Home Remedy for Burn Injury: ಸಾಮಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಗಾಯಗಳಾದರೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಮಾಡಿಕೊಳ್ಳಬೇಕು. ಆದರೆ ಈ
ಸೌಲಭ್ಯವಿಲ್ಲದಿದ್ದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಟ್ಟ ಗಾಯದ (Burn Injury) ಉರಿಯನ್ನು ಕಡಿಮೆ ಮಾಡಬಹುದು. ಹಾಗಾದ್ರೆ ಯಾವ ಯಾವ ಪದಾರ್ಥಗಳಿಂದ ಸುಟ್ಟ ಗಾಯಗಳನ್ನು
(Home Remedy for Burn Injury) ವಾಸಿಮಾಡಬಹುದೆಂದು ತಿಳಿಯೋಣ….
ತೆಂಗಿನ ಎಣ್ಣೆ:
ಎಲ್ಲ ರೀತಿಯ ಗಾಯಗಳಿಗೂ ತೆಂಗಿನ ಎಣ್ಣೆಯನ್ನು (Coconut Oil) ಹಚ್ಚಿದರೆ ಬೇಗ ವಾಸಿಯಾಗುತ್ತದೆ ಎಂಬುದು ಅನೇಕರಿಗೆ ತಿಳಿದಿರುವ ವಿಚಾರ. ಸುಟ್ಟ ಗಾಯಗಳಾದಾಗ ಆ ಜಾಗಕ್ಕೆ ಕೊಬ್ಬರಿ
ಎಣ್ಣೆ ಹಚ್ಚಿರಿ. ತೆಂಗಿನ ಎಣ್ಣೆಯು ವಿಟಮಿನ್ ಇ (Vitamin E) ಅನ್ನು ಹೊಂದಿರುತ್ತದೆ. ಇದು ಚರ್ಮದ ಮೇಲೆ ಇರುವ ಸುಟ್ಟ ಗಾಯದ ಗುರುತುಗಳನ್ನು ಕಡಿಮೆ ಮಾಡುತ್ತದೆ.
ಅಲೋವೆರಾ:
ಸುಟ್ಟ ಚರ್ಮದ ಉರಿಯನ್ನು ಅಲೋವೆರಾವು (Aloevera) ಕಡಿಮೆ ಮಾಡುವುದಲ್ಲದೆ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸುಟ್ಟಗಾಯಗಳ ಸುತ್ತ ರಕ್ತಪರಿಚಲನೆಯನ್ನು
ಹೆಚ್ಚಿಸುತ್ತದೆ. ಇನ್ನು ಆ ಸುಟ್ಟ ಜಾಗದಲ್ಲಿ ಬ್ಯಾಕ್ಟೀರಿಯಾದ (Bacteria) ಬೆಳವಣಿಗೆಯನ್ನು ಕಡಿಮೆ ಮಾಡುವುದಲ್ಲದೆ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ, ಅಲೋವೆರಾ ಗಿಡದಿಂದ ನೇರವಾಗಿ
ತೆಗೆದ ಶುದ್ಧ ಅಲೋವೆರಾ ಜೆಲ್ ಅನ್ನು ಮಾತ್ರ ಬಳಸಬೇಕು.
ಲ್ಯಾವೆಂಡರ್ ಎಣ್ಣೆ:
ಲಿನಾಲಿಲ್ ಅಸಿಟೇಟ್ ಮತ್ತು ಬೀಟಾ-ಕ್ಯಾರಿಯೋಫಿಲೀನ್ ಲ್ಯಾವೆಂಡರ್ ಎಣ್ಣೆಯಲ್ಲಿ (Lavender Oil) ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಇದು ಸುಟ್ಟ ಗಾಯಗಳಿಗೆ ಚಿಕಿತ್ಸೆ
ನೀಡಲು ಸಹಾಯ ಮಾಡುತ್ತದೆ. ಗಾಯವನ್ನು ಬೇಗ ಗುಣಪಡಿಸುತ್ತದೆ.
ಟೀ ಟ್ರೀ ಆಯಿಲ್:
ಟೀ ಟ್ರೀ ಎಣ್ಣೆಯು (Tea Tree Oil) ನಂಜುನಿರೋಧಕ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ಸಣ್ಣ ಸುಟ್ಟಗಾಯಗಳನ್ನು ನಿಯಂತ್ರಿಸುತ್ತದೆ.
ಜೇನುತುಪ್ಪ:
ಮಧ್ಯಮ ಪ್ರಮಾಣದ ಸುಟ್ಟ ಗಾಯಗಳಿಗೆ ಜೇನುತುಪ್ಪವನ್ನು (Honey) ಹಚ್ಚಿರಿ. ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸ್ವಭಾವವನ್ನು ಹೊಂದಿದೆ. ಮೊದಲ ಹಂತದ ಸುಟ್ಟ
ಗಾಯಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನು ಓದಿ: ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ನ ನಾಚಿಕೆಯಿಲ್ಲದ ಸ್ವಜನಪಕ್ಷಪಾತವನ್ನು ಸಮರ್ಥಿಸಲು ಸಾಧ್ಯವಿಲ್ಲ – ನಟ ಚೇತನ್ ಟೀಕೆ
- ಭವ್ಯಶ್ರೀ ಆರ್ ಜೆ