ನೀವು ಹೋಮಿಯೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದೀರಾ? ಹಾಗಾದ್ರೆ ಈ ಸೂಚನೆಗಳನ್ನು ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ (Homeopathy) ಔಷಧಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ರೋಗಗಳಿಗೆ ಅಲೋಪತಿ (Allopathy) ಔಷಧಿಗಿಂತ ಹೋಮಿಯೋಪತಿ ಔಷಧಿಗಳೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಹೀಗಾಗಿಯೇ ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಹೋಮಿಯೋಪತಿ ಔಷಧಿಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಸಾಮಾನ್ಯ ತಿಳುವಳಿಕೆ ಅನೇಕ ಜನರಿಗೆ ಇಲ್ಲ. ಹೋಮಿಯೋಪತಿ ಔಷಧವನ್ನು ತೆಗೆದುಕೊಳ್ಳಲು ತನ್ನದೇ ಆದ ಕೆಲವು ವಿಶೇಷ ನಿಯಮಗಳನ್ನು ಹೊಂದಿದೆ. ನೀವು ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಮಾತ್ರ ಈ ಔಷಧಿ ಪರಿಣಾಮ ಉಂಟು ಮಾಡುತ್ತದೆ. ಹೋಮಿಯೋಪತಿ ಔಷಧಿ ತೆಗೆದುಕೊಳ್ಳಲು ಅನುಸರಿಸಬೇಕಾದ ನಿಯಮಗಳೆಂದರೆ,

• ಬಲವಾದ ಸೂರ್ಯನ ಬೆಳಕು ಇರುವಲ್ಲಿ ಈ ಔಷಧಿಯನ್ನು ಇಡಬೇಡಿ. ಶಾಖ ಇದರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

• ಯಾವಾಗಲೂ ತಂಪಾದ ಸ್ಥಳದಲ್ಲಿ ಸಂಗ್ರಹಿಸಿ, ಬಿಸಿ ಸ್ಥಳದಲ್ಲಿ ಇರಿಸಿದಾಗ ಅದರ ದ್ರವವು ಆವಿಯಾಗುತ್ತದೆ. ಕೆಲವೊಮ್ಮೆ ವಿಷತ್ವ ಶೇಖರಣೆಯಾಗುತ್ತದೆ.
• ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವವರು ಸಾಧ್ಯವಾದಷ್ಟು ಹುಳಿ ಆಹಾರದಿಂದ ದೂರವಿರಿ.

• ಔಷಧಿಯನ್ನು ತೆಗೆದುಕೊಂಡ ನಂತರ ಔಷಧಿಯ ಬಾಟಲಿಯನ್ನು (Bottle) ಬಿಗಿಯಾಗಿ ಮುಚ್ಚಿ. ಔಷಧಿ ಬಾಟಲಿಯನ್ನು ಎಂದಿಗೂ ತೆರೆದಿಡಬೇಡಿ.

• ನೀವು ಹೋಮಿಯೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೆ ಕಾಫಿ ಮತ್ತು ಟೀ ಕುಡಿಯುವುದನ್ನು ತಪ್ಪಿಸಿ.
• ನೀವು ಯಾವುದೇ ಕಾಯಿಲೆಗೆ ಹೋಮಿಯೋಪತಿ ಔಷಧಿ ತೆಗೆದುಕೊಳ್ಳದಿದ್ದರೆ, ಬೇರೆ ಔಷಧಿಗಳಿಂದ ದೂರವಿರಿ.

• ಟಿ.ವಿ, ಮೊಬೈಲ್, ಫ್ರಿಡ್ಜ್ ಮುಂತಾದ ಎಲೆಕ್ಟ್ರಾನಿಕ್ (Electronic) ಸಾಧನಗಳಿಂದ ದೂರವಿರಿಸಿ.

• ಹೋಮಿಯೋಪತಿ ಔಷಧವನ್ನು ಕೈಯಲ್ಲಿ ತೆಗೆದುಕೊಂಡು ತಿನ್ನಬಾರದು. ಮುಚ್ಚಳದ ಮೂಲಕ ಬಾಯಿಗೆ ಹಾಕಿಕೊಂಡು ನೇರವಾಗಿ ತಿನ್ನಿರಿ.

• ಔಷಧಿಯನ್ನು ತೆಗೆದುಕೊಂಡ 15 ನಿಮಿಷಗಳ ವರೆಗೆ ಏನನ್ನೂ ತಿನ್ನಬೇಡಿ.

• ಹೋಮಿಯೋಪತಿ ಔಷಧಿ ತೆಗೆದುಕೊಂಡ ನಂತರ ಏನನ್ನೂ ಕುಡಿಯಬೇಡಿ, ಹಲ್ಲುಜ್ಜ ಬೇಡಿ.

• ಔಷಧಿಯನ್ನು ನಾಲಿಗೆ ಅಡಿಯಲ್ಲಿ ಒತ್ತಿ ಮತ್ತು ಅದನ್ನು ಹೀರುವಂತೆ ಮಾಡಿ. ಆಗ ಔಷಧಿಯೂ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ.

Exit mobile version