vijaya times advertisements
Visit Channel

ಕಲುಷಿತ ನೀರು ಸೇವನೆಯಿಂದಾಗುವ ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ

contaminated

ನೀರಿನ ಮಾಲಿನ್ಯ(Health Tips of Water) ಒಂದು ದೊಡ್ಡ ಸಮಸ್ಯೆಯಾಗಿದ್ದು, ರೋಗಕಾರಕ ಮತ್ತು ರಾಸಾಯನಿಕ ಮಾಲಿನ್ಯ ಎನ್ನುವ ಎರಡು ಸಂಗತಿಗಳು ಪ್ರಮುಖ ಸವಾಲುಗಳಾಗಿವೆ.

ಕಲುಷಿತವಾದ ಕುಡಿಯುವ ನೀರಿನ ಮೂಲಕ ಹಲವಾರು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

Health Tips of Water

ಪ್ರೋಟೋಜೋವಾ, ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಕರುಳಿನ ಪ್ಯಾರಸೈಟ್‌ಗಳಂತಹ ರೋಗವನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳಿಂದ ಕಾಲರಾ, ಟೈಫಾಯಿಡ್, ಅತಿಸಾರ, ಹೆಪಟೈಟಿಸ್ ‘ಎ’ ಯಂತಹ ರೋಗಗಳಿಗೆ ಕಾರಣವಾಗುತ್ತದೆ.

ಇಷ್ಟು ಮುಂದುವರಿದ ಜಗತ್ತಿನಲ್ಲಿಯೂ, ಕೆಲವು ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ (Health Tips of Water) ಪೂರೈಕೆ ಒಂದು ಸವಾಲಾಗಿದೆ ಎಂದರೆ ನಂಬಲೇಬೇಕು.

ಇನ್ನು, ಕೆಲವೊಮ್ಮೆ ವೈಯಕ್ತಿಕ ನೈರ್ಮಲ್ಯ ಕಾಪಾಡದಿರುವ ಅಭ್ಯಾಸಗಳೂ ಸಹ ಮಾಲಿನ್ಯಕ್ಕೆ ಕಾರಣವಾಗುತ್ತವೆ.
ಹಾಗಾದರೆ, ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ.

ಮೊಟ್ಟ ಮೊದಲು, ನೀರು ಸುರಕ್ಷಿತ ಮೂಲದಿಂದ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ : https://vijayatimes.com/mangaluru-auto-blast/

ಕುದಿಸಿದ ನೀರನ್ನು ಕುಡಿಯುವುದರಲ್ಲಿಯೂ ಅನುಮಾನಗಳಿದ್ದಲ್ಲಿ ನೀರಿನ ಸಂಸ್ಕರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನೀರನ್ನು ಕುದಿಸುವಿಕೆ ಪ್ಯಾಥೋಜನ್‌ ರಿಡಕ್ಷನ್‌ ವಿಧಾನವಾಗಿ ಬಳಸಬಹುದು, ಅದು ಎಲ್ಲಾ ರೋಗಕಾರಕಗಳನ್ನು ಕೊಲ್ಲುತ್ತದೆ.

ನೀರಿನಿಂದ ಹರಡುವ ರೋಗಗಳಿಂದ ಮುಕ್ತಿ ಪಡೆಯಲು, ಆಹಾರ ಸೇವನೆಯ ಮೊದಲು ಮತ್ತು ಮಲವಿಸರ್ಜನೆಯ ನಂತರ ಕೈಯನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ : https://vijayatimes.com/iran-actress-detained/


ನೀರು ಕಲುಷಿತವಾಗುವುದನ್ನು ತಪ್ಪಿಸಲು ಎಲ್ಲಾ ಸಮಯದಲ್ಲೂ ನೀರನ್ನು ಮುಚ್ಚಿಡಬೇಕು. ಕಂಟೇನರ್‌ಗಳಿಂದ ನೀರನ್ನು ತೆಗೆದುಕೊಳ್ಳಲು ಲೋಟವನ್ನು ಬಳಸಬೇಕು.

ಹಲವು ರೀತಿಯ ರೋಗಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಸ್ವಚ್ಚ ಪರಿಸರವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

contaminated


ನಮ್ಮ ಬಳಕೆಗೆ ಹೆಚ್ಚಿನ ಕುಡಿಯುವ ನೀರು ಅಂತರ್ಜಲ ಮತ್ತು ನದಿಗಳಿಂದ ಬರುವ ಕಾರಣ, ಕುಡಿಯುವ ನೀರಿನ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಕಾಪಾಡುವ ಮೊದಲ ಹೆಜ್ಜೆ ನೈಸರ್ಗಿಕ ನೀರಿನ ಮೂಲಗಳನ್ನು ಸ್ವಚ್ಛವಾಗಿಡುವುದು.

ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ನೀರಿನ ಮಾಲಿನ್ಯವನ್ನು ಕಡಿಮೆ ಮಾಡಲು ಅನುಸರಿಸಬಹುದಾದ ಕೆಲವು ವಿಧಾನಗಳು ಹೀಗಿವೆ.


ಶೌಚಾಲಯವು ಸ್ವಚ್ಛತೆ : ಮಕ್ಕಳಿಗೆ ಒರೆಸಲು ಬಳಸುವ ವೈಪ್‌ಗಳು(Wipes) ಅಥವಾ ಪ್ಲಾಸ್ಟಿಕ್ ಟ್ಯಾಂಪೂನ್ ಲೇಪಕಗಳಂತಹ ನಾನ್‌ ಡೀಗ್ರೇಡಬಲ್‌ ಉತ್ಪನ್ನಗಳನ್ನು ಫ್ಲಶ್ ಮಾಡಲೇಬೇಡಿ.

ಏಕೆಂದರೆ, ಇದು ಒಳಚರಂಡಿ ಸಂಸ್ಕರಣಾ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಈ ಮೂಲಕ ಬೀಚ್‌ಗಳು ಹಾಗೂ ನೀರನ್ನು ಗಲೀಜು ಮಾಡಿದಂತಾಗುತ್ತದೆ ಹಾಗೂ ಅದರಲ್ಲಿ ಕಸ ಹಾಕಿದಂತಾಗುತ್ತದೆ.

ಇದನ್ನೂ ಓದಿ : https://vijayatimes.com/mysterious-well-of-england/


ನೀರಿನ ಸಿಂಕ್ ಬಗ್ಗೆ ಜಾಗರೂಕರಾಗಿರಿ : ಬಣ್ಣಗಳು, ಬಳಸಿದ ತೈಲ, ರಾಸಾಯನಿಕ ಕ್ಲೀನರ್‌ಗಳು ಅಥವಾ ಇತರ ಮನೆಯ ಉತ್ಪನ್ನಗಳು, ಸೋಡಿಯಂ ಹೈಪೋಕ್ಲೋರೈಟ್, ಅಮೋನಿಯಾ ಮತ್ತು ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಪದಾರ್ಥಗಳನ್ನು ಹೊಂದಿರುವ ಕಾರಣ ಅವುಗಳು ನೀರಿನ ಸಿಂಕ್‌ ಒಳಗೆ ಹೋಗದಂತೆ ನೋಡಿಕೊಳ್ಳಿ.

ಯಾವಾಗಲೂ ಜೈವಿಕ ವಿಘಟನೀಯ ಅಥವಾ ಬಯೋಡೀಗ್ರೇಡಬಲ್‌ ಶುಚಿಗೊಳಿಸುವ ವಸ್ತುಗಳನ್ನು ಬಳಸಿದರೆ ನೀರಿನ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು.

water


ರಂಜಕವನ್ನು ಹೊಂದಿರುವ ಹುಲ್ಲುಹಾಸಿನ ರಸಗೊಬ್ಬರಗಳನ್ನು ಬಳಸಬೇಡಿ : ಟರ್ಫ್ ಹುಲ್ಲಿಗೆ ಅಗತ್ಯವಿಲ್ಲದ ರಂಜಕವನ್ನು ಹೆಚ್ಚಾಗಿ ಮಳೆಯ ಮೂಲಕ ಹತ್ತಿರದ ಜಲಮೂಲಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ರಂಜಕದಿಂದ ಪರಿಸರದ ಮೇಲೆ ಗಂಭೀರ ಸಮಸ್ಯೆಗಳನ್ನು ಉಂಟಾಗುತ್ತವೆ.

Latest News

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,

ರಾಜಕೀಯ

‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),