Tooth Ache : ಹಲ್ಲು ನೋವಿಗೆ ಇಲ್ಲಿದೆ ಸುಲಭ ಮನೆಮದ್ದು

Health : ಹಲ್ಲು(Teeth) ನೋವಿನ ಸಮಸ್ಯೆ ಕಾಣಿಸಿಕೊಂಡರೆ ಅಸಾಧ್ಯವಾದ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ, ಸುಲಭ ಮನೆಮದ್ದುಗಳ(Health Tips for Tooth ache) ಮೂಲಕ ಈ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.

ಲವಂಗ(Clove) : ಹಲ್ಲು ನೋವು ಮತ್ತು ವಸಡಿನ ಸಮಸ್ಯೆಗಳಿಗೆ ಲವಂಗ(Clove) ಅತ್ಯುತ್ತಮ ಮನೆಮದ್ದಾಗಿದೆ. ಲವಂಗದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್(Anti Bacterial) ಮತ್ತು ಆಂಟಿ ಫಂಗಲ್(Anti Fungal) ಗುಣಗಳು ಹಲ್ಲು ನೋವು ನಿವಾರಣೆಗೆ ಸಹಕಾರಿಯಾಗಿವೆ. ಲವಂಗವನ್ನು ಅಗಿದು ಹಲ್ಲು ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಶೀಘ್ರವೇ ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ : https://vijayatimes.com/difference-between-cheetah-and-leopard/

ಹೈಡ್ರೋಜನ್ಪೆರಾಕ್ಸೈಡ್(Hydrogen Peroxide) : ಹೈಡ್ರೋಜನ್ಪೆರಾಕ್ಸೈಡ್ನಿಂದ ಬಾಯಿ ಮುಕ್ಕಳಿಸಬೇಕು. ಹೈಡ್ರೋಜನ್ಪೆರಾಕ್ಸೈಡ್ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಅದರಿಂದ ಹಲ್ಲು ನೋವು ಕಡಿಮೆ ಮಾಡಿ, ವಸಡಿನ ರಕ್ತಸ್ರಾವವನ್ನು ನಿವಾರಿಸುತ್ತದೆ. ಆದರೆ ಈ ನೀರನ್ನು ನುಂಗಬಾರದು. ಇನ್ನು ಶೇಕಡಾ ೫೦ ಹೈಡ್ರೋಜನ್ಪೆರಾಕ್ಸೈಡ್ ಮತ್ತು ಶೇಕಡಾ 50ರಷ್ಟು ನೀರನ್ನು ಮಿಶ್ರಣ ಮಾಡಿ ಮುಕ್ಕಳಿಸಬೇಕು.

ಬೆಳ್ಳುಳ್ಳಿ(Garlic) : ಅತ್ಯುತ್ತಮ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಪ್ಯಾರಸಿಟಿಕ್ ಗುಣಗಳು ಹಲ್ಲು ನೋವನ್ನು ಕಡಿಮೆ ಮಾಡುತ್ತವೆ.

ಇದನ್ನೂ ಓದಿ : https://vijayatimes.com/yati-narasimhanand-controversial-statement/

ಉಪ್ಪು ನೀರು(Salt Water) : ಹಲ್ಲು ನೋವು ಕಾಣಿಸಿಕೊಂಡರೆ, ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ, ಬಾಯಿ ಮುಕ್ಕಳಿಸಬೇಕು. ಉಪ್ಪಿನಲ್ಲಿರುವ ಲವಣಾಂಶಗಳು ನೋವನ್ನು ಶಮನ ಮಾಡುವುದಕ್ಕೆ ಸಹಕಾರಿಯಾಗುತ್ತವೆ.

ವೆನಿಲ್ಲಾ ಎಸೆನ್ಸ್(Vanila Essence) : ಎರಡು ಹನಿ ವೆನಿಲ್ಲಾ ಎಸೆನ್ಸ್(Vanila Essence) ಅನ್ನು ಹಲ್ಲು ನೋವಿರುವ ಜಾಗಕ್ಕೆ ಹಚ್ಚಿ, ಅದರಿಂದ ನೋವು ಕಡಿಮೆಯಾಗುತ್ತದೆ. ದಿನಕ್ಕೆ 3-4 ಬಾರಿ ಹೀಗೆ ಮಾಡುವುದರಿಂದ ಹಲ್ಲು ನೋವಿನಿಂದ ಶೀಘ್ರವೇ ಪರಿಹಾರ ಕಂಡುಕೊಳ್ಳಬಹುದು.

Exit mobile version