ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Health Tips : ಅನಿಯಂತ್ರಿತ ಮಧುಮೇಹವು(Health Of Kidney) ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡಗಳಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.

ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವ ಮೂತ್ರಪಿಂಡದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮಧುಮೇಹದ ಈ ಗಂಭೀರ ತೊಡಕುಗಳನ್ನು ಡಯಾಬಿಟಿಕ್ ನೆಫ್ರೋಪತಿ ಎಂದು ಕರೆಯಲಾಗುತ್ತದೆ.

ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.

ಮೂತ್ರಪಿಂಡಗಳು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ರಕ್ತದಿಂದ ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕುವ ಮೂಲಕ ದೇಹದೊಳಗೆ ಸಮತೋಲನವನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ.

ಇನ್ನು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ 2026ರ ವೇಳೆಗೆ ಮೂತ್ರಪಿಂಡ ಕಾಯಿಲೆಯ ಹರಡುವಿಕೆಯು 0.7 ರಿಂದ 3% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : https://vijayatimes.com/highcourt-dismissed-kantara-petition/

ಮಧುಮೇಹದಿಂದ ಬಳಲುತ್ತಿರುವ ಜನರು ಮೂತ್ರಪಿಂಡದ ಕಾಯಿಲೆಗೆ ತುತ್ತಾಗುವ ಅಪಾಯವನ್ನು 40% ವರೆಗೆ ಹೊಂದಿರುತ್ತಾರೆ.

ಆದ್ದರಿಂದ, ಮಧುಮೇಹಿಗಳಲ್ಲಿ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಎದುರಿಸಲು ಕೆಲವು ಅಭ್ಯಾಸಗಳನ್ನು ಅನುಸರಿಸುವುದು ಬಹಳ ಮುಖ್ಯ. ಪ್ರತಿನಿತ್ಯ ನಾವು ಅನುಸರಿಸಬೇಕಾದ ಕೆಲ ಅಭ್ಯಾಸಗಳ ವಿವರ ಇಲ್ಲಿದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ : ಕಟ್ಟುನಿಟ್ಟಾದ ರಕ್ತದಲ್ಲಿನ ಗ್ಲೂಕೋಸ್ (ಬಿಜಿ) ನಿಯಂತ್ರಣವು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಸ್ತಿತ್ವದಲ್ಲಿರುವ ಮೂತ್ರಪಿಂಡದ ಕಾಯಿಲೆಯ ಪ್ರಗತಿಯನ್ನು ತಡೆಯುತ್ತದೆ. ಆಹಾರ, ವ್ಯಾಯಾಮ ಮತ್ತು ಔಷಧಿಗಳ ಸಂಯೋಜನೆಯಿಂದ  ಮಧುಮೇಹವನ್ನು ನಿಯಂತ್ರಿಸಬೇಕು.

ರಕ್ತದೊತ್ತಡ ನಿಯಂತ್ರಣ : ಅನೇಕ ಮಧುಮೇಹಿಗಳು ಅಧಿಕ ರಕ್ತದೊತ್ತಡವನ್ನು (ಬಿಪಿ) ಹೊಂದಿರುತ್ತಾರೆ. ಇದು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಉತ್ತಮ ಬಿಪಿ ನಿಯಂತ್ರಣವು ಮಧುಮೇಹಿಗಳಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬಿಪಿಯನ್ನು 130/80 ಕ್ಕಿಂತ ಕಡಿಮೆ ಇಡುವ ಗುರಿಯನ್ನು ಹೊಂದಿರಬೇಕು.

ಇದನ್ನೂ ಓದಿ : https://vijayatimes.com/temple-denies-permission/

ತಂಬಾಕಿನಿಂದ ದೂರವಿರಿ : ಯಾವುದೇ ರೂಪದಲ್ಲಿ ತಂಬಾಕು ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುವುದಲ್ಲದೆ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ತಂಬಾಕು ಸೇರಿದಂತೆ ಇತರ ಧೂಮಪಾನಗಳಿಂದ ದೂರವಿರಬೇಕು.

ಇದನ್ನೂ ಓದಿ : https://vijayatimes.com/give-that-power-to-me/

ಜೀವನಶೈಲಿ ಮಾರ್ಪಾಡುಗಳು : ನಿಯಮಿತ ವ್ಯಾಯಾಮ, ಕಡಿಮೆ ಉಪ್ಪು ಸೇವನೆ ಮತ್ತು ಸರಿಯಾದ ಬಾಡಿ ಮಾಸ್ ಇಂಡೆಕ್ಸ್‌ನೊಂದಿಗೆ ತೂಕ ನಿರ್ವಹಣೆ ಮಧುಮೇಹಿಗಳಲ್ಲಿ ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲ್ಲದೆ, ಅಸ್ತಿತ್ವದಲ್ಲಿರುವ ಮೂತ್ರಪಿಂಡದ ಕಾಯಿಲೆಯ ಸಂದರ್ಭದಲ್ಲಿ ಕಡಿಮೆ ಪ್ರೋಟೀನ್ ಸೇವನೆ ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸುವುದನ್ನು ಸಹ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ : https://vijayatimes.com/india-produces-16-lakh-jobs/

ಔಷಧಗಳು : ಮೇಲಿನ ಕ್ರಮಗಳ ಹೊರತಾಗಿ, ಎಲ್ಲಾ ಮಧುಮೇಹ ರೋಗಿಗಳಿಗೆ ಎರಡು ಗುಂಪುಗಳ ಔಷಧಿಗಳನ್ನು ನೀಡಬೇಕು. ಇದು ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟಲು ಅಥವಾ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.

Exit mobile version