ರಕ್ತದೊತ್ತಡದ ಕಾಯಿಲೆ ನಿಯಂತ್ರಣದಲ್ಲಿಡುವ ಪಾನೀಯಗಳು ಯಾವುವು ನಿಮಗೆ ಗೊತ್ತಿದೀಯಾ?

ಇತ್ತೀಚಿಗೆ ರಕ್ತದೊತ್ತಡ ಕಾಯಿಲೆ (Blood Pressure Disease) ಸರ್ವೇ ಸಾಮಾನ್ಯವಾಗಿದ್ದು, ವೈದ್ಯರು ನೀಡುವ ಮಾತ್ರೆಗಳ ಜೊತೆಗೆ ಬೆಳಗಿನ ಜಾವ ಕೆಲವೊಂದು ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.

ದೇಹದ ಪ್ರಮುಖ ಅಂಗಗಳಾದ ಹೃದಯದ ರಕ್ತನಾಳಗಳು, ಕಿಡ್ನಿ (Kidney) ಹಾಗೂ ಮೆದುಳುಗಳಿಗೆ ಹಾನಿ ಆಗುವುದಲ್ಲದೆ, ಪ್ರಾಣಕ್ಕೆ ಸಮಸ್ಯೆ ಕಂಡುಬರುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಕೆಲವೊಂದು ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಪ್ರತಿದಿನ ಬೆಳಗ್ಗಿನ ಜಾವ, ಕಡಿಮೆ ಪ್ರಮಾಣದ ಕೊಬ್ಬಿನಾಂಶ ಕಂಡು ಬರುವ ಕೆನೆರಹಿತ ಹಾಲನ್ನು ಕುಡಿಯಬೇಕು. ಮಾನಸಿಕ ಒತ್ತಡದ ಸಮಸ್ಯೆಯಿಂದ ಎದುರಾಗುವ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸಲು ಪ್ರತಿದಿನ ಬೆಳಗ್ಗಿನ ಜಾವ ಒಂದು ಲೋಟ ಟೊಮೆಟೊ ಜ್ಯೂಸ್ (Tomato Juice) ಕುಡಿಯಬೇಕು. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದರ ಜೊತೆಗೆ ಹೃದಯದ ಆರೋಗ್ಯವು ಕೂಡ ಚೆನ್ನಾಗಿರುತ್ತದೆ.

ಬೆಳಗ್ಗಿನ ಸಮಯದಲ್ಲಿ ಆಂಟಿಆಕ್ಸಿಡೆಂಟ್ (Anti Oxidant) ಅಂಶಗಳು ಹೆಚ್ಚಾಗಿರುವ ದಾಸವಾಳದ ಹೂವಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ದಾಳಿಂಬೆ ಜ್ಯೂಸ್ ನಲ್ಲಿ ಪಾಲಿಫೆನಾಲಿಕ್ ಆಂಟಿಆಕ್ಸಿಡೆಂಟ್ ಉತ್ತಮ ಪ್ರಮಾಣದಲ್ಲಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ಅಧಿಕ ನೈಟ್ರೇಟ್ ಅಂಶ ಕಂಡುಬರುವ ಬೀಟ್‌ರೂಟ್ (Beetroot), ಮೂಲಂಗಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

Exit mobile version