ಆರೋಗ್ಯಕರ ಪಾನೀಯ: ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತೀರಾ? ಪ್ರತಿ ದಿನ ತಪ್ಪದೆ ಈ ಪಾನೀಯಗಳನ್ನು ಸೇವಿಸಿ!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸುಂದರವಾದ ಮತ್ತು ಆಕರ್ಷಕವಾದ ದೇಹವನ್ನು ಬಯಸುತ್ತಾರೆ ಆದರೆ ಕೆಲವೊಮ್ಮೆ ಹೆಚ್ಚುತ್ತಿರುವ (healthy drinks for weight loss) ತೂಕವು ಎಲ್ಲರನ್ನು

ಚಿಂತೆಗೀಡುಮಾಡುವುದಲ್ಲದೆ ಅನಾರೋಗ್ಯಕರ ಆಹಾರ ಪದ್ಧತಿಯ ಪಾಲನೆ ಮತು ದೈಹಿಕ ಚಟುವಟಿಕೆಗಳನ್ನು ಮಾಡದಿರುವುದು ಕೂಡ ದೇಹದಲ್ಲಿ ಬೊಜ್ಜು ಉಂಟಾಗಲು ಕಾರಣ ಎಂದು ಹೇಳಬಬಹುದು.

ಹಾಗಾಗಿ ಹೆಚ್ಚುತ್ತಿರುವ ಹೊಟ್ಟೆಯ ಕೊಬ್ಬಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಹಾಗಾದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ಪಾನೀಯಗಳನ್ನು ಸೇವಿಸಿದರೆ ಅದು ದಿನವಿಡೀ ಉಲ್ಲಾಸ ಭರಿತ ಮತ್ತು

ಶಕ್ತಿಯುತವಾಗಿರಿಸುವುದಲ್ಲದೆ ಹೊಟ್ಟೆಯ ಕೊಬ್ಬನ್ನು ಕರಗಿಸಲು (healthy drinks for weight loss) ಕೂಡಾ ಸಹಾಯ ಮಾಡುತ್ತದೆ.

ಜನರು ತೂಕ ಇಳಿಸಿಕೊಳ್ಳಲು ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸಲು ಹಲವು ರೀತಿಯ ಕ್ರಮಗಳನ್ನು ಪಾಲಿಸುತ್ತಿದ್ದು, ಅಂತವರು ಬೆಳಗ್ಗೆ, ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು

ನಿಯಮಿತವಾಗಿ ಸೇವನೆ ಮಾಡುವುದರಿಂದಲೂ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದಾಗಿದೆ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿರುವಾಗ ಈ ಸಮಯದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ

ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಅದು ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ ಪಾನೀಯಗಳು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ ಆಹಾರವು

ಉತ್ತಮವಾಗಿ ಜೀರ್ಣವಾಗುತ್ತದೆ. ಇಂತಹ ಪಾನೀಯಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಅದು ಹೊಟ್ಟೆಯ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.

ನಿಂಬೆ ನೀರು:
ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಅರ್ಧ ನಿಂಬೆ ಹಣ್ಣಿನ ರಸದೊಂದಿಗೆ ಬೆಲ್ಲದ ಸಣ್ಣ ತುಂಡನ್ನು ಹಾಕಿ ಒಂದು ಲೋಟ ಬಿಸಿ ನೀರಿಗೆ ಬೆರೆಸಿ ಕುಡಿಯುವುದರಿಂದ ನೀವು ಹಲವು ಪ್ರಯೋಜನಗಳನ್ನು

ಪಡೆದುಕೊಳ್ಳಬಹುದುಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಬೆಲ್ಲವನ್ನು ಸೇವನೆ ಮಾಡುವುದರಿಂದ ದೇಹದ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಶಿನ ನೀರು(ಉರಿಯೂತಕ್ಕೆ ರಾಮ ಬಾಣ)
ಅರಶಿನದ ನೀರು ದೇಹದ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ ದೇಹದ ತೂಕವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವ ವಿಧಾನ ಹೇಗೆಂದರೆ ಅರ್ಧ ಚಮಚ

ಅರಶಿನವನ್ನು ಬಿಸಿ ನೀರಿನೊಂದಿಗೆ ಚೆನ್ನಾಗಿ ಬೆರೆಸಿ ಕುಡಿಯಬೇಕು ಮತ್ತು ಇದರ ಬದಲಾಗಿ ಅರಶಿನ ಚಹಾವನ್ನು ಸಹ ಕುಡಿಯಬಹುದಾಗಿದೆ.


೧. ಅರಶಿನ ಟೀ ಮಾಡಲು ಬೇಕಾಗುವ ಸಾಮಗ್ರಿಗಳು: ೧ ಚಮಚ ಅರಶಿನ, ೧ ಚಮಚ ಜೀನುತುಪ್ಪ, ದಾಲ್ಚಿನ್ನಿ ಮತ್ತು ೨ ಕಪ್ ನೀರು
೨. ಮಾಡುವ ವಿಧಾನ: ಚೆನ್ನಾಗಿ ಕುದಿಯುವ ನೀರಿಗೆ ಒಂದೊಂದಾಗಿ ಈ ಪದಾರ್ಥಗಳನ್ನು ಬೆರಸಿ ಚೆನ್ನಾಗಿ ಕುದಿಸಿ ಸ್ವಲ್ಪ ಹೊತ್ತು ಬಿಟ್ಟು ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇದು

ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತದೆ.

ಜೀರಿಗೆ ನೀರು:
ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನ ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿ,

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಜೀರಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಿಧಾನವಾಗಿ ಜೀರ್ಣವಾಗದ ಆಹಾರವನ್ನು ಸಹ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಲ್ಲದೆ ಇದು ಕರುಳುಗಳನ್ನು ಸ್ವಚ್ಛವಾಗಿಡಲು ಸಹ ಸಹಾಯ ಮಾಡುತ್ತದೆ. ಇನ್ನು ಜೀರಿಗೆಯಲ್ಲಿ ಉರಿಯೂತ ನಿವಾರಕ ಗುಣವಿದ್ದು, ಇದು ದೇಹದಲ್ಲಿನ ಊತವನ್ನು ಕಡಿಮೆ ಮಾಡುವುದಲ್ಲದೆ

ಇದು ತೂಕ ನಷ್ಟದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಗ್ರೀನ್ ಟೀ:
ಗ್ರೀನ್ ಟೀ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದ್ದು ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಹೊಟ್ಟೆಯ

ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಗ್ರೀನ್ ಟೀ ಸೇವನೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಪುದೀನಾ ನೀರು:
ಪುದೀನಾ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುದಲ್ಲದೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಉಗುರು ಬೆಚ್ಚಗಿನ

ನೀರಿನಲ್ಲಿ ಬೆರೆಸಿ ಕುಡಿಯುವುದರಿದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆಂತ್ಯ ನೀರು:
ಮೆಂತ್ಯ ನೀರನ್ನು ತಯಾರಿಸಲು ನೀವು ರಾತ್ರಿಯಲ್ಲಿ ಒಂದು ಲೋಟ ನೀರಿಗೆ ಮೆಂತ್ಯ ಕಾಳುಗಳನ್ನು ಹಾಕಿ ನೆನೆಸಿಟು,ಮಾರನೆಯ ದಿನ ಬೆಳಗ್ಗೆ ಈ ನೀರನ್ನು ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು

ನಿರಂತರವಾಗಿ ಕುಡಿಯುವುದರಿಂದ ತೂಕ ಕಡಿಮೆಯಾಗುವುದಲ್ಲದೆ ಇದರಿಂದ ಗ್ಯಾಸ್ ಮತ್ತು ಅಸಿಡಿಟಿಯಂತಹ ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಮತ್ತು ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡಲು

ಸಹಾಯವಾಗಿದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ: ಬಂದ್ ಕಾವು: ರಾಪಿಡೊ ಚಾಲಕರ ಮೇಲೆ ಪ್ರತಿಭಟನಾಕಾರರಿಂದ ಹಲ್ಲೆ, ರಸ್ತೆಗಿಳಿದ ವಾಹನಗಳ ಟೈಯರ್ ಪಂಚರ್

Exit mobile version