ಮಹಿಳೆ ಮೃತದೇಹದ ಮೇಲೆ ನಡೆಯುವ ಅತ್ಯಾಚಾರ ತಡೆಗೆ ಕರ್ನಾಟಕ ಹೈಕೋರ್ಟ್ ಶಿಫಾರಸು : ಶವಗಳನ್ನೂ ಬಿಡುತ್ತಿಲ್ಲ ಕಾಮುಕರು!

Bengaluru: ಬುಧವಾರ (ಮೇ 31) ರಂದು ಕರ್ನಾಟಕ ಹೈಕೋರ್ಟ್‌ನ (Highcourt) ವಿಭಾಗೀಯ ಪೀಠವು ಅತ್ಯಾಚಾರ ತಡೆ ಕಾಯ್ದೆಯ ಪ್ರಕಾರ ಮೃತ ದೇಹಗಳ ಅತ್ಯಾಚಾರ ಮತ್ತು ವಿಕೃತಿಗೆ ಕಾನೂನಿಗೆ ತಿದ್ದುಪಡಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಈ ತಿದ್ದುಪಡಿಯನ್ನು ಮಾಡುವಂತೆ ಕೇಂದ್ರ (High Court new order) ಸರ್ಕಾರಕ್ಕೆ ಪೀಠವು ಶಿಫಾರಸು ಮಾಡಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ (Section) 377 ರ ವ್ಯಾಪ್ತಿಗೆ ಮೃತ ದೇಹಗಳ ಮೇಲೆ ಮಾಡಿದ ಅತ್ಯಾಚಾರವನ್ನೂ ಒಳಗೊಂಡಿರಬೇಕು ಎಂದು ಸೂಚಿಸಿದೆ.

ತಂತ್ರಜ್ಞಾನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಕೂಡ ಮಹಿಳೆಯನ್ನು ಒಂದು ಪಿಡುಗಿನಂತೆ ಕಾಡುತ್ತಿರುವ ಹೇಯ ಕೃತ್ಯ ಎಂದರೆ (High Court new order) ಅತ್ಯಾಚಾರ ಎಂದೇ ಹೇಳಬಹುದು.

ಇಂತಹ ಅತ್ಯಾಚಾರಕ್ಕೆ ಯಾವ ಮಹಿಳೆ ಒಳಗಾಗಿರುತ್ತಳೋ ಅಂತಹ ಮಹಿಳೆ ತನ್ನ ಜೀವನವೇ ಮುಳುಗಿ ಹೋಯಿತು ಎಂದುಕೊಂಡು ಹಲವಾರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ,

ಅದರಲ್ಲೂ ಇನ್ನೂ ಕೆಲವರನ್ನು ಆ ಪಾಪಿಗಳೇ ಕೊಂದು ಹಾಕುತ್ತಾರೆ.

ಇಂಗ್ಲೆಂಡ್, ಕೆನಡಾ(Canada) , ನ್ಯೂಜಿಲೆಂಡ್ (New Zealand) ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ದೇಶಗಳಲ್ಲಿ,

ಮೃತ ದೇಹಗಳನ್ನು ಅತ್ಯಾಚಾರ ಮಾಡುವುದು ಅಥವಾ ವಿಕೃತಿಯು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ.

ಮಹಿಳೆಯ ಜೀವನದ ಹಕ್ಕಿನಲ್ಲಿ ಮೃತದೇಹದ ಘನತೆಯನ್ನು ಕೂಡ ಸೇರಿಸಲಾಗಿದ್ದು, ಆರು ತಿಂಗಳೊಳಗೆ ಐಪಿಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಪೀಠ ಶಿಫಾರಸು ಮಾಡಿದೆ.

ಏನಿದು ಮೃತದೇಹದ ಮೇಲಿನ ಅತ್ಯಾಚಾರ ಪ್ರಕರಣ?

ಈ ಹಿಂದೆ ತುಮಕೂರಿನಲ್ಲಿ (Tumkur) ಯುವತಿಯೊಬ್ಬಳ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಿದ ಪೀಠ,

ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನು ಇಲ್ಲದ ಕಾರಣ ಬರೀ ಕೊಲೆಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪೀಠದ ತೀರ್ಪಿನ ಫಲವಾಗಿ ತುಮಕೂರಿನ ರಂಗರಾಜು (Rangaraju) ಅಲಿಯಾಸ್ ವಾಜಪೇಯಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಆಸ್ಪತ್ರೆಯ ಶವಾಗಾರಗಳಲ್ಲಿ ಮೃತ ದೇಹಗಳ ಮೇಲೆ ಅತ್ಯಾಚಾರದ ಘಟನೆಗಳು ಅನೇಕ ನಡೆದಿವೆ.

ಇಂತಹ ಕೃತ್ಯಗಳನ್ನು ತಡೆಗಟ್ಟುವುದಕ್ಕಾಗಿ ಎಲ್ಲಾ ಶವಾಗಾರಗಳಲ್ಲಿ ಕೂಡ ಸಿಸಿಟಿವಿ (CCTV) ಅಳವಡಿಸಬೇಕು.6 ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ ಈ ನಿಯಮ ಜಾರಿಯಾಗಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ.ಅಷ್ಟೇ ಅಲ್ಲದೆ ಶವಾಗಾರಗಳಲ್ಲಿ ಶುಚಿತ್ವ ಕಾಪಾಡಬೇಕೆಂದೂ ನಿರ್ದೇಶನ ನೀಡಿದೆ.

ರಶ್ಮಿತಾ ಅನೀಶ್

Exit mobile version