ಹಿಜಾಬ್ ಅರ್ಜಿ ನಾಳೆ ಸರ್ಕಾರದ ಆದೇಶದ ಪರ ಅಡ್ವಕೇಟ್ ಜನರಲ್ ವಾದ!

hijab

ರಾಜ್ಯದಾದ್ಯಂತ ಹಿಜಾಬ್ ಮತ್ತು ಸಮವಸ್ತ್ರದ ಕುರಿತು ಕೋಲಾಹಲವೇ ಸೃಷ್ಟಿಯಾಗಿದ್ದು, ಈ ಸಂದರ್ಭದಲ್ಲಿ ಹಿಜಾಬ್ ಮತ್ತು ಸಮವಸ್ತ್ರದ ಪ್ರಕರಣವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಏಕ ಸದಸ್ಯ ಪೀಠದಿಂದ ಸಂವಿಧಾನಿಕ ಪೀಠಕ್ಕೆ ಐದನೇ ದಿನದ ಸುದೀರ್ಘ ವಾದ-ಪ್ರತಿವಾದ ನಡೆದಿದೆ.

ಯಾವುದೇ ಧಾರ್ಮಿಕ ಬಟ್ಟೆಗಳನ್ನ ಹಾಕಬಾರದು ಯತಾಸ್ಥಿತಿ ಕಾಪಾಡುವಂತ ಮಧ್ಯಾಂತರ ಆದೇಶವನ್ನು ಕೂಡ ತ್ರಿಸದಸ್ಯ ಪೀಠ ಹೊರಡಿಸಿತ್ತು. ಮಧ್ಯಂತರ ಆದೇಶವನ್ನ ಪ್ರಶ್ನಿಸಿ,
ಕಳೆದ ಮೂರು ದಿನದಿಂದ ಹಿಜಾಬ್ ಪರ ವಕೀಲರು ಹಲವು ಸಂವಿಧಾನಿಕ ಚರ್ಚೆಯನ್ನ ಮಂಡಿಸಿದ್ದಾರೆ. ಹಿಜಾಬ್ ಅನಿವಾರ್ಯವಾದ ಧಾರ್ಮಿಕ ಆಚರಣೆಯೇ ಎಂದು ಹಲವು ವಾದಗಳನ್ನ ಉಲ್ಲೇಖಿಸಿದ್ದಾರೆ.

ಇಂದು ಅಡ್ವಕೇಟ್ ಜನರಲ್ ಅವರಿಗೆ ಕೊರ್ಟ್ ಕೊನೆಯ ಸಮಯದಲ್ಲಿ ವಾದ ಮಂಡಿಸುವ ಅವಕಾಶ ಬಂದಿದ್ದರಿಂದ, ಅಡ್ವಕೇಟ್ ಜನರಲ್ ಪ್ರಭುಲಿಂಗ್ ನವಡ್ಗಿ ನನಗೆ ಸಮಯವಕಾಶ ಬೇಕಾಗಿದೆ. ನಾನು ನಾಳೆಯಿಂದ ವಾದ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮುಖ್ಯನ್ಯಾಯಮೂರ್ತಿ ನಾಳೆಗೆ ಸರ್ಕಾರದ ಆದೇಶ ಬದಲಾಗುದಿಲ್ಲ ಅಲ್ವ ಎಂದು ಹೇಳುವ ಮೂಲಕ ನಾಳೆಗೆ ವಿಚಾರಣೆ ಮುಂದೂಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನಾಳೆ ಮಧ್ಯಾಹ್ನ 2.30 ಕ್ಕೆ ಅರ್ಜಿಗಳನ್ನು ವಿಚಾರಣೆಗೆ ಮುಂದೂಡಿದೆ. ಒಟ್ಟಾರೆ ನಾಳೆ ತೀರ್ಪು ಪ್ರಕಟವಾಗಲಿದೆಯೋ? ಅಥವಾ ಮುಂದುಡುತ್ತದೆಯೊ? ಕಾದು ನೋಡಬೇಕಿದೆ.

Source : ನವೀನ್ ಶಿವಮೊಗ್ಗ

Exit mobile version