ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿರುವ ಕನ್ನಡ ಧ್ವಜದ ಇತಿಹಾಸವೇ ರೋಚಕ!

Karnataka : 1973ರಕ್ಕಿಂತ ಮೊದಲು ಮೈಸೂರು(History Of Karnataka Flag) ಮಹಾಸಂಸ್ಥಾನವೆಂದೇ ಪ್ರಸಿದ್ದವಾಗಿತ್ತು ನಮ್ಮ ಅಂದದ ಬೀಡು ಕರ್ನಾಟಕ. ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು, ಕರು ಹಾಗೂ ನಾಡು ಎಂಬ ಎರಡು ಪದಗಳು ಸೇರಿ ಕರ್ನಾಟಕವಾಗಿದೆ.

ಭಾರತದಲ್ಲಿ ಕರ್ನಾಟಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6ನೇ ದೊಡ್ಡ ರಾಜ್ಯವಾಗಿದೆ. ನಮ್ಮ ನಾಡು ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ.

ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ, ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತ.

ನಮ್ಮ ಹಿರಿಯರು ಮಾಡಿಕೊಟ್ಟ ಹಳದಿ ಕೆಂಪು ಧ್ವಜ ನಮ್ಮೆಲ್ಲರ ಏಕತೆಯ ಸಂಕೇತವೂ ಹೌದು. ರಾಜ್ಯೋತ್ಸವ ಸಂದರ್ಭಗಳಲ್ಲಿ ಕನ್ನಡ ಬಾವುಟ ಹಾರಿಸಿ, ಎದೆಯುಬ್ಬಿಸಿ ನಡೆದಾಡುವ ನಾವು,

ಕನ್ನಡ ಬಾವುಟವನ್ನು ಹುಟ್ಟುಹಾಕಿದ ಮಹಾನುಭಾವರ ಬಗ್ಗೆ ಕೂಡ ತಿಳಿಯುವುದು ಅಗತ್ಯ. ಕನ್ನಡ ಧ್ವಜದ ಇತಿಹಾಸ ಹೀಗಿದೆ ನೋಡಿ.

https://fb.watch/gwHRwM25LI/ ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು ?


ಸ್ವಾತಂತ್ರ್ಯ ನಂತರ ಬೆಂಗಳೂರಿನಲ್ಲಿ(Bengaluru) ಅನ್ಯ ಭಾಷಿಕರ ಪ್ರಾಭಲ್ಯ ಬಲಿಷ್ಠವಾಗಿತ್ತು. ಅಂತಹ ಸ್ಥಿತಿಯಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಕನ್ನಡ ಬಾವುಟವನ್ನು ರಚಿಸಿದವರು ಎಂ. ರಾಮಮೂರ್ತಿ ಅವರು.

ಗಾಂಧೀಜಿಯವರ ವಿಚಾರಧಾರೆಗಳಿಂದ ಚಳುವಳಿಯ ಹಾದಿಹಿಡಿದ ಸೀತಾರಾಮಶಾಸ್ತ್ರಿ ಅವರ ಮಗನೇ ರಾಮಮೂರ್ತಿ ಅವರು.

1965ರಲ್ಲಿ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಅದನ್ನು ಹುಟ್ಟು ಹಾಕಲಾಯಿತು, ಇಂದು ಅದು ಕನ್ನಡಿಗರ ಅಸ್ಮಿತೆಯಾಗಿದೆ.

ಈ ಧ್ವಜವನ್ನು 1965 ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತು.

ಕನ್ನಡ ಅಥವಾ ಕರ್ನಾಟಕದ ಧ್ವಜ ದ್ವಿವರ್ಣ ಧ್ವಜವಾಗಿದ್ದು, ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ.

ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.

ಇದನ್ನೂ ಓದಿ : https://vijayatimes.com/karnataka-ratna-appu/


ಹಾಗೆಯೇ, ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳನ್ನು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪ್ರತಿನಿತ್ಯ ವಿವಿಧ ಕಾರಣಗಳಿಗೆ ಬಳಸುತ್ತಾರೆ.

ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.

ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ನಾವು ಕನ್ನಡಿಗರು ಕ್ರಾಂತಿಗೂ ಸೈ, ಶಾಂತಿಗೂ ಸೈ ಎಂಬ ಸಂದೇಶವನ್ನೂ ಸೂಚಿಸುತ್ತದೆ ನಮ್ಮ ಕನ್ನಡ ಧ್ವಜ.

Exit mobile version