Visit Channel

‘ಕತ್ತೆ ಕತ್ತೆಯಾಗಿಯೇ ಇರುತ್ತೆ’ ; ವೈರಲ್ ಆಯ್ತು ಪಾಕಿಸ್ತಾನದ ಮಾಜಿ ಪ್ರಧಾನಿಯ ‘ಕತ್ತೆ’ ಹೇಳಿಕೆ!

pakistan

ಪಾಕಿಸ್ತಾನದ(Pakistan) ಮಾಜಿ ಪ್ರಧಾನಿ(Former Primeminister) ಇಮ್ರಾನ್ ಖಾನ್(Imran Khan) ಅವರು ಬ್ರಿಟನ್‌ನಲ್ಲಿ ಇರುವ ಕುರಿತು ಕಾಮೆಂಟ್ ಮಾಡುವ ಮೂಲಕ ಮತ್ತೊಮ್ಮೆ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ.

pakistan

ಹೌದು, ಕಂಟೆಂಟ್ ರಚನೆಕಾರರಾದ ಜುನೈದ್ ಅಕ್ರಮ್, ಮುಝಮ್ಮಿಲ್ ಹಸನ್ ಮತ್ತು ತಲ್ಹಾ ಅವರೊಂದಿಗಿನ ಮಾತುಕತೆಯ ಪಾಡ್‌ಕ್ಯಾಸ್ಟ್‌ನಲ್ಲಿ, ಇಮ್ರಾನ್ ಖಾನ್ ಅವರು ತಮ್ಮ ವಾಸ್ತವ್ಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಆ ಪಾಡ್‌ಕ್ಯಾಸ್ಟ್‌ನ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮತ್ತು ಪ್ರತಿಕ್ರಿಯೆಗಳ ಕೋಲಾಹಲವನ್ನು ಹುಟ್ಟುಹಾಕಿದೆ. ಪಾಡ್‌ಕ್ಯಾಸ್ಟ್‌ನಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಯುಕೆಯಲ್ಲಿದ್ದಾಗ ತಮ್ಮ ಅನುಭವದ ಬಗ್ಗೆ ಮಾತನಾಡಿದರು.

“ನಾನು ಯುಕೆಯಲ್ಲಿ ತುಂಬಾ ಸ್ವಾಗತವನ್ನು ಪಡೆದುಕೊಂಡೆ. ಆದರೆ ನಾನು ಅದನ್ನು ನನ್ನ ಮನೆ ಎಂದು ಪರಿಗಣಿಸಲಿಲ್ಲ. ನಾನು ಯಾವಾಗಲೂ ಮೊದಲು ಪಾಕಿಸ್ತಾನಿ. ಕತ್ತೆಯ ಮೇಲೆ ರೇಖೆಗಳನ್ನು ಹಾಕಿದರೆ ಅದು ಜೀಬ್ರಾ ಆಗುವುದಿಲ್ಲ. ಕತ್ತೆ ಕತ್ತೆಯಾಗಿಯೇ ಉಳಿಯುತ್ತೆ ಎಂದು ಹೇಳಿದರು. ಈ ತುಣುಕನ್ನು ಹಸನ್ ಜೈದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

pakistan

ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ವೇಳೆ ದೇಶದ ನ್ಯಾಶನಲ್ ಅಸೆಂಬ್ಲಿಯ 174 ಸದಸ್ಯರು ಇಮ್ರಾನ್ ಖಾನ್ ವಿರುದ್ಧ ಮತ ಚಲಾಯಿಸಿದ್ದರಿಂದ ಅವರು ಅಧಿಕಾರದಿಂದ ಹೊರಗುಳಿದಿದ್ದರು. ವಿರೋಧ ಪಕ್ಷದ ನಾಯಕ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್, ಇಮ್ರಾನ್ ಖಾನ್ ಅವರ ಬದಲಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.