ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

Background for a hot summer or heat wave, orange sky with with bright sun and thermometer

ಬೇಸಿಗೆ ಕಾಲ ಅಂದ್ರೆ ಧಗೆ. ಬೇವರು, ಶಾಖ, ಸುಸ್ತು, ಬಾಯಾರಿಕೆ. ಈ ವೇಳೆ ಕುಡಿಯೋಕೆ ಏನಾದ್ರೂ ಸಿಕ್ರೆ ಸಾಕು ಅಂತ ದೇಹ ಬಯಸುತ್ತೆ. ಹಾಗಾಗಿ ನಾವು ಕಣ್ಣಿಗೆ ಕಂಡಿದ್ದನ್ನು ಸೇವಿಸಿ ಆರೋಗ್ಯವನ್ನು (heath tips for summer) ಅಪಾಯದಂಚಿಗೆ ತಳ್ಳುತ್ತೀವಿ.

ಬೇಸಿಗೆ ಕಾಲದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾಗಳು(Bacteria) ನಮ್ಮ ದೇಹವನ್ನು ಅಕ್ರಮಿಸಿಕೊಂಡು ಪ್ರಾಣಕ್ಕೇ ಕುತ್ತು ತರಬಹುದು. ಅದಕ್ಕಾಗಿ ನೀವು ಬೇಸಿಗೆ ಕಾಲದಲ್ಲಿ ಯಾವುದೇ ಆಹಾರ ಸೇವಿಸೋ ಮುನ್ನ ತುಂಬಾನೇ ಕೇರ್‌ಫುಲ್ಲಾಗಿರಿ.

ಹಾಗಾದ್ರೆ ಬನ್ನಿ ಬೇಸಿಗೆ ಕಾಲದಲ್ಲಿ ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಸೇವಿಸ ಬಾರದು ಅನ್ನೋದನ್ನು ತಿಳಿಯೋಣ.

ಈ ಆಹಾರಗಳನ್ನು ಸೇವಿಸದಿರಿ:

  1. ಆಲ್ಕೋಹಾಲ್(Alochol), ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ (Carbonated) ತಂಪು ಪಾನೀಯಗಳನ್ನು ಸೇವಿಸಬೇಡಿ. ಕೆಫೀನ್ ದೇಹದಲ್ಲಿ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ (heath tips for summer) ಎಂಬುದು ಅಧ್ಯಯನದಿಂದ ಸಾಬೀತಾಗಿದೆ, ಇದು ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸುತ್ತದೆ.
  2. ಇನ್ನು ನಾವೆಲ್ಲರೂ ಚಹಾ ಜೊತೆ ಕರಿದ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ ಬೇಸಿಗೆಯಲ್ಲಿ, ಈ ಕಾಂಬಿನೇಷನ್‌ (Combination) ನಿಮ್ಮ ದೇಹಕ್ಕೆ ವಿಷಕಾರಿಯಾಗಲಿದೆ. ಎಣ್ಣೆಯಲ್ಲಿ ಕರಿದ ಆಹಾರವನ್ನು ತ್ಯಜಿಸುವುದು ಸೂಕ್ತ. ಯಾಕೆಂದರೆ ಹೆಚ್ಚುವರಿ ಎಣ್ಣೆಯು ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ಹೊಟ್ಟೆ ಮತ್ತು ಅನ್ನನಾಳದಲ್ಲಿ ಸುಡುವ ಫೀಲಿಂಗ್‌ ಉಂಟುಮಾಡುತ್ತದೆ.
  3. ನೀವೇನಾದ್ರೂ ಮಸಾಲೆ ಪ್ರಿಯರಾಗಿದ್ದರೆ, ಈ ಅಂಶ ನಿಮಗೆ ನೋವುಂಟು ಮಾಡಬಹುದು. ಆದರೆ ಈ ಹವಾಮಾನದಲ್ಲಿ ಮಸಾಲೆಯುಕ್ತ ಆಹಾರ ಮತ್ತು ಮೆಣಸಿನಕಾಯಿಯನ್ನು ತಪ್ಪಿಸುವುದು ಒಳ್ಳೆಯದು. ಯಾಕಂದ್ರೆ ಬೇಸಿಗೆಯಲ್ಲಿ ಮೆಣಸಿನಕಾಯಿ, ಲವಂಗ ಅಥವಾ ದಾಲ್ಚಿನ್ನಿ ಸೇವನೆ ಒಳ್ಳೆಯದಲ್ಲ. ಆರೋಗ್ಯ ತಜ್ಞರ ಪ್ರಕಾರ, ಈ ಪದಾರ್ಥಗಳು ದೇಹದಲ್ಲಿ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ ಮತ್ತು ಥರ್ಮೋಜೆನಿಕ್ (Thermogenic) ಪರಿಣಾಮವನ್ನು ಉಂಟುಮಾಡುತ್ತವೆ.

ಬೇಸಿಗೆಯಲ್ಲಿ ಬಾದಾಮಿ, ಗೋಡಂಬಿ, ವಾಲನಟ್ಸ್ ಮತ್ತು ಒಣದ್ರಾಕ್ಷಿಗಳನು ಅತಿಯಾಗಿ ಸೇವಸಿದರೆ ಅವು ದೇಹದಲ್ಲಿ ಹೆಚ್ಚಿನ ಶಾಖವನ್ನು ಉಂಟುಮಾಡುತ್ತವೆ. ಹಾಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡಿದ್ರೆ ಉತ್ತಮ.

ಸೇವಿಸಬೇಕಾದ ಆಹಾರಗಳು ಯಾವುವು?

1.ಕಲ್ಲಂಗಡಿ, ಸೀತಾಫಲದಿಂದ ಮರದ ಸೇಬಿನವರೆಗ, ಈ ಋತುವಿನಲ್ಲಿ ಸಾಕಷ್ಟು ನೀರಿನಂಶ ಇರುವ ಹಣ್ಣುಗಳು ದೊರೆಯುತ್ತವೆ. ಅವುಗಳನು ಸಮೃದ್ಧವಾಗಿ ಹಾಗೂ ಹೇರಳವಾಗಿ ಸೇವಿಸಬೇಕು. ಏಕೆಂದರೆ ಅವುಗಳು ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತವೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತೆ.
2.ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ,(Lassi) ನಿಂಬೆ ನೀರು, ಮಜ್ಜಿಗೆ, ಕೋಕಂ ಶರ್ಬತ್, ಶೇಕ್ಸ್, ಸ್ಮೂಥಿ ಮುಂತಾದ ಪಾನೀಯಗಳ ಸೇವನೆ ಅಧಿಕವಾಗಿ ಮಾಡಿ.
3.ಇನ್ನು ನೀರಿನ ವಿಷಯಕ್ಕೆ ಬಂದ್ರೆ, ಸಾಮಾನ್ಯ ಹವಾಮಾನ ಪರಿಸ್ಥಿತಿಗಳಲ್ಲಿ ಸರಾಸರಿ ಮಾನವ ದೇಹಕ್ಕೆ 8-10 ಗ್ಲಾಸ್ ನೀರು ಬೇಕಾಗುತ್ತೆ. ಪ್ರಸ್ತುತ ಶಾಖದ ಅಲೆಯನ್ನು ಗಮನದಲ್ಲಿಟ್ಟುಕೊಂಡು, ದೇಹದಲ್ಲಿ ನೀರಿನ ಅಂಶವನ್ನು ಸಮತೋಲದಲ್ಲಿಡಲು ಕನಿಷ್ಠ 12-15 ಗ್ಲಾಸ್ ನೀರನ್ನು ಕುಡಿಯಬೇಕು. ಮಕ್ಕಳಿಗೆ, 6-8 ಗ್ಲಾಸ್‌ಗಳು ಒಳ್ಳೆಯದು.

ಬೇಸಿಗೆಯಲ್ಲಾಗುವ ಆರೋಗ್ಯ ಸಮಸ್ಯೆಗಳು:

ಹೀಟ್ ಸ್ಟ್ರೋಕ್ ಮತ್ತು ಹೀಟ್ ಎಕ್ಸಾಶನ್: ಬೇಸಿಗೆ ಕಾಲದಲ್ಲಿ ತಾಪಮಾನದ ಬಿಸಿ ಹೆಚ್ಚಾದಾಗ, ಹಿರಿಯರು ಮತ್ತು ಮಕ್ಕಳು ತುಂಬಾ ಕೇರ್‌ಫುಲ್ಲಾಗಿರಬೇಕು.

ಯಾಕಂದ್ರೆ ಇವರನ್ನುನಿರ್ಜಲೀಕರಣ, ಶಾಖದ ಹೊಡೆತಗಳು ಬೇಗ ಕಾಡುತ್ತವೆ. ಅಷ್ಟೇ ಅಲ್ಲ ಹೃದ್ರೋಗ ಅಥವಾ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ತುಂಬಾನೇ ಕೇರ್‌ಫುಲ್ಲಾಗಿರಬೇಕು.


ಬೇಸಿಗೆಯಲ್ಲಿ ಮುಖ್ಯವಾಗಿ ಜನರನ್ನು ಕಾಡುವ ಮತ್ತು ಪ್ರಾಣಕ್ಕೆ ಕುತ್ತು ತರುವ ಸಮಸ್ಯೆ ಅಂದ್ರೆ ಹೀಟ್‌ ಸ್ಟ್ರೋಕ್‌. ಈ ಹೀಟ್‌ಸ್ಟ್ರೋಕ್‌ಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಕೂಡ ಒಂದು ಪ್ರಮುಖ ಕಾರಣವಾಗುತ್ತೆ.

ಈ ವೇಳೆ ನಿಮ್ಮ ದೇಹದ ಉಷ್ಣತೆಯು 104 F (40 C) ಅಥವಾ ಹೆಚು ತಲುಪಿದಾಗ ಎಚ್ಚರ ಇದು ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು.

ಅಥವಾ ಮೆದುಳು, ದೇಹದ ಇತರ ಭಾಗಗಳಿಗೆ ಶಾಶ್ವತ ಊನವುಂಟು ಮಾಡಬಹುದು. ಹಾಗಾಗಿ ಹೀಟ್‌ಸ್ಟ್ರೋಕ್‌ ಆದಾಗ ನೀವು ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ.

Exit mobile version