ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬಂದು ಹೆಚ್ಚುವರಿ ಶುಲ್ಕ ವನ್ನು ವಿಧಿಸದೆ ಪಾರ್ಸೆಲ್‌ ಬುಕ್ಕಿಂಗ್‌ ಮಾಡಿಕೊಳ್ಳಲಿದೆ ಭಾರತೀಯ ಅಂಚೆ!

Bengaluru : ಭಾರತೀಯ ಅಂಚೆ ಇಲಾಖೆಯ (IndianPost doorstep parcel booking) ವಾಹನವೇ ಮನೆ ಬಾಗಿಲಿಗೆ ಮತ್ತು ಸಂಸ್ಥೆಗಳಿಗೆ ತೆರಳಿ ಪಾರ್ಸೆಲ್‌ ಸಂಗ್ರಹಿಸುವ

ಸೇವೆಯನ್ನು ಬೆಂಗಳೂರು(Bengaluru) ನಗರದಲ್ಲಿ ಇದೀಗ ಮತ್ತಷ್ಟು ವಿಸ್ತರಿಸಲಾಗಿದೆ. ಈ ಸೇವೆಗೆ ಸೋಮವಾರದಂದು ಎಂ.ಜಿ.ರಸ್ತೆಯ(MG.Road) ಮಣಿಪಾಲ್‌ ಸೆಂಟರ್‌ನಲ್ಲಿ

(Manipal Centre) ಚಾಲನೆ ದೊರೆಯಿತು. ಮುಖ್ಯ ಪೋಸ್ಟರ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌(S.Rajendra Kumar) ಇವರು ಪಾರ್ಸೆಲ್‌ ಸಂಗ್ರಹಿಸುವ ವಾಹನಕ್ಕೆ ಚಾಲನೆ ನೀಡಿದರು.

ಪಾರ್ಸೆಲ್‌ ಸಂಗ್ರಹಿಸುವ ಮೊದಲ ಹಂತದ ಈ ಸೇವೆಯು ”ಅಬ್ಬಿಗೆರೆ (Abbigere) ಇಂಡಸ್ಟ್ರಿಯಲ್‌ ಏರಿಯಾ ಮತ್ತು ಪೀಣ್ಯದಲ್ಲಿ (Peenya)ಆರಂಭವಾಗಿತ್ತು ಆದರೆ ಇದೀಗ ಈ ಸೇವೆಗೆ ಉತ್ತಮ ಸ್ಪಂದನೆ

ದೊರೆಯುತ್ತಿದೆ ಹಾಗಾಗಿ ಈಗ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ. ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವನ್ನು ಪಾವತಿಸದೆ, ಅಂಚೆ ಕಚೇರಿಗೂ (Post Office) ಹೋಗದೆ ಸಾರ್ವಜನಿಕರು

ಈ ಸೇವೆಯ ಸೌಲಭ್ಯ ಪಡೆಯಬಹುದಾಗಿದೆ’ ಎಂದು ಈ ಸಂದರ್ಭದಲ್ಲಿ (IndianPost doorstep parcel booking) ತಿಳಿಸಲಾಗಿದೆ.

ಬುಕ್ಕಿಂಗ್‌ಗೆ ಮೊಬೈಲ್‌ ನಂಬರ್‌

ಇನ್ನು ಮುಂದೆ ಪ್ರತಿ ದಿನ ಮಧ್ಯಾಹ್ನ 2.30ಕ್ಕೆ ಮಣಿಪಾಲ ಸೆಂಟರ್‌ಗೆ ಈ ವಾಹನವು ಬರಲಿದ್ದು ಸರಿ ಸುಮಾರು 3.30ರವರೆಗೆ ಅಲ್ಲಿಯೇ ಇರಲಿದೆ. ಸಾರ್ವಜನಿಕರು ತಮ್ಮ ಪಾರ್ಸೆಲ್‌ಗಳನ್ನು ಈ ಸಮಯದಲ್ಲಿ

ಈ ವಾಹನದ ಬಳಿ ಬಂದು ಬುಕ್‌ ಮಾಡಿ ಕಳುಹಿಸಬಹುದು. ಈ ಮೂಲಕವಾಗಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಪಾರ್ಸೆಲ್ ಬುಕಿಂಗ್‌ಗಾಗಿ ಬೆಂಗಳೂರು

ಅಂಚೆ ಮಹಾಕಾರ್ಯಾಲಯದ(Bangalore Post Office) ವ್ಯಾಪ್ತಿಯಲ್ಲಿ ಮೊಬೈಲ್‌ ಸಂಖ್ಯೆ: 9480809797 ಕರೆ ಮಾಡುವ ಮೂಲಕ ವಾಹನವನ್ನು ಸಂಪರ್ಕಿಸಬಹುದು.

ಮುಂದಿನ ದಿನಗಳಲ್ಲಿ ವಿಸ್ತರಣೆ

ಮುಂದಿನ ದಿನಗಳಲ್ಲಿ ಬೆಂಗಳೂರಿನ ಇತರೆ ಪ್ರದೇಶಗಳಿಗೂ ಈ ಸೇವೆಯನ್ನು ಬೇಡಿಕೆಯ ಆಧಾರದ ಮೇಲೆ (ಬೆಂ. ದಕ್ಷಿಣ ಭಾಗದ ಬಿಕಾಸಿಪುರ ಕೈಗಾರಿಕಾ ಪ್ರದೇಶ, ಮಹದೇವಪುರ ಕೈಗಾರಿಕಾ ಪ್ರದೇಶದ ಹೂಡಿ)

ವಿಸ್ತರಿಸಲು ಉದ್ದೇಶಿಸಲಾಗಿದೆ. ಎಲ್ಲಾ ರೀತಿಯ ದೇಶೀಯ ಅಂಚೆ ರವಾನಿಸಲು ಈ ಸೇವೆಯನ್ನು ಬಳಸಬಹುದಾಗಿದೆ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

‘ಡೋರ್‌ ಸ್ಟೆಪ್‌ ಬುಕಿಂಗ್‌ ಆಫ್‌ ಪಾರ್ಸೆಲ್ಸ್‌ ಥ್ರೂ ಮೊಬೈಲ… ವ್ಯಾನ್‌ ‘(Doorstep Booking Of Parcels through Mobile) ಸೇವೆಗೆ ಬೆಂಗಳೂರಿನ ಯಾವುದೇ ಪ್ರದೇಶದಲ್ಲಿ ಬೇಡಿಕೆ ಇದ್ದಲ್ಲಿಇಮೇಲ್‌

(Email) ವಿಳಾಸ ಬೆಂಗಳೂರು ಪ್ರಧಾನ ಅಂಚೆ ಕಚೇರಿ ವೆಬ್‌ಸೈಟ್‌ನಿಂದ (Website) ಮಾಹಿತಿ ಪಡೆಯಬಹುದು.

ರಶ್ಮಿತಾ ಅನೀಶ್

Exit mobile version