Weight Gain : ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

weight gain

Health Tips : ಇತ್ತೀಚಿನ ದಿನಗಳಲ್ಲಿ ತೂಕ(Health Tips for Weight Gain) ಹೆಚ್ಚಿಸಿಕೊಳ್ಳಲು ಅನೇಕರು ಅಡ್ಡಮಾರ್ಗ ಹಿಡಿಯುತ್ತಿದ್ದು, ಇದರಿಂದ ಅನೇಕ ಅಡ್ಡ ಪರಿಣಾಮಗಳಿಗೆ ತುತ್ತಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಪ್ರೋಟಿನ್‌ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ.

ಈ ರೀತಿ ವೈದ್ಯರ ಸೂಚನೆ ಇಲ್ಲದೇ ತೆಗೆದುಕೊಳ್ಳುವ ಅಧಿಕ ಪ್ರೋಟಿನ್‌ನಿಂದ(Health Tips for Weight Gain) ಅನೇಕರಿಗೆ ಕಿಡ್ನಿ ವೈಫಲ್ಯದಂತ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಹೀಗಾಗಿ ತೂಕವನ್ನು ಹೆಚ್ಚಿಸಿಕೊಳ್ಳುವವರು ನೈಸರ್ಗಿಕ ಕ್ರಮಗಳನ್ನು ಮತ್ತು ನೈಸರ್ಗಿಕ ಆಹಾರಗಳನ್ನೇ ಸೇವಿಸಬೇಕು. ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಸೇವಿಸಬೇಕಾದ ಆಹಾರಗಳ ವಿವರ ಇಲ್ಲಿದೆ ನೋಡಿ.

https://youtu.be/iuTzZ2OMpYU ಅವರಿಗೆ ಯಾಕೆ ಭಯ ಬೀಳ್ಬೇಕು?

ಹಾಲಿನ ಉತ್ಪನ್ನಗಳು : ಕಡಿಮೆ ತೂಕ ಹೊಂದಿರುವವರು ಪ್ರೋಟೀನ್ ಯುಕ್ತ ಆಹಾರ ಸೇವಿಸಿದಾಗ ಸ್ನಾಯುಗಳಲ್ಲಿ ಕ್ಯಾಲೊರಿಗಳು ಸಂಗ್ರಹವಾಗುತ್ತವೆ. ಕೆಂಪು ಮಾಂಸ, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.

ದ್ವಿದಳ ದಾನ್ಯಗಳು : ದ್ವಿದಳ ಧಾನ್ಯಗಳು, ಬೀಜಗಳು, ಬೇಳೆಕಾಳುಗಳನ್ನು ದಿನನಿತ್ಯ ಆಹಾರದಲ್ಲಿ ಸೇವಿಸಬೇಕು.

ಕಾರ್ಬೋಹೈಡ್ರೇಟ್ ಆಹಾರಗಳು : ಕಾರ್ಬೋಹೈಡ್ರೇಟ್ ಅಧಿಕವಾಗಿರುವ ಆಹಾರವನ್ನು ಸೇವಿಸುವುದು ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವ ಅತ್ಯುತ್ತಮ ವಿಧಾನಗಳಲ್ಲಿ ಒಂದು. ಧಾನ್ಯಗಳು, ತೆಂಗಿನ ಎಣ್ಣೆ, ಮೊಟ್ಟೆ, ಸೂರ್ಯಕಾಂತಿ ಬೀಜದ ಎಣ್ಣೆ ಸೇವಿಸುವುದರಿಂದ ನೈಸರಿಕವಾಗಿ ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ : https://vijayatimes.com/sc-verdict-over-termination-pregnancy/

ನೀರು ಕುಡಿಯಿರಿ : ನೀರು ಕುಡಿಯುವುದರಿಂದ ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಆದರೆ ಆರೋಗ್ಯಕರ ತೂಕ ಹೊಂದಲು ನಿಮ್ಮ ಆಹಾರದಲ್ಲಿ ಪ್ರೋಟೀನ್ ಯುಕ್ತ ಪಾನೀಯಗಳನ್ನು ಸೇವಿಸಿ.

ತಿಂಡಿಯ ಜೊತೆ : ಪ್ರತಿದಿನ ತಪ್ಪದೇ ತಿಂಡಿಯ ಜೊತೆ ಪ್ರೋಟೀನ್ ಯುಕ್ತ ಪಾನೀಯಗಳು, ನಟ್ ಬಟರ್, ಬಾದಾಮಿ, ಗೋಡಂಬಿ, ಏಕದಳ ಬಾರ್ಗಳು, ಓಟ್ ಮೀಲ್, ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.

ಇತರೆ : ಆಲೂಗಡ್ಡೆ, ಡ್ರೈ ಫ್ರೂಟ್ಸ್, ಹಾಲು ತೂಕ ಹೆಚ್ಚಾಗಲು, ಸ್ನಾಯುಗಳ ಬೆಳವಣಿಗೆಗೆ ಒಳ್ಳೆಯದು. ಇದರಲ್ಲಿ ಕೊಬ್ಬುಗಳು, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಖನಿಜಾಂಶಗಳಿವೆ. ಇವುಗಳನ್ನು ನಿಯಮಿತವಾಗಿ ಸೇವಿಸಿ.

Exit mobile version