Savithribai Phule : ಶಿಕ್ಷಕ ತರಬೇತಿ ಪಡೆದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ!

Teacher

History : ವೇದಕಾಲದಿಂದಲೂ ವಿದ್ಯೆ ಎನ್ನುವುದು ಕೆಲವೇ ಜನರ ಸ್ವತ್ತಾಗಿತ್ತು. ವಿದ್ಯೆಯಿಂದ ವಂಚಿತರಾದ ಶೂದ್ರರು ಮತ್ತು ಮಹಿಳೆಯರು ಗುಲಾಮರಂತೆ ಬದುಕಬೇಕಾಗಿತ್ತು.

ಆದರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ವಿದ್ಯೆಯ ಬಾಗಿಲನ್ನು ತೆರೆದವರು ಮಹಾತ್ಮಾ ಜ್ಯೋತಿಬಾ ಫುಲೆ(Jyothiba Phule).

ಮೊದಲ ಮಹಿಳಾ ಶಿಕ್ಷಕಿ ಅವರ ಧರ್ಮ ಪತ್ನಿಯಾದ ಮಾತೆ ಸಾವಿತ್ರಿಬಾಯಿ ಫುಲೆ(Savithribai Phule). ಶಿಕ್ಷಣದ ಮುಖಾಂತರ ಮಾತ್ರ,

ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ತರಲು ಸಾಧ್ಯ ಎಂಬುದು ಮಹಾತ್ಮಾ ಫುಲೆ ಅವರ ಸಿದ್ಧಾಂತವಾಗಿತ್ತು.

ಅದಕ್ಕೆಂದೇ ಅವರು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು, ಶೂದ್ರರು-ಅತಿಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಮಹಿಳೆಯರಿಗಾಗಿ ಪುಣೆ(Pune) ನಗರದ ತಾತ್ಯಾ ಸಾಹೇಬ ಭಿಡೆ ಎಂಬುವವರ ಮನೆಯಲ್ಲಿ ಶಾಲೆಯೊಂದನ್ನು ತೆರೆದರು.

ಇದನ್ನೂ ಓದಿ : https://vijayatimes.com/lucky-man-kannada-cinema-review/

1848ರಲ್ಲಿ ಪ್ರಾರಂಭವಾದ ಈ ಶಾಲೆ ಭಾರತದ ಪ್ರಪ್ರಥಮ(First time) ಖಾಸಗಿ ಮಹಿಳಾ ಶಾಲೆ ಎಂದು ಕರೆಯಲ್ಪಟ್ಟಿತು. ಆ ಕಾಲದಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುವುದೆಂದರೆ ಸಾಮಾನ್ಯ ಸಂಗತಿಯಾಗಿರಲಿಲ್ಲ.

ಶಾಲೆಯಲ್ಲಿ(School) ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ.

ಇಂತಹ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ವಿದ್ಯೆ ಕಲಿಸಿ ಅವರನ್ನೇ ತಮ್ಮ ಶಾಲೆಯ ಶಿಕ್ಷಕಿಯನ್ನಾಗಿ ನೇಮಕ ಮಾಡಿದರು.

ಆ ಕಾಲದಲ್ಲಿ ಸ್ತ್ರೀಯರು ಶಾಲೆಗೆ ಹೋಗುವುದಿರಲಿ, ಮನೆಯಿಂದ ಕೆಲವೇ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಲು ಅವಕಾಶವಿತ್ತು.

ಅವಳು ಗಂಡಸರೊಂದಿಗೆ ಮಾತಾಡುವುದು, ತನ್ನ ಗಂಡನಿಗೆ ಮತ್ತು ತನ್ನ ಕುಟುಂಬಕ್ಕೆ ದ್ರೋಹ ಬಗೆದಂತೆ ಎಂದು ಪರಿಗಣಿಸಲಾಗುತ್ತಿತ್ತು.

ಹಾಗಾಗಿ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಿಕೊಡಲು ಕೂಡಾ ತಂದೆ ತಾಯಿಯರು ಹಿಂದೇಟು ಹಾಕತೊಡಗಿದ್ದರು. ಅವರ ಮನವೊಲಿಸಬೇಕಾದರೆ ಮಹಾತ್ಮಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತುಂಬಾ ಕಷ್ಟಪಡಬೇಕಾಯಿತು.


ಫುಲೆ ದಂಪತಿಗಳು ಪ್ರಾರಂಭಿಸಿದ ಈ ಮೊದಲ ಮಹಿಳಾ ಶಾಲೆಗೆ ಪ್ರಪ್ರಥಮವಾಗಿ ಆರು ಜನ ಬಾಲಕಿಯರು ಪ್ರವೇಶ ಪಡೆದರು.

ಅನ್ನಪೂರ್ಣಾ ಜೋಶಿ, ಸುಮತಿ ಮೊಕಾಶಿ, ದುರ್ಗಾ ದೇಶಮುಖ, ಮಾಧುರಿ ಥಟ್ಟೆ, ಸೋನು ಪವಾರ್ ಮತ್ತು ಜಾನಿ ಕರದಿಲೆ, ಇವರೇ ಭಾರತದ ಮೊಟ್ಟ ಮೊದಲ ಮಹಿಳಾ ಶಾಲೆಯ ಮೊದಲ ವಿದ್ಯಾರ್ಥಿನಿಯರು.

ಇದನ್ನೂ ಓದಿ : https://vijayatimes.com/shoaib-akthar-congratulates-virat-kohli/

ಇವರೆಲ್ಲ ಆರು ವರ್ಷ ಕೆಳಗಿನವರಾಗಿದ್ದರು. ಇವರಲ್ಲಿ ನಾಲ್ಕು ಜನ ಬಾಲಕಿಯರು ಬ್ರಾಹ್ಮಣರು, ಒಬ್ಬಾಕೆ ಮರಾಠಾ ಮತ್ತು ಇನ್ನೊಬ್ಬಾಕೆ ಕುರುಬ ಜಾತಿಗೆ ಸೇರಿದವರಾಗಿದ್ದರು.

ಶಿಕ್ಷಕ ತರಬೇತಿ ಪಡೆದ ನಂತರ ಸಾವಿತ್ರಿಬಾಯಿ ಫುಲೆ ಈ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ನೇಮಕಗೊಂಡರು. ಹೀಗೆ, ಸಾವಿತ್ರಿಬಾಯಿ ಫುಲೆಯವರು, ಶಿಕ್ಷಕ ತರಬೇತಿ ಪಡೆದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Exit mobile version