Gyanvapi Case : ಗ್ಯಾನವಾಪಿ ಮಸೀದಿ ಪ್ರಕರಣ ; ಇಂದು ಆದೇಶ ಪ್ರಕಟ, ಕಾಶಿಯಾದ್ಯಂತ ಕಟ್ಟೆಚ್ಚರ!

Varanasi

Lucknow : ವಾರಣಾಸಿ(Varanasi) ಜಿಲ್ಲಾ ನ್ಯಾಯಾಲಯವು ಇಂದು ಗ್ಯಾನವಾಪಿ ಮಸೀದಿ(Gyanvapi Mosque) ಪ್ರಕರಣದ ಅಂತಿಮ ಆದೇಶವನ್ನು ನೀಡಲು ಸಿದ್ಧವಾಗಿರುವುದರಿಂದ ಆದೇಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇನ್ನು ವಾರಣಾಸಿಯಾದ್ಯಂತ ತೀರ್ವ ಕಟ್ಟೆಚ್ಚರ ವಹಿಸಲಾಗಿದೆ ಎಂದು ವಾರಣಾಸಿ ಜಿಲ್ಲಾ ಪೊಲೀಸರು(Police) ತಿಳಿಸಿದ್ದಾರೆ. ವಾರಣಾಸಿ ಜಿಲ್ಲಾ ನ್ಯಾಯಾಲಯವು ವಾರಣಾಸಿಯ ಪ್ರಸಿದ್ಧ ಗ್ಯಾನವಾಪಿ ಮಸೀದಿ ಪ್ರಕರಣದ ತೀರ್ಪು(Verdict) ನೀಡಲು ಸಿದ್ಧವಾಗಿದೆ.

ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವತೆಗಳನ್ನು ಪೂಜಿಸಲು ಅನುಮತಿ ಕೋರಿ ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ನೇತೃತ್ವದ ಪೀಠವು, ಇಂದು ತನ್ನ ಅಂತಿಮ ಆದೇಶ ನೀಡಲಿದೆ.

ಇದನ್ನೂ ಓದಿ : https://vijayatimes.com/up-police-seized-whale-vomit-thiefs/

ಇನ್ನು ಜಿಲ್ಲಾ ನ್ಯಾಯಾಲಯವು ಆರಾಧನೆಗೆ ಅನುಮತಿಗೆ ಕೋರಿ ಸಲ್ಲಿಸಿರುವ ಅರ್ಜಿ ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯು ಸಮರ್ಥನೀಯವಾಗಿದೆಯೇ ಮತ್ತು ಅರ್ಜಿಯು ಸಮರ್ಥನೀಯ ಆಧಾರದ ಮೇಲೆ ಇದೆಯೇ ಎಂಬುದರ ಕುರಿತು ಜಿಲ್ಲಾ ನ್ಯಾಯಾಧೀಶರು ತಮ್ಮ ಆದೇಶವನ್ನು ನೀಡುತ್ತಾರೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿದ್ದರು. ಇನ್ನು ಕಾಶಿ ವಿಶ್ವನಾಥ-ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಶೃಂಗಾರ ಗೌರಿ ಸ್ಥಳವನ್ನು ಪೂಜಿಸಲು ನ್ಯಾಯಾಲಯದ ಅನುಮತಿ ಕೋರಿ ಹಿಂದೂ ಸಮುದಾಯದ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಿತು.

ಮಸೀದಿಯ ಆವರಣದಲ್ಲಿ ಶಿವಲಿಂಗವನ್ನು ಹೋಲುವ ರಚನೆಯನ್ನು ಪತ್ತೆ ಮಾಡಿದ ನಂತರ ಈ ಅರ್ಜಿ ಸಲ್ಲಿಸಲಾಗಿದೆ. ಆದರೆ ಮಸೀದಿ ಸಮಿತಿಯು ಮಸೀದಿಯ ಆವರಣದಲ್ಲಿ ಇರುವುದು ಶಿವಲಿಂಗ ಅಲ್ಲ, ಅದರ ರಚನೆಯು ಕಾರಂಜಿಯನ್ನು ಹೋಲುತ್ತದೆ ಎಂದು ವಾದಿಸಿದೆ. ಈ ಎಲ್ಲದರ ಕುರಿತು ಇಂದು ಜಿಲ್ಲಾ ನ್ಯಾಯಾಲಯ ಆದೇಶ ನೀಡಲಿದೆ.
Exit mobile version