ಪತ್ನಿಯ ಕೆಲಸದ ಬಗ್ಗೆ ಅಸಮಾಧಾನ ; ಹಿಗ್ಗಾಮುಗ್ಗಾ ಥಳಿಸಿ, ವೀಡಿಯೋ ಮಾಡಿ ಆನ್‌ಲೈನ್ ನಲ್ಲಿ ಬಿಟ್ಟ ಪತಿ!

Kerala : ಕೇರಳದ ತಿರುವನಂತಪುರಂನಲ್ಲಿ (Husband Tortured Wife) 27 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನಬಂದಂತೆ ಥಳಿಸಿದ್ದು, ಆ ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ, ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಆರೋಪಿಯನ್ನು ದಿಲೀಪ್ (Dilip)ಎಂದು ಗುರುತಿಸಲಾಗಿದ್ದು, ಆತನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಪತ್ನಿ ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲಸಕ್ಕೆ ಹೋಗಿದ್ದಾಳೆ ಎಂಬ ಕಾರಣಕ್ಕೆ ದಿಲೀಪ್ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ಹೇಳಲಾಗಿದೆ.

https://youtu.be/uRVYaOg7B1U

ವೀಡಿಯೋದಲ್ಲಿ ದಿಲೀಪ್ ತನ್ನ ಪತ್ನಿಯನ್ನು ಅಮಾನುಷವಾಗಿ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಾಲ ತೀರಿಸಲು ಕೆಲಸಕ್ಕೆ ಹೋಗುತ್ತಿದ್ದೆ ಎಂದು ಆತನ ಪತ್ನಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಪತಿ ದಿಲೀಪ್ ತನ್ನ ಪತ್ನಿಗೆ ಮನಬಂದಂತೆ ಥಳಿಸಿದ್ದು, ಆಕೆಯ (Husband Tortured Wife) ಮುಖದಿಂದ ರಕ್ತ ಬರುವ ಮಟ್ಟಿಗೆ ಬಲವಾಗಿ ಹೊಡೆದಿದ್ದಾನೆ.

ಇದನ್ನೂ ಓದಿ : https://vijayatimes.com/simple-tips-for-good-health/

ವೀಡಿಯೋ ಸಂಪೂರ್ಣ ಪರಿಶೀಲಿಸಿದಾಗ ತಿಳಿದುಬಂದದ್ದು, ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಪತಿ ದಿಲೀಪ್, ಪತ್ನಿ ತಾನು ಕೆಲಸಕ್ಕೆ ಹೋಗುವುದಿಲ್ಲ, ಬಿಡುತ್ತೇನೆ ಎಂದು ಕೈಮುಗಿದು ಕೇಳಿಕೊಂಡಾಗ ಬಿಟ್ಟಿದ್ದಾನೆ. ಈ ಘಟನೆಯ ನಂತರ ಆತನ ಪತ್ನಿ ಮಲಯಂಕಿಝು ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ನಿ ಕೊಟ್ಟ ದೂರು (complaint) ಹಾಗೂ ದಾಖಲೆಯ ಆಧಾರದ ಮೇರೆಗೆ ಪತಿ ದಿಲೀಪ್ ಅನ್ನು ಬಂಧಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆತನ ವಿರುದ್ಧ ಸೆಕ್ಷನ್ 307 (ಕೊಲೆಯ ಯತ್ನ), 498 (ಎ) (ಹೆಣ್ಣಿನ ಪತಿ ಅಥವಾ ಪತಿ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಶಿಕ್ಷೆ),

324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಅಥವಾ ಅಂದರೆ) ಮತ್ತು ಭಾರತೀಯ ದಂಡ ಸಂಹಿತೆಯ 294 (B) (ಯಾವುದೇ ಅಶ್ಲೀಲ ಹಾಡು, ಬಲ್ಲಾಡ್ ಅಥವಾ ಪದಗಳನ್ನು ಹಾಡುವುದು,

ಪಠಿಸುವುದು ಅಥವಾ ಉಚ್ಚರಿಸುವುದು, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಹತ್ತಿರ) ಭಾರತೀಯ ಪೆನಲ್ ಕೋಡ್ (Indian Penal Code) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Exit mobile version