ವಿಚ್ಛೇದನದ ಪ್ರಕ್ರಿಯೆ ಆರಂಭಿಸಿದ ನಂತರ ದಾಖಲಿಸಿದ ದೂರಿಗೆ ಯಾವುದೇ ಮಹತ್ವವಿಲ್ಲ: ಹೈಕೋರ್ಟ್

ಬೆಂಗಳೂರು : ಪತಿ ವಿಚ್ಛೇದನದ (Highcourt about divorce Complaint) ಪ್ರಕ್ರಿಯೆ ಆರಂಭಿಸಿದ ನಂತರ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತ್ನಿ, ಪತಿ ಮತ್ತು ಕುಟುಂಬದ ಸದಸ್ಯರ ವಿರುದ್ಧ

ದೂರು ದಾಖಲಿಸಿದರೆ, ಅದು ಮಾನ್ಯವಾಗುವುದಿಲ್ಲ. ಪತಿ ವಿರುದ್ಧ ಪತ್ನಿ ಸಲ್ಲಿಸಿದ್ದ ದೂರನ್ನು ಕಲಬುರಗಿ (Kalburgi) ಪೀಠ ವಜಾಗೊಳಿಸಿದ್ದು, ಮಹಾರಾಷ್ಟ್ರದ (Maharashtra) ಸೊಲ್ಲಾಪುರ ಮೂಲದ ನಾಗೇಶ ಗುಂಡ್ಯಾಳ್‌,

ಅವರ ಪತ್ನಿ ವಿಜಯಾ, ಅವರ ಪುತ್ರಿ ಅಂಜನಾ, ಪತಿ ಅನಿಲ್‌ ಸೇರಿದಂತೆ ಹಲವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿತು. ಏಕಸದಸ್ಯ ಪೀಠದ ನ್ಯಾಯಾಧೀಶರಾದ ಎಚ್.ರಾಚಯ್ಯ ಅವರು ವಾದ ಆಲಿಸಿದ ಬಳಿಕ ಈ

ತೀರ್ಪು ನೀಡಿ ಪತಿಯ ಸಂಬಂಧಿಕರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ದೂರನ್ನು (Highcourt about divorce Complaint) ವಜಾಗೊಳಿಸಿದ್ದಾರೆ.

ನ್ಯಾಯಾಲಯದ ಪ್ರಕಾರ, ಪತಿ ಮತ್ತು ಅವರ ಸಂಬಂಧಿಕರ ವಿರುದ್ಧ ದೂರುಗಳು ಬಂದಿವೆ, ಆದರೆ ಈ ಆರೋಪಗಳು ಸಾಮಾನ್ಯ ಸ್ವರೂಪದಲ್ಲಿವೆ. ಪ್ರತಿಯೊಬ್ಬ ವ್ಯಕ್ತಿಯು ನಿರ್ದಿಷ್ಟ ಆರೋಪವನ್ನು ಮಾಡಿದ್ದಾರೆ ಎಂಬುದಕ್ಕೆ

ಯಾವುದೇ ಸ್ಪಷ್ಟವಾದ ಸಾಕ್ಷಿಗಳಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಸೋಲಾಪುರ(Solapura) ಕೌಟುಂಬಿಕ ನ್ಯಾಯಾಲಯವು ಡಿಸೆಂಬರ್ 17, 2018 ರಂದು ಪತಿಯಿಂದ ವಿಚ್ಛೇದನದ ಅರ್ಜಿಯನ್ನು ಸ್ವೀಕರಿಸಿದೆ.

ಇದನ್ನು ಓದಿ: ಕರ್ನಾಟಕ ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆ ಘೋಷಣೆ : ಜೂ.30 ಮತದಾನ

ನಂತರ, ಪತ್ನಿ ಪ್ರತಿಯಾಗಿ ಪತಿ ಮತ್ತು ಅವರ ಎಲ್ಲಾ ಸಂಬಂಧಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು, ಆದ್ದರಿಂದ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ, ಎಂದು ನ್ಯಾಯಾಲಯ (Court) ಹೇಳಿದೆ.

ಪ್ರಕರಣದ ಹಿನ್ನೆಲೆ :

ದೇವದುರ್ಗದ ರಾಯಚೂರಿನ (Raichur) ಸುಮಾ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಗೋಪಾಲ್ ಗುಂಡ್ಯಾಳ್ 2013ರ ಮೇ ನಲ್ಲಿ ವಿವಾಹವಾಗಿದ್ದರು. ನಂತರ ಪತಿ ತನಗೆ ಹಿಂದಿ, ಮರಾಠಿ ಬರುವುದಿಲ್ಲ ಎಂಬ ಕಾರಣಕ್ಕೆ

ಪುಣೆಗೆ (Pune) ಕರೆದುಕೊಂಡು ಹೋಗದೆ ಸಂಬಂಧಿಕರ ಬಳಿ ಬಿಟ್ಟು ಹೋಗಿರುವುದಾಗಿ ಸುಮಾ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಪತಿ-ಪತ್ನಿಯ ನಡುವೆ ಸಾಕಷ್ಟು ಮನಸ್ತಾಪವಾಗಿದೆ. ಡಿಸೆಂಬರ್ 17, 2018 ರಂದು

ಸೋಲಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪತ್ನಿಗೆ ನೋಟಿಸ್ ನೀಡಲಾಗಿತ್ತು. ನಂತರ, ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಹಿಂಸೆಗಾಗಿ

ತನ್ನ ಪತಿ ಮತ್ತು ಅವನ ಎಲ್ಲಾ ಸಂಬಂಧಿಕರ ವಿರುದ್ಧ ಮೊಕದ್ದಮೆ ಹೂಡಿದಳು. ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ರಶ್ಮಿತಾ ಅನೀಶ್

Exit mobile version