ಬಾಣಂತಿಯರ ಪಾಲಿನ ಸಂಜೀವಿನಿ ಅಳವಿ ಬೀಜ: ರೋಗ ನಿರೋಧ ಶಕ್ತಿ ಹೆಚ್ಚಿಸುವ ಅದ್ಭುತ ವರ

Halim Seeds:ಆಳ್ವಿ, ಅಳವಿ ಮತ್ತು ಆಳವಿ ಬೀಜಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿವೆ. ಉದಾ : ಕಬ್ಬಿಣ,ಪೈಬರ್ ,ಪೋಲೆಟ್ ವಿಟಮಿನ್ ಎ, ಸಿ. ಇ ಮತ್ತು ಪ್ರೊಟೀನ್ ಸಮೃದ್ಧವಾಗಿವೆ. ಆರೋಗ್ಯ ತಜ್ಞರು ಇದನ್ನು (health tips for pregnancy) ಸೂಪರ್ ಫುಡ್ ಅಂತಾ ಹೇಳಿದ್ದಾರೆ.ಇದು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಅದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮೂಳೆಗಳನ್ನು ಬಲಗೊಳಿಸುತ್ತವೆ. ಈ ಆಳವಿ ಬೀಜಗಳು ಚಿಕ್ಕದಾದರೂ ದೊಡ್ಡದೆಂಬತೆ ಕೆಲಸ ಮಾಡುತ್ತವೆ.

ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಆಳವಿ ಬೀಜವು ನಮ್ಮ ದೇಹದಲ್ಲಿ ಯಾವ ರೀತಿಯ ಚಮತ್ಕಾರವನ್ನು ಮೂಡಿಸಲಿದೆ ಎಂಬುವುದನ್ನು ಉಪಯೋಗಗಳ ಮೂಲಕ ತಿಳಿಯೋಣ.

ಆಳವಿ ಬೀಜದ ಸೇವನೆಯಿದ ದೇಹಕ್ಕೆ ಆಗುವ ಪ್ರಯೋಜನಗಳು:

ಮಹಿಳೆಯರ ಸಮಸ್ಯೆಗೆ ರಾಮಬಾಣ :
ಹೆಣ್ಣು ಮಕ್ಕಳು ಋತುಮಾತಿಯಾದ ಸರ‍್ಭಗದಲ್ಲಿ ಈ ಆಳವಿ ಬೀಜಗಳಿಂದ ಮಾಡಿದ ಪಾಯಸವನ್ನು ಕುಡಿದರೆ ಅವರಿಗೆ ಸೊಂಟ ನೋವು,

ಕೈ ಕಾಲು ನೋವು ಬರುವುದಿಲ್ಲ. ಋತುಚಕ್ರದಲ್ಲಿ ಹರ‍್ಮೋನ್ ಏರಿಳಿತ ಆಗುವುದಿಲ್ಲ. ಆಳವಿ ಬೀಜಗಳಿಂದ ತಯಾರಿಸಿದ ಉಂಡೆಗಳ ಸೇವನೆಯಿಂದ ಮಹಿಳೆಯರ ಅನೇಕ ಸಮಸ್ಯೆಗಳನ್ನು ಹೋಗಲಾಡಿಸ ಬಹುದಾಗಿದೆ.

ಹೆಚ್ಚಿದ ತೂಕ ನಿಯಂತ್ರಣ :
ಮನುಷ್ಯನ ದೇಹದಲ್ಲಿ ತೂಕದ ಸಮಸ್ಯೆ ಇತ್ತೀಚಿಗೆ ದೊಡ್ಡ ಸಮಸ್ಯೆಯಾಗಿದೆ . ಅತಿಯಾದ ತೂಕದಿಂದ ಮನುಷ್ಯ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆ.

ಆಳವಿ ಬೀಜಗಳಲ್ಲಿ ಪೈಬರ್ ಮತ್ತು ಪ್ರೊಟೀನ್ ಅಂಶಗಳು ಸಮೃದ್ಧವಾಗಿದ್ದು ಇದರ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಅದಲ್ಲದೆ ಬೇಗನೆ ಹಸಿವಾಗುವುದಿಲ್ಲ. ಇದರಿಂದಾಗಿ ತೂಕವನ್ನು ನಿಯಂತ್ರಿಸಬಹುದಾಗಿದೆ.

ಬಾಣಂತಿಯರ ಆರೈಕೆಯಲ್ಲಿ ಆಳವಿ ಬೀಜಗಳ ಪ್ರಾಮುಖ್ಯತೆ : ಆಳವಿ ಬೀಜಗಳು ಖನಿಜಾಂಶಗಳ ಆಗರವಾಗಿದ್ದು, ಬಾಣಂತಿಯರಿಗೆ ಹೆರಿಗೆ ನೋವು ನಿವಾರಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ನರ‍್ವಹಿಸುತ್ತದೆ.. ಹಾಗೂ ತಾಯಿಯಲ್ಲಿ ಎದೆ ಹಾಲು ಹೆಚ್ಚಿಸಲು ಆಳವಿ ಬೀಜದ ಪಾಯಸ ಉಪಯುಕ್ತವಾಗಿದೆ.

Halim Kheer


ಆಳವಿ ಬೀಜದ ಪಾಯಸ ಮಾಡುವ ವಿಧಾನ :

ರಾತ್ರಿ ಮಲಗುವ ಮುನ್ನ ಒಂದು ಟಿ ಚಮಚದಷ್ಟು ಆಳವಿ ಬೀಜವನ್ನು ತೊಳೆದು ಒಂದು ಲೋಟದಲ್ಲಿ ನೆನಸಿಡಿ. ಮರುದಿನ ಬೆಳಗ್ಗೆ ಅದನ್ನು ಒಂದು ಪಾತ್ರೆಗೆ ಹಾಕಿ ನೀರು (health tips for pregnancy) ಹಾಕಿ ಒಲೆ ಅಥವಾ ಗ್ಯಾಸ ಮೇಲಿಟ್ಟು ಸುಮಾರು ೧೦ – ೧೫ ನಿಮಿಷಗಳ ಕಾಲ ಕುದಿಸಿ ನಂತರ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ,

ಬೆಲ್ಲ ಕರಗುವವರೆಗೂ ಕುದಿಸಿ ಆರಿಸಿರಿ. ನಂತರ ಅದಕ್ಕೆ ಹಾಲು, ತುಪ್ಪ ಸೇರಿಸಿ ಸೇವಿಸಬೇಕು. ಇದನ್ನು ಬಾಣಂತಿಯರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಹಳ್ಳಿಗಳಲ್ಲಿ ಕೊಡುತ್ತಾರೆ.

ಇದರ ಸೇವನೆಯಿಂದಾಗಿ ಬಾಣಂತಿಯರು ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಈ ಪಾಯಸವನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸೇವನೆ ಮಾಡಬಹುದಾಗಿದೆ.

ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ :
ಆಳವಿ ಬೀಜವು ಉರಿಯೂತ ನಿವಾರಣೆ ಮತ್ತು ಆಂಟಿರ‍್ಸಿಯನೋಜೇನಿಕ್ ಗುಣಲಕ್ಷಣಗಳುನ್ನು ಹೊಂದಿವೆ.

ಇದು ಉತ್ರ‍್ಷ್ಣ ನಿರೋಧಕಗಳ ಪೈಟೋಸ್ಟೆರಲ್ ಉತ್ತಮ ಮೂಲವಾಗಿರುವುದರಿಂದ, ಜೀವಕೋಶಗಳಿಗೆ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ಇದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದಾಗಿದೆ.

ಮಲಬದ್ಧತೆಯನ್ನು ನಿವಾರಿಸಲು ಸಹಾಯಕಾರಿ :
ಅಳವಿ ಬೀಜದಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಜರ‍್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆ ಮೂಲಕ ಕರುಳನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ..

ಮಲಬದ್ಧತೆ, ಗ್ಯಾಸ್, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಆಳವಿ ಬೀಜಗಳ ಸೇವನೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಮೂಳೆ ಮಾಂಸ ಖಂಡಗಳಿಗೆ ಶಕ್ತಿಯನ್ನು ಒದಗಿಸುತ್ತದೆ :
ಕೈ, ಕಾಲು ಮುರಿದುಕೊಂಡರೆ, ಒಂದು ವೇಳೆ ಮೂಳೆಗಳು ಕಟ್ಟಾಗಿದ್ದಾರೆ ಅಂತವರಿಗೆ ಈ ಆಳವಿ ಬೀಜದ ಪಾಯಸವನ್ನು ಕೆಲವು ತಿಂಗಳು ಕುಡಿಸುವುದರಿಂದ ಮೂಳೆಗಳ ಜೋಡಣೆಗೆ ಸಹಾಯ ಮಾಡುವುದಲ್ಲದೆ,

ಮಾಂಸ ಖಂಡಗಳನ್ನು ಬಲಗೊಳಿಸುತ್ತದೆ. ಆಳವಿ ಬೀಜದ ಉಂಡೆಗಳ ಸೇವನೆಯು ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯಮಾಡುತ್ತದೆ.

ಸೂಚನೆ : ನಾವು ಇದನ್ನು ಕೆಲವು ಬಲ್ಲ ಮೂಲಗಳಿಂದ ತಿಳಿಸಿದ್ದಿವೆ. ಉಪಯೋಗ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.

Exit mobile version