ಈಗಿನ ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ದುವಂತೆ ನಿರ್ಮಿಸಲಾದ ಬೇಲೂರು ಚೆನ್ನಕೇಶವ ದೇವಾಲಯ!

Belur

ನಮ್ಮ ಕರ್ನಾಟಕವು(Karnataka) ದಕ್ಷಿಣ ಭಾರತದಲ್ಲಿ ಧಾರ್ಮಿಕವಾಗಿ ಪ್ರಸಿದ್ಧಿ(Popular) ಪಡೆದಿರುವ ರಾಜ್ಯವಾಗಿದೆ.

ಈ ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳನ್ನು ಕಾಣಬಹುದು. ಇದು ಮಾತ್ರವಲ್ಲ! ಪ್ರತಿ ಹಳ್ಳಿಗಳಲ್ಲೂ, ಗ್ರಾಮಗಳಲ್ಲೂ ಅಸಂಖ್ಯಾತ ದೇವಾಲಯಗಳು ಕಾಣಸಿಗುತ್ತವೆ.

ಇಲ್ಲಿನ ಹಲವು ಪುರಾತನ ದೇವಾಲಯಗಳು ದೇಶಾದ್ಯಂತ ಪ್ರಸಿದ್ಧಿ ಪಡೆದುಕೊಂಡಿವೆ. ತಮ್ಮ ಪ್ರಾಚೀನ ಶಿಲ್ಪಕಲೆ, ಕುಸುರಿ-ಕೆತ್ತನೆಯ ಕಾರ್ಯದಿಂದ ಜನ ಮೆಚ್ಚುಗೆ ಪಡೆದಿವೆ.

ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಮಂತ ಶಿಲ್ಪಕಲೆಯ ದೇವಾಲಯಗಳು ಅಂದಿನ ವೈಭವಕ್ಕೆ ಸಾಕ್ಷಿಯಾಗಿ ಇಂದಿಗೂ ಭವ್ಯವಾಗಿ ತಲೆಯೆತ್ತಿ ನಿಂತಿವೆ. ಅಂತಹ ದೇವಾಲಯಗಳಲ್ಲೊಂದು ಬೇಲೂರಿನ(Belur) ಚೆನ್ನಕೇಶವ ದೇವಸ್ಥಾನ(Chennakeshava Temple).


ಹಾಸನದ(Hassan) ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ರೂಪಕವಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ. ಬೇಲೂರನ್ನು ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು.

ಬೇಲೂರು ಹಿಂದೆ ಹೊಯ್ಸಳರ(Hoysala) ರಾಜಧಾನಿಯಾಗಿತ್ತು. ಕ್ರಿ.ಶ.1116 ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ(Chola) ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಹೆಸರಿಸಿದನು ಎಂದು ತಿಳಿದುಬಂದಿದೆ.

ಚೆನ್ನಕೇಶವ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಮಾಡಬಹುದಾದ ಅತ್ಯಂತ ಸೂಕ್ಷ್ಮ ಕೆತ್ತನೆಗಳು ಮೂಡಿಬಂದಿದ್ದು, ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ. ದೇವಸ್ಥಾನವು ವಿಜಯನಗರ(Vijayanagar) ಶೈಲಿಯಲ್ಲಿ ಗೋಪುರದಿಂದ ಕೂಡಿದ ಒಂದು ದೊಡ್ಡ ಪ್ರಾಕಾರದಿಂದ ಸುತ್ತುವರೆದಿದೆ.

ದೇಗುಲ ಒಂದು ಜಗುಲಿಯ ಮೇಲೆ ನಿಂತಿದ್ದು, ಒಂದು ದೊಡ್ಡ ಕರಂಡಕದಂತೆ ಕಾಣುತ್ತದೆ. ಈ ಮೇರುಕೃತಿಯಲ್ಲಿ ಶಿಲ್ಪಕಲಾವಿದನ ನೈಪುಣ್ಯ ಮತ್ತು ಕೈಚಳಕ ಅದ್ಭುತವಾಗಿ ಗೋಚರಿಸುತ್ತದೆ. ಈ ದೇವಸ್ಥಾನದಲ್ಲಿ 80ಕ್ಕೂ ಹೆಚ್ಚು ಮದನಿಕೆಯರ ಶಿಲ್ಪಗಳು, ನಾಟ್ಯ, ಬೇಟೆ, ಮರಗಳ ಕೆಳಗೆ ನಿಂತಿರುವುದು, ಇತ್ಯಾದಿ ಕೆತ್ತನೆಗಳಿವೆ.


ನವರಂಗದ ಕಂಬಗಳ ಮೇಲೆ ಕೆತ್ತಲಾಗಿರುವ 4 ಮದನಿಕಾ ವಿಗ್ರಹಗಳು ಅತ್ಯಾಕರ್ಷಕವಾಗಿವೆ. ಗರ್ಭಗೃಹವು ನಕ್ಷತ್ರಾಕಾರವಾಗಿದ್ದು, ಹಗಲಿನ ಬೇರೆ ಬೇರೆ ಹೊತ್ತಿನ ಗರ್ಭಗೃಹದ ಅಂಕುಡೊಂಕಾದ ಗೋಡೆಗಳ ಮೇಲೆ ಬಿದ್ದ ಬೆಳಕು ವಿಷ್ಣುವಿನ 24 ರೂಪಗಳನ್ನು ಬೇರೆ ಬೇರೆಯಾಗಿ ಕಾಣುವಂತೆ ಮಾಡುತ್ತದೆ.

ನವರಂಗದಲ್ಲಿರುವ ಶಿಲ್ಪಗಳ ಪೈಕಿ ದರ್ಪಣಸುಂದರಿ ಶಿಲ್ಪಕ್ಕೆ, ರಾಜ ವಿಷ್ಣುವರ್ಧನನ ಪತ್ನಿಯಾದ ಪರಮಸುಂದರಿ ನಾಟ್ಯರಾಣಿ ಶಾಂತಲಾದೇವಿಯು ರೂಪದರ್ಶಿಯಾಗಿದ್ದಳು ಎನ್ನಲಾಗುತ್ತದೆ. ಈ ಒಂದೇ ಕೆತ್ತನೆಯಲ್ಲಿ ದೇವಸ್ಥಾನದ ಸೌಂದರ್ಯ ಮತ್ತು ಭವ್ಯತೆ ಎತ್ತಿ ತೋರುತ್ತದೆ.

ಕಪ್ಪೆ ಚೆನ್ನಿಗರಾಯ, ಸೌಮ್ಯನಾಯಕಿ, ಆಂಡಾಳ್ ಮತ್ತು ಇನ್ನಿತರೆ ವೈಷ್ಣವ ಅಭಿವ್ಯಕ್ತಿಗಳು ಈ ದೇವಸ್ಥಾನವನ್ನು ಸುತ್ತುವರಿದಿವೆ.


ಬೇಲೂರಿನಲ್ಲಿ ಚೆನ್ನಕೇಶವ ಸಂಕೀರ್ಣವು 396 ಅಡಿಗಳಷ್ಟು ಅಂಕಣದ ಮೂಲಕ 443.5 ಅಡಿ ಎತ್ತರವನ್ನು ಹೊಂದಿದ್ದು, ಹಲವಾರು ಹಿಂದೂ ದೇವಾಲಯಗಳು ಮತ್ತು ಸಣ್ಣ ಗೋಡೆಯೊಳಗಿನ ಗೋಡೆಗಳಿಂದ ಆವೃತವಾಗಿದೆ.

ಗೋಡೆಯ ಸಂಕೀರ್ಣದಲ್ಲಿ ದೇವಾಲಯಗಳು ಮತ್ತು ಸ್ಮಾರಕಗಳನ್ನು ನೋಡಬಹುದು. ಕೇಶವ ದೇವಸ್ಥಾನದ ದಕ್ಷಿಣಕ್ಕೆ 105 ಅಡಿಗಳಷ್ಟು 124 ಅಡಿಗಳಷ್ಟು ಅಳತೆಯಿರುವ ಕಪ್ಪೆ ಚೆನ್ನಿಗರಾಯ ದೇವಸ್ಥಾನವಿದೆ.

ಇದು ಒಳಗೆ ಎರಡು ಗರ್ಭಗುಡಿಯನ್ನು ಹೊಂದಿದ್ದು, ಒಂದನ್ನು ವೇಣುಗೋಪಾಲನಿಗೆ ಸಮರ್ಪಿಸಲಾಗಿದೆ. ಈ ದೇವಸ್ಥಾನವನ್ನು ಕಪ್ಪೆ ಚೆನ್ನಿಗರಾಯ ಎಂದು ಕರೆಯಲಾಗುತ್ತದೆ. ಕೇಶವ ದೇವಸ್ಥಾನದ ನೈರುತ್ಯಕ್ಕೆ ಸೌಮ್ಯನಾಯಕಿ ಎಂದರೆ ಲಕ್ಷ್ಮೀ ದೇವಿಗೆ ಒಂದು ಸಣ್ಣ ದೇವಸ್ಥಾನವಿದೆ.

ಇದು 12ನೇ ಶತಮಾನಕ್ಕೆ ಸೇರಿದೆ. ರಂಗನಾಯಕಿ ದೇವಾಲಯ ಎಂದೂ ಕರೆಯಲಾಗುವ ಅಂಡಾಲ್ ದೇವಸ್ಥಾನವು ಕೇಶವ ದೇವಸ್ಥಾನದ ವಾಯವ್ಯ ಭಾಗದಲ್ಲಿದೆ. ಅದರ ಹೊರಗಿನ ಗೋಡೆಯು ಆನೆಗಳು ಮತ್ತು ಪ್ರಕೃತಿಯಂತಹ ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿವೆ.
Exit mobile version