ಬೆಂಗಳೂರಿನ ವಿದ್ಯಾಸಾಗರ್ ಕಾಲೇಜಿನಲ್ಲಿ ‘ಹಿಜಾಬ್ ಕಿರಿಕ್’!

hijab

ರಾಜ್ಯದ ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಹೈಕೋರ್ಟ್ ಮೆಟ್ಟಿಲು ಹತ್ತಿದೆ ಎಂದರೆ ಈ ವಿವಾದ ಯಾವ ತಾರಕಕ್ಕೆ ಹೋಗಿದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಸದ್ಯ ಹಿಜಾಬ್ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್, ಸೋಮವಾರ ಸ್ಪಷ್ಟನೆ ನೀಡಲಿದೆ ಎಂಬುದನ್ನು ಸೂಚಿಸಿದೆ. ಈ ನಡುವೆ ತೀರ್ಪು ಹೋರಬರುವವರೆಗೂ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲ್ ಧರಿಸಿ ತರಗತಿಗಳಿಗೆ ಬರುವಂತಿಲ್ಲ!

ಶಾಲೆಯ ಸಮವಸ್ತ್ರ ಧರಿಸಿ ತರಗತಿಗಳಿಗೆ ಬರತಕ್ಕಂತದ್ದು ಎಂದು ಆದೇಶ ಹೊರಡಿಸಿತು. ಈ ಮೂಲಕ ಶಾಲಾ-ಕಾಲೇಜುಗಳಲ್ಲಿ ಕೋಮು ಗಲಬೆಗಳನ್ನು ಸೃಷ್ಟಿ ಮಾಡುವಂತಿಲ್ಲ ಎಂಬ ಮುನ್ನೆಚ್ಚರಿಕೆ ಸೂಚಿಸಿತ್ತು. ಆದರೆ ಬೆಂಗಳೂರಿನ ಶಾಲೆಯಲ್ಲಿ ಹಿಜಾಬ್ ಕುರಿತಾಗಿ ಪೋಷಕರು ಕಿರಿಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಚಂದ್ರಲೇಔಟ್ ನಲ್ಲಿರುವ ವಿದ್ಯಾಸಾಗರ್ ಶಾಲೆಯಲ್ಲಿ ಪೋಷಕರು ಜಗಳ ಮಾಡಿಕೊಂಡಿದ್ದಾರೆ. ಶಿಕ್ಷಕರ ಜೊತೆಗೆ ಪೋಷಕರ ವಾದ! 7ನೇ ತರಗತಿಯ ವಿದ್ಯಾರ್ಥಿನಿಗೆ ಶಿಕ್ಷಕಿ ಹಿಜಾಬ್ ಕುರಿತು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಜಾಬ್ ಪರ ವಾದ ಮಾಡಿದ ಪೋಷಕರು ಒಂದೆಡೆ ಆದರೆ, ಅದನ್ನು ವಿರೋಧಿಸಿ ಮಾತನಾಡಿದ ಶಿಕ್ಷಕಿ, ಇವರಿಬ್ಬರ ಮಾತಿನ ಚಕಮಿಕಿಗೆ ಸ್ಥಳೀಯ ಪೊಲೀಸರು ಸಮಾಧಾನ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಬೆಂಗಳೂರಿನ ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಅವರು ಶೀಘ್ರವೇ ಚಂದ್ರಾ ಲೇಔಟ್‍ನ ವಿದ್ಯಾಸಾಗರ್ ಶಾಲೆಗೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಶಿಕ್ಷಕಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಮುಂದೇನು ಎಂಬದನ್ನು ತಿಳಿಯಬೇಕಿದೆ!

Exit mobile version