತಮಿತವಾದ ಅಡಿಕೆ ಸೇವನೆಯಿಂದ ಈ ಕೆಳಗಿನ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.


ಅಡಿಕೆಯು ಒಗರು ರುಚಿ ಹೊಂದಿದ್ದು, ಕೆಮ್ಮು, ಕಫ, ಜಂತುಬಾದೆ, ಬೊಜ್ಜು, ರಕ್ತಹೀನತೆ, ಬಾಯಿಹುಣ್ಣು, ದಂತರೋಗಗಳು, ಹುಳಿತೇಗು, ಅತಿಮೂತ್ರದಂತಹ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಅಡಿಕೆಯ ಕಷಾಯದಿಂದ ಬಾಯಿಯ ದುರ್ವಾಸನೆ, ಬಾಯಿಹುಣ್ಣು ಶಮನಗೊಂಡು, ಬಾಯಿ ಮತ್ತು ಗಂಟಲು ಶುದ್ದವಾಗುತ್ತದೆ.

ಆಹಾರ ರುಚಿಸುತ್ತದೆ. ಹಲ್ಲುಗಳಲ್ಲಿನ ಸೋಂಕು, ಹಲ್ಲು ನೋವು ಮತ್ತು ಹಲ್ಲಿನ ಹುಳುಕಿಗೆ ಅಡಿಕೆಯ ಕಷಾಯ ಉತ್ತಮ ಔಷಧಿ. ಅಡಿಕೆಯನ್ನು ಊಟದ ನಂತರ ಸೇವಿಸುವುದರಿಂದ, ಆಹಾರವನ್ನು ಜೀರ್ಣಗೊಳಿಸಲು ಸಹಕಾರಿಯಾಗುತ್ತದೆ. ಅತಿಯಾದ ಭೋಜನದ ನಂತರ ಆಗುವ ಆಲಸ್ಯ, ಅಜೀರ್ಣ, ಹೊಟ್ಟೆ ಉಬ್ಬರದಂತಹ ಲಕ್ಷಣಗಳನ್ನು ತಡೆಯುತ್ತದೆ.

ಇದನ್ನೂ ಓದಿ : https://vijayatimes.com/congress-slams-state-bjp-ministers/


ಅವಶ್ಯ ಪ್ರಮಾಣದ ಸುಣ್ಣದೊಂದಿಗೆ ಅಡಿಕೆ ಮತ್ತು ವೀಳ್ಯೆದೆಲೆಯನ್ನು(Betel Leaf) ಸೇವಿಸುವುದರಿಂದ ದೇಹಕ್ಕೆ ಕ್ಯಾಲ್ಶಿಯಂ ಅಂಶ ಲಭ್ಯವಾಗುತ್ತದೆ. ಇದು, ಮೂಳೆಸವೆತದಿಂದಾಗುವ ನೋವು ಮತ್ತು ಮೂಳೆ ಸಂಬಂಧಿ ವಿಕಾರವನ್ನು ಕಡಿಮೆಗೊಳಿಸಿ, ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ.


ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಒಸಡಿನ ರಕ್ತಸ್ರಾವದ ಚಿಕಿತ್ಸೆಗೆ ಇದು ಉಪಯುಕ್ತ. ಹಲವು ಸಂಶೋಧನೆಗಳ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ಧೀಕರಿಸಲು ಸಹಕರಿಸುತ್ತದೆ.

Exit mobile version