ಈ ವರ್ಷ ಕರುನಾಡನ್ನು ಕಾಡಲಿದೆ ಅತೀ ಹೆಚ್ಚು ತಾಪಮಾನ ! ಅಪಾಯ ಎದುರಿಸಲು ರೆಡಿಯಾಗಿ

Bengaluru: ಬಿಸಿಲ ಧಗೆಗೆ ರಾಜ್ಯದ ಜನತೆ ಈಗಲೇ ತತ್ತರಿಸಿ ಹೋಗಿದ್ದಾರೆ. ಇನ್ನೂ ಬಿಸಿಲು ಏಪ್ರಿಲ್ ವರೆಗೆ ಇರುತ್ತದೆ. ಏಪ್ರಿಲ್ (High temperature in karnataka) ತಿಂಗಳಿನಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿದೆ.

ತಾಪಮಾನ ತೀವ್ರವಾಗಿ ಏರಿದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎನರ್ಜಿ ಆಡಿಟಿಂಗ್ (Energy Auditing) ಮಾಡಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಮಾನವ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಶಾಖದ ಕ್ರಿಯಾ ಯೋಜನೆಯನ್ನು ರೂಪಿಸಲು ಸಲಹೆ ನೀಡಿದೆ. ಬೇಸಿಗೆಯ (high temperature in karnataka)

ತಿಂಗಳುಗಳಲ್ಲಿ ತಾಪಮಾನವು (Temperature) ತೀವ್ರವಾಗಿ ಏರಿಕೆಯಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ, ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚು ತಾಪಮಾನ ಈ ವರ್ಷದ ಫೆಬ್ರುವರಿಯಲ್ಲಿ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಶಾಖದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆಗಳಿದ್ದು,

ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನು ಓದಿ: SHIMUL ಹಾಲು ಉತ್ಪಾದಕರ ನೇಮಕಾತಿಗೆ ಇಂದೆ ಕೊನೆ ದಿನ ಬೇಗ ಬೇಗ ಅರ್ಜಿ ಹಾಕಿ

ಇನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸಲಹೆಯನ್ನು ಮೌಲ್ಯಮಾಪನ ಮಾಡಲು ಟಿಎಸಿಗೆ ಸೂಚಿಸಲಾಗಿದೆ. ಸಮಿತಿಯು ಐವಿಎಫ್ ಓರಲ್ ರೀಹೈಡ್ರೇಶನ್ (Rehydration) ಸೊಲ್ಯೂಷನ್ಸ್ ಜೊತೆಗೆ

ನಿರ್ಜಲೀಕರಣದಿಂದ ಬಳಲುತ್ತಿರುವವರು ಎಳನೀರನ್ನು ಹೆಚ್ಚಾಗಿ ಬಳಸಬೇಕು ಎಂದು ಹೇಳಿದೆ.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಶರೀಫ್ ಅವರು ಟಿಎಸಿ ಸಮಿತಿಯ ವರದಿಯನ್ನು ಸ್ವೀಕರಿಸಿದ್ದು, ಸಾರ್ವಜನಿಕರಿಗೆ ಆರೋಗ್ಯ ಸಂಬಂಧಿ ಸೂಚನೆ ಹೊರಡಿಸುವ ಸಾಧ್ಯತೆಯಿದೆ.

ತಾಪಮಾನ ಹೆಚ್ಚಳದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಅಥವಾ ಎಲೆಕ್ಟ್ರೋಲೈಟ್(Electrolyte) ಅಸಮತೋಲನವನ್ನು ತಡೆಯಲು ಅಗತ್ಯ ಔಷಧಗಳ ಸಂಗ್ರಹಣೆ ಮತ್ತು ಪೂರೈಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಔಷಧಿ ಸಿಗುವಂತೆ ಮಾಡಬೇಕಾಗಿದೆ. ತಾಪಮಾನ ಸಂಬಂಧಿತ ರೋಗಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಲು ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆ.

Exit mobile version