ಹಲವಾರು ಅರೋಗ್ಯ ಸಮಸ್ಯೆಗಳಿಗೆ ಪರಿಹಾರ ಈ ದಾಳಿಂಬೆ ಗಿಡದ ಎಲೆ!

Health Tips : ಸಮಸ್ತ ರೀತಿಯ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ದಾಳಿಂಬೆ(Pomegranate) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ದಾಳಿಂಬೆ ಹಣ್ಣು ಎಷ್ಟು ಉಪಯೋಗಕಾರಿಯೋ, ದಾಳಿಂಬೆ ಗಿಡದ ಎಲೆ ಕೂಡಾ ಅಷ್ಟೇ ಪ್ರಯೋಜನಕಾರಿ.

ಹೌದು, ದಾಳಿಂಬೆ ಗಿಡದ ಎಲೆಗಳು ಚಿಕ್ಕದಾಗಿದ್ದು, ನಯವಾಗಿರುತ್ತವೆ. ಜೊತೆಗೆ ಉಪಯುಕ್ತ ಔಷಧೀಯ ಗುಣಗಳಿಂದ ಕೂಡಿದೆ.


ದಾಳಿಂಬೆ ಎಲೆ, ಹೂವುಗಳು, ಹಣ್ಣುಗಳು, ಸಿಪ್ಪೆ ಅಥವಾ ತೊಗಟೆ ಹೀಗೆ ದಾಳಿಂಬೆ ಗಿಡದ ಪ್ರತಿಯೊಂದು ಭಾಗವನ್ನು ಔಷಧಿಗಾಗಿ ಬಳಸಬಹುದು.

ಇಲ್ಲಿ ನಾವು ದಾಳಿಂಬೆ ಎಲೆಗಳ ಪ್ರಯೋಜನದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ : https://vijayatimes.com/food-delivered-to-30k-km/


ದಾಳಿಂಬೆ ಎಲೆಗಳಲ್ಲಿರುವ ಉಪಯೋಗಕಾರಿ ಬ್ಯಾಕ್ಟೀರಿಯಾ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಬಾಯಿಯಲ್ಲಿನ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಕಾರಿ.

ಹಾಗಾಗಿ, ಬಾಯಿಯ ಹುಣ್ಣಿಗೆ ಚಿಕಿತ್ಸೆ ನೀಡಲು ದಾಳಿಂಬೆ ಎಲೆಗಳ ರಸವನ್ನು ಸಹ ಬಳಸಬಹುದು.


ಇನ್ನು, ದಾಳಿಂಬೆ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕೆಮ್ಮು ಮತ್ತು ಶೀತದ ತೊಂದರೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ದಾಳಿಂಬೆ ಎಲೆಗಳ ಕಷಾಯ ಮಾಡಿ ಕುಡಿಯಬಹುದು.

ಮೊದಲು, ದಾಳಿಂಬೆ ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಬೇಕು.

ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಬೇಕು. ಇದು ಕೆಮ್ಮನ್ನು ನಿವಾರಿಸುವುದರ ಜೊತೆಗೆ, ನಿಮ್ಮ ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೊತೆಗೆ, ದಾಳಿಂಬೆಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಹಾಗೂ ವಿಟಮಿನ್ ಸಿ ಅಂಶವನ್ನೂ ಹೊಂದಿದೆ.

ಇದನ್ನೂ ಓದಿ : https://vijayatimes.com/dangerous-aluminium-foil/


ದಾಳಿಂಬೆ ಎಲೆಗಳು ನಿದ್ರಾಹೀನತೆಯ ಚಿಕಿತ್ಸೆಗೂ ಉಪಯುಕ್ತ ಗಿಡಮೂಲಿಕೆ ಎನ್ನಲಾಗುತ್ತದೆ.

ಸುಮಾರು ಮೂರು ಗ್ರಾಂ ತಾಜಾ ದಾಳಿಂಬೆ ಎಲೆಗಳನ್ನು(Pomegrante Leaves) ಪೇಸ್ಟ್ ಮಾಡಿ,

ಅದನ್ನು 200 ಮಿಲೀ ನೀರಿನಲ್ಲಿ ಕುದಿಸಿ. ಈ ದ್ರವ ಸುಮಾರು 50 ಮಿ.ಲೀ ಇಳಿಯುವಷ್ಟು ಈ ನೀರನ್ನು ಕುದಿಸಿ.

ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಕುಡಿದರೆ, ನಿಮಗೆ ಉತ್ತಮ ನಿದ್ದೆಯನ್ನು ನೀಡುತ್ತದೆ.

ದಾಳಿಂಬೆ ಎಲೆಗಳು ಈ ರೀತಿ ನಿದ್ರಾಹೀನತೆಗೆ ಚಿಕಿತ್ಸೆ ನೀಡುವ ಮೂಲಕ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಬಹುದು.

ಸೌಂದರ್ಯ ವರ್ಧನೆಗೂ ಸಹಕಾರಿ ದಾಳಿಂಬೆ ಎಲೆಗಳು. ಮುಖದ ಮೇಲಿನ ಗುಳ್ಳೆಗಳು, ಮೊಡವೆಗಳಿಂದ ತ್ವರಿತ ಪರಿಹಾರ ನೀಡುತ್ತದೆ.

ನೀವು ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ, ಮೊಡವೆಗಳು ಶೀಘ್ರವೇ ನಿವಾರಣೆಯಾಗುತ್ತವೆ.

ದಾಳಿಂಬೆ ರಸವು ಉತ್ತಮವಾದ ಟೋನರ್ ಆಗಿದ್ದು, ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚುವ ಮೂಲಕ ಚರ್ಮವನ್ನು ಸುಂದರಗೊಳಿಸುತ್ತದೆ.

https://fb.watch/gTbIAkIsD_/ COVER STORY | ಭರ್ಜರಿ ಆಯಿಲ್ ಮಾಫಿಯಾ !


ದಾಳಿಂಬೆ ಎಲೆಗಳು ಜೀರ್ಣಕ್ರಿಯೆಗೂ(Digestion) ಪ್ರಯೋಜನಕಾರಿ.

ಹೊಟ್ಟೆ ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ದಾಳಿಂಬೆ ಎಲೆಗಳನ್ನು ಔಷಧಿಯಾಗಿ ಸೇವಿಸಬಹುದು.

ಇದರಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ಜೀರ್ಣಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತದೆ.

ಇದರಿಂದ ನಿಮ್ಮ ದೇಹವು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ, ಜೊತೆಗೆ ಅಜೀರ್ಣ ಮತ್ತು ಅತಿಸಾರದ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ.

ಇಂತಹ ಸಮಸ್ಯೆಗಳನ್ನು ನಿವಾರಿಸಲು ನೀವು ದಾಳಿಂಬೆ ಎಲೆಗಳಿಂದ ಮಾಡಿದ ಕ್ಯಾಪ್ಸುಲ್ ಹಾಗೂ ಇತರ ಔಷಧಿಗಳನ್ನು ಕೂಡ ತೆಗೆದುಕೊಳ್ಳಬಹುದು.

https://youtu.be/2uFll2Xlcoc COVER STORY | ಭರ್ಜರಿ ಆಯಿಲ್ ಮಾಫಿಯಾ !

ಅತಿಸಾರದ ಚಿಕಿತ್ಸೆಗಾಗಿ, ದಾಳಿಂಬೆ ಎಲೆಗಳ ರಸವನ್ನು ದಾಳಿಂಬೆ ರಸದೊಂದಿಗೆ ಬೆರೆಸಿ ಕುಡಿಯಿರಿ.

ಆದರೆ ಇದನ್ನು ಅತಿಯಾಗಿ ಸೇವಿಸಬೇಡಿ, ಏಕೆಂದರೆ ಯಾವುದೇ ಆದರೂ ಅತಿಯಾದರೆ, ವಿವಿಧ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

Exit mobile version