ಮಾನಸಿಕ ಒತ್ತಡ ಅತಿಯಾದ್ರೆ ಈ ರೋಗಗಳು ನಿಮ್ಮನ್ನು ಕಾಡಬಹುದು

TIME

ಇತ್ತೀಚಿನ ವರದಿಯೊಂದರ(Report) ಪ್ರಕಾರ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಶೇ.80 ರಷ್ಟು ಜನರು ಮಾನಸಿಕ ಒತ್ತಡದಿಂದ(Mental Stress) ಬಳಲುತ್ತಿದ್ದಾರೆ ಎನ್ನಲಾಗಿದೆ. 

ಅತಿಯಾದ ಕೆಲಸ, ಆಧುನಿಕ ಜೀವನ ಪದ್ದತಿ, ಆಹಾರ, ಹವ್ಯಾಸಗಳು, ಗೆಳೆಯರು ಹೀಗೆ ಅನೇಕ ಅಂಶಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಹದಿಹರೆಯದವರು ಮಾನಸಿಕ ಒತ್ತಡವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಕಲಿಯಬೇಕಿದೆ.

ಇನ್ನು ಮಾನಸಿಕ ತಜ್ಞರ ಪ್ರಕಾರ, ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿಯ ಮೆದುಳಿನಲ್ಲಿನ ನರತಂತುಗಳೂ ಒತ್ತಡಕ್ಕೆ ತಕ್ಕಂತೆಯೇ ವರ್ತಿಸುತ್ತವೆ. ಆಗ ಆ ವ್ಯಕ್ತಿಯು ಒತ್ತಡದೊಂದಿಗೆ ವರ್ತಿಸಲು ತೊಡಗುತ್ತಾರೆ. ಒತ್ತಡ ಮೀತಿ ಮೀರುತ್ತದೆಯೋ ಆಗ ಉದ್ವೇಗ, ಎದೆನೋವು, ಆತಂಕ, ಖಿನ್ನತೆ, ಲೈಂಗಿಕ ನಿರಾಸಕ್ತಿ, ಸುಸ್ತು, ಅತಿಯಾದ ಕೋಪ ಕಾಣಿಸಿಕೊಳ್ಳುತ್ತವೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಉಂಟಾಗುವ  ಪರಿಣಾಮಗಳೆಂದರೆ,

ಜೀರ್ಣ ವ್ಯವಸ್ಥೆ : ಮಾನಸಿಕ ಒತ್ತಡ ಜೀರ್ಣ ವ್ಯವಸ್ಥೆ ಮೇಲೂ ತನ್ನ ಪ್ರಭಾವ ಬೀರುತ್ತದೆ. ಪರಿಣಾಮವಾಗಿ ಮಲಬದ್ದತೆ, ಅತಿಸಾರ, ವಾಂತಿ, ಹೊಟ್ಟೆಯಲ್ಲಿ ನೋವು ಎದುರಾಗುತ್ತವೆ. ಏಕೆಂದರೆ, ಮಾನಸಿಕ ಒತ್ತಡದಲ್ಲಿದ್ದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ.

ಹೃದಯ ವ್ಯವಸ್ಥೆ : ಒತ್ತಡದ ಸಮಯದಲ್ಲಿ ಹೃದಯದ ಬಡಿತದ ವೇಗ ಹೆಚ್ಚುತ್ತದೆ. ಇದರಿಂದ ಹೃದಯ ಸಂಬಂಧಿ ರೋಗಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಾಗುತ್ತವೆ.

ಸ್ನಾಯುಗಳ ವ್ಯವಸ್ಥೆ : ಮಾನಸಿಕ ಒತ್ತಡದ ಸಂದರ್ಭದಲ್ಲಿ ದೇಹದ ಸ್ನಾಯುಗಳ ಸೆಳೆತ ಉಂಟಾಗುತ್ತದೆ. ಪರಿಣಾಮವಾಗಿ ಮೂಳೆ ನೋವು, ಬೆನ್ನು ನೋವು, ಭುಜ ನೋವು ಆವರಿಸುತ್ತದೆ. ಈ ಸಂದರ್ಭದಲ್ಲಿ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಬೇಕು.

ಉಸಿರಾಟದ ವ್ಯವಸ್ಥೆ : ಒತ್ತಡದ ಸಮಯದಲ್ಲಿ  ಉಸಿರಾಟ ತೀವ್ರವಾಗುವುದನ್ನು ಗಮನಿಸಲಾಗಿದೆ. ಇದು ಶ್ವಾಸವ್ಯವಸ್ಥೆಗೇ ಮಾರಕವಾಗಿ ಪರಿಣಮಿಸಬಹುದು.

ಸಂತಾನೋತ್ಪತ್ತಿ ವ್ಯವಸ್ಥೆ :  ಮಾನಸಿಕ ಒತ್ತಡ ನಿಮಿರು ದೌರ್ಬಲ್ಯಕ್ಕೂ ಕಾರಣವಾಗಿ, ಲೈಂಗಿಕ ಬಯಕೆಗಳ ಉದ್ದೀಪನವಾಗದೇ ಹೋಗಬಹುದು. ಇದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

ರೋಗ ನಿರೋಧಕ ವ್ಯವಸ್ಥೆ : ಸಾಮಾನ್ಯವಾಗಿ ಅತಿಯಾದ ಮಾನಸಿಕ ಒತ್ತಡಲ್ಲಿಯೇ ಇರುವ ವ್ಯಕ್ತಿಗಳು ಹೆಚ್ಚು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಏಕೆಂದರೆ, ಮಾನಸಿಕ ಒತ್ತಡದ ಸಂದರ್ಭದಲ್ಲಿ ಬಿಡುಗಡೆಯಾಗುವ ಕೆಲವು ರಸದೂತಗಳು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ.

Exit mobile version