ಗ್ಯಾರಂಟಿಗಳ ಭರಾಟೆಯಲ್ಲಿ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ : ಅನುದಾನ ಮೀಸಲಿಡದ ಸರ್ಕಾರ

Bengaluru: ರಾಜ್ಯದಲ್ಲಿ ಕೊರೋನಾ (highschool children free cycle) ಆವರಿಸಿಕೊಂಡ ಪರಿಣಾಮ ಪ್ರೌಢ ಶಾಲಾ (High School) ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದಲೂ ಉಚಿತವಾಗಿ ಸೈಕಲ್

(Cycle) ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮೂರನೇ ವರ್ಷ ಆದರೂ ನೀಡುತ್ತಾರೆಯೋ ಅಥವಾ ಇಲ್ಲವೇ ಎಂಬ ಅನುಮಾನ ಮಕ್ಕಳಲ್ಲಿ ಇದೀಗ ಮೂಡಿದೆ.

ಕೋವಿಡ್(Covid) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 2020-21 ಹಾಗೂ 2021 -22ರ ಶೈಕ್ಷಣಿಕ ವರ್ಷದಲ್ಲಿ ಎರಡು ವರ್ಷ ಸೈಕಲ್ ವಿತರಿಸಿಲ್ಲ. ಆದರೆ ವಿದ್ಯಾರ್ಥಿಗಳ ಈ ಸೈಕಲ್‌ ಕನಸನ್ನು

2023 3 – 24ನೇ ಶೈಕ್ಷಣಿಕ ಸಾಲಿನಲ್ಲಾದರೂ ಸಕಾಲದಲ್ಲಿ ನನಸು ಮಾಡುವುದೇ ಎಂಬ ಪ್ರಶ್ನೆ ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರಲಿ ಕಾಡಲಾರಂಭಿಸಿದೆ. ಆದರೆ 2023-24ನೇ ಸಾಲಿನ

ಬಜೆಟ್‌ನಲ್ಲಿ (Budget) ಅನುದಾನ ಮೀಸಲಿಡದ ಕಾರಣ ಮಕ್ಕಳಿಗೆ ಸೈಕಲ್‌ ವಿತರಿಸುತ್ತಿಲ್ಲ. ಸರ್ಕಾರ ಸೈಕಲ್ ಯೋಜನೆಗೆ ಆರ್ಥಿಕ ಕೊರತೆಯ ನೆಪವೊಡ್ಡಿ ಬ್ರೇಕ್ ಹಾಕಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಸುಮಾರು 5 ಲಕ್ಷ ಮಕ್ಕಳು ರಾಜ್ಯದಲ್ಲಿ ಈ ಯೋಜನೆಯ ಫಲಾನುಭವಿಗಳಿದ್ದಾರೆ. ಮಕ್ಕಳಿಗೆ ಕೆಲವೊಂದು ಕಡೆಗೆ ನಿತ್ಯ ಶಾಲೆಗೆ ತೆರಳಲು ಪೂರಕ ವ್ಯವಸ್ಥೆ ಇಲ್ಲದ ಪರಿಣಾಮ, ರಾಜ್ಯ ಸರಕಾರ

(Government) ಉಚಿತವಾಗಿ ಸೈಕಲ್ ನೀಡುವ ಯೋಜನೆ ತಂದಿತು. ಇದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (B.S Yediyurappa) ಅವರ ಕನಸಿನ ಯೋಜನೆ ಆಗಿದೆ.

ಆದರೆ ಈ ವರ್ಷ ಸೈಕಲ್ ನೀಡಲಾಗುವುದು ಎಂದು ಕಾಂಗ್ರೆಸ್‌ ಸರ್ಕಾರ ಎಲ್ಲಿಯೂ (highschool children free cycle) ಹೇಳುತ್ತಿಲ್ಲ.

ಪ್ರಸ್ತಾವನೆ ತಿರಸ್ಕರಿಸಿದ ಆರ್ಥಿಕ ಇಲಾಖೆ

ಹಿಂದಿನ ಬಿಜೆಪಿ(BJP) ಸರ್ಕಾರದ ಅವಧಿಯಲ್ಲಿ ಬೈಸಿಕಲ್‌ ನೀಡುವ ಯೋಜನೆಯ ಪ್ರಸ್ತಾವನೆಯನ್ನು ಶಾಲಾ ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂಬ ಕಾರಣವನ್ನು

ಮುಂದೊಡ್ಡಿ ಆರ್ಥಿಕ ಇಲಾಖೆ ತಿರಸ್ಕರಿಸಿತ್ತು. ಸುಮಾರು 1,800 ಕೋಟಿ ರೂ.ಗಳ ವೆಚ್ಚದಲ್ಲಿ 62 ಲಕ್ಷ ಸೈಕಲ್‌ಗಳನ್ನು 2006-07ರ ಆರಂಭದಿಂದ 2017-18 ರವರೆಗೆ ಈ ಯೋಜನೆಯು ವಿತರಿಸಿದೆ.

2014-15 ರಲ್ಲಿ ಸುಮಾರು 5.5 ಲಕ್ಷ ಬೈಸಿಕಲ್‌ಗಳಿಗೆ 180 ಕೋಟಿ ರು. ಮತ್ತು 2006-07ರಲ್ಲಿ 4.2 ಲಕ್ಷ ಬೈಸಿಕಲ್‌ಗಳಿಗೆ 85 ಕೋಟಿ ರೂ. ಈ ಯೋಜನೆಯು ವ್ಯಯಿಸಿದೆ. 172 ಕೋಟಿ ರು. ವೆಚ್ಚದಲ್ಲಿ 5.5

ಲಕ್ಷ ಬೈಸಿಕಲ್‌ 2017-18 ರಲ್ಲಿ ತಲುಪಿದ. ಆದರೆ ಇದುವರೆಗೂ ಕರೋನಾ ಸಾಂಕ್ರಾಮಿಕ ಕಾರಣದಿಂದ ಈ ಯೋಜನೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

ರಶ್ಮಿತಾ ಅನೀಶ್

Exit mobile version