Health Tips : ಸರಿಯಾದ ಕ್ರಮದಲ್ಲಿ ಉಪವಾಸ ಮಾಡುವುದು ಹೇಗೆ? ಇಲ್ಲಿದೆ ವಿವರ

Health Tips : ಉಪವಾಸ (Fasting) ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿಮುಖ್ಯ. ಆದರೆ ಉಪವಾಸ ಮಾಡುವಾಗ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ತಿಳಿಯಬೇಕು.

ಇತ್ತೀಚಿನ ದಿನಗಳಲ್ಲಿ ಅನೇಕರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ (Health Tips For Fasting) ಅನುಸರಿಸುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಹೀಗಾಗಿ ಆರೋಗ್ಯಕರ ಉಪವಾಸ ಹೇಗಿರಬೇಕೆಂಬುದರ ವಿವರ ಇಲ್ಲಿದೆ ನೋಡಿ : ನಮ್ಮ ದೇಹವು ತಿನ್ನಲು, ಮಲಗಲು ಮತ್ತು ಏಳಲು ತನ್ನದೇ ಆದ ಗಡಿಯಾರ ಮತ್ತು ಸ್ಮರಣೆಯನ್ನು ಹೊಂದಿದೆ.

ಅದಕ್ಕೆ ತಕ್ಕಂತೆ ಉಪವಾಸ ಮಾಡಬೇಕು. ಉಪವಾಸದ ಸಮಯ ಮತ್ತು ಚಕ್ರವನ್ನು ಬದಲಿಸದಿರುವುದು ಬಹಳ ಮುಖ್ಯ. ಒಂದೇ ಸಮಯ ಮತ್ತು ಚಕ್ರವನ್ನು ಪಾಲಿಸಬೇಕು.

https://fb.watch/g3DIiMjR2t/

ನಮ್ಮ ದೇಹಕ್ಕೆ ಹೊಂದುವಂತಹ 12-14-16 ಗಂಟೆಗಳ ಉಪವಾಸವನ್ನು ಅನುಸರಿಸುವುದು ಉತ್ತಮ. ನೀರಿನ ಸೇವನೆ ಮೂಲಕ ಮಾತ್ರ ಉಪವಾಸ ಮಾಡಬೇಕು. ಕೆಲವರು ವಾರಾಂತ್ಯದಲ್ಲಿ ಅತಿಯಾಗಿ ತಿನ್ನುತ್ತಾರೆ.

ನಂತರ ಎರಡು ದಿನಗಳವರೆಗೆ ಉಪವಾಸವಿರುತ್ತಾರೆ. ಆದರೆ, ಇದು ಸರಿಯಲ್ಲ. ಹೀಗೆ ಮಾಡಿದರೆ ಅಸಿಡಿಟಿ ಉಂಟಾಗುತ್ತದೆ.

ಪ್ರತಿದಿನ ಉಪವಾಸ ಮಾಡಬೇಕಾಗಿಲ್ಲ. ದೇಹದ ಸ್ಥಿತಿಯನ್ನು ಅವಲಂಬಿಸಿ ವಾರಕ್ಕೆ ಎರಡು ಬಾರಿ ಅಥವಾ ತಿಂಗಳಿಗೆ ಎರಡು ಬಾರಿ ಮಾಡಬಹುದು. ಐದು ದಿನಗಳ ಕಾಲ ಪೋಷಕಾಂಶ ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಿ ಮತ್ತು ವಾರದಲ್ಲಿ ಎರಡು ದಿನ ನೀರು ಸೇವಿಸಿ ಉಪವಾಸ ಮಾಡಿ.

ಕೆಲವರು ಒಂದು ದಿನ ಊಟದ ನಂತರ ತಮ್ಮ ಉಪವಾಸವನ್ನು (Health Tips For Fasting) ಪ್ರಾರಂಭಿಸುತ್ತಾರೆ, ಎರಡನೇ ದಿನ ಊಟದ ನಂತರ ಮತ್ತು ಮೂರನೇ ದಿನ ಊಟವಿಲ್ಲದೆಯೇ ಉಪವಾಸ ಮಾಡುತ್ತಾರೆ. ಇದು ಉತ್ತಮವಲ್ಲ. ತಡರಾತ್ರಿಯ ಪಾರ್ಟಿಗಳನ್ನು ಸರಿದೂಗಿಸಲು ಉಪವಾಸ ಮಾಡುವುದು ಸೂಕ್ತವಲ್ಲ.

ಇದನ್ನೂ ಓದಿ : https://vijayatimes.com/rahul-gandhi-knows-the-future/

ಚಹಾ (Tea) ಅಥವಾ ಕಾಫಿ (Coffee) ಸೇವನೆಯೊಂದಿಗೆ ಉಪವಾಸವನ್ನು ಮುರಿಯಬಾರದು. ಏಕೆಂದರೆ, ಚಹಾ ಅಥವಾ ಕಾಫಿ ಆಮ್ಲೀಯ ಸ್ವಭಾವವನ್ನು ಹೊಂದಿರುತ್ತವೆ.

ಇವು ದೀರ್ಘಾವಧಿಯಲ್ಲಿ ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರ ಮೂಲಕ ಉಪವಾಸವನ್ನು ಕೊನೆಗೊಳಿಸಬೇಕು. ಉಪವಾಸದ ಕ್ರಮವನ್ನು ನಿಯಮಿತವಾಗಿ ಪಾಲಿಸಬೇಕು.

Exit mobile version