ಚಿನ್ನಕ್ಕಿಂತ ದುಬಾರಿ ಚೇಳಿನ ವಿಷ ; ಚೇಳಿನ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ!

scorpian

ಪ್ರಾಣಿಗಳಲ್ಲೇ ಬಹಳ ವಿಶಿಷ್ಟ ಪ್ರಾಣಿ ಎಂದ್ರೆ ಅದು ಚೇಳು(Scorpian). ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಕೂಡ ಬದುಕಬಲ್ಲ ಪ್ರಾಣಿ ಚೇಳು. ಹಾಗೆಯೇ, ನೀರಲ್ಲೂ, ನೀರ ಹೊರಗೆ, ಬಿಲಗಳಲ್ಲೂ ಇದು ನಿರಾತಂಕವಾಗಿ ಜೀವಿಸುತ್ತದೆ. ಅಂದ ಹಾಗೇ, ಚೇಳಿನ ಕಣ್ಣುಗಳು ಇರುವುದು ಬೆನ್ನ ಮೇಲೆ.

ಹೌದು, ಸೊನ್ನೆ ಡಿಗ್ರಿ ಶೈತ್ಯಾಂಶದಲ್ಲಿ ಬದುಕಿರಬಲ್ಲ ಚೇಳು 68 ರಿಂದ 99 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶದಲ್ಲೂ ಸಾಯುವುದಿಲ್ಲ. ಹೀಗಾಗಿಯೇ ನಮ್ಮ ಗುಲ್ಬರ್ಗ, ರಾಯಚೂರುಗಳ ಕಡೆ ಹೆಚ್ಚು ಚೇಳುಗಳಿವೆ. ನೀವು, ಎರಡು ದಿನಗಳ ವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಈ ಚೇಳುಗಳು ಬದುಕಿರುತ್ತವೆ. ಅತ್ಯಂತ ಕಡಿಮೆ ಆಮ್ಲಜನಕ ಬಳಸುವ ಗುಣ ಇರುವುದರಿಂದ ಮಣ್ಣಿನೊಳಗೆಯೂ ಚೇಳು ಬದುಕಬಲ್ಲದು. ಒಂದು ವರ್ಷ ಆಹಾರ ಇಲ್ಲದಿದ್ದರೂ ಚೇಳು ಹಸಿವಿನಿಂದ ಸಾಯುವುದೇ ಇಲ್ಲ. ಅದರ ಗರಿಷ್ಠ ಜೀವಿತಾವಧಿ 25 ರಿಂದ 38 ವರ್ಷಗಳು.


ಗಂಡು ಚೇಳು ಹೆಣ್ಣನ್ನು ಒಲಿಸಿಕೊಳ್ಳಲು ಅದರ ಮುಂದೆ ತನ್ನದೇ ಶೈಲಿಯಲ್ಲಿ ವಿಶಿಷ್ಟವಾಗಿ ನರ್ತಿಸುತ್ತದೆ. ಚೇಳಿನ ಮೊಟ್ಟೆಗಳು ಒಡೆದು ಮರಿಗಳಾದ ಕೂಡಲೇ ತಾಯಿ ಚೇಳಿನ ಮೈಮೇಲೇರಿಕೊಂಡು ಅದರ ಜೊತೆಗೆ ಸಾಗುತ್ತವೆ. ಇದರಿಂದಾಗಿ ಚೇಳಿನ ಬೆನ್ನನ್ನು ಒಡೆದು ಮರಿಗಳು ಹೊರಗೆ ಬರುತ್ತವೆಂಬ ತಪ್ಪು ಕಲ್ಪನೆಯೂ ಇದೆ. ಚೇಳಿನ ಕಣ್ಣು ಅದರ ಬೆನ್ನಿನ ಮೇಲಿರುತ್ತದೆ. ಮನುಷ್ಯನಿಗೆ ಸಾವು ತರುವಷ್ಟು ಪ್ರಮಾಣದ ವಿಷ ಚೇಳಿನಲ್ಲಿಲ್ಲ. ಐವತ್ತು ಚೇಳುಗಳ ವಿಷ ಒಟ್ಟಾದರೆ ಮಾತ್ರ ಪ್ರಾಣಾಂತಿಕವಾಗಬಹುದು.


ನೀವು ಬಂಗಾರ ಬೇಕಿದ್ರೆ ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು ಆದ್ರೆ ಈ ಚೇಳಿನ ವಿಷದ ಬೆಲೆ ಅದಕ್ಕಿಂತ ದುಪ್ಪಟ್ಟು, ಇನ್ನು ಈ ವಿಷಕಾರಿ ಅಂಶಗಳನ್ನು ಕೆಲವೊಂದು ರೀತಿಯಲ್ಲಿ ಬಳಕೆ ಮಾಡುತ್ತಾರೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತಿಲ್ಲದ ಸಂಗತಿ. ಈ ಚೇಳಿನ ವಿಷವನ್ನು ಯಾವುದಕ್ಕೆ ಬಳಕೆ ಮಾಡುತ್ತಾರೆ ಮತ್ತು ಇದರಿಂದ ಏನು ಲಾಭ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಒಂದು ಗ್ರಾಂ ವಿಷದ ಬೆಲೆ ರೂ.7,30000, ಹಾಗಾದ್ರೆ 1 ಲೀಟರ್ ವಿಷದ ಬೆಲೆ ರೂ. 73 ಕೋಟಿ ರೂಪಾಯಿವರೆಗೂ ಇದೆ. ಹಾಗಾಗಿಯೇ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಿಷವಾಗಿ ಚೇಳಿನ ವಿಷ ಗುರುತಿಸಿಕೊಂಡಿದೆ. ಚೇಳಿನ ವಿಷದಿಂದ ಸಂಧಿ ನೋವನ್ನು ಗುಣಪಡಿಸಬಹುದು ಎಂದು ಅಮೆರಿಕಾದಲ್ಲಿನ ಬೆಲಾರ್ ಕಾಲೇಜ್ ಆಫ್ ಮೆಡಿಸಿನ್ ನಿರ್ವಹಿಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಒಟ್ಟು 13 ಲಕ್ಷ ಮಂದಿ ಮೇಲೆ ಈ ಔಷಧಿಯನ್ನು ಪ್ರಯೋಗಿಸಿದರು.

ಅವರೆಲ್ಲರಿಗೂ ಸಂಧಿ ನೋವಿನಿಂದ ಉಪಶಮನ ಲಭಿಸಿತು. ಚೇಳಿನ ವಿಷದಲ್ಲಿ ಇರುವ ಕಾಂಪೋನೆಂಟ್ಸ್‌ನಿಂದ ಇದು ಸಾಧ್ಯವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೋವುಗಳನ್ನು ಗುಣಪಡಿಸಬಹುದು ಎಂದು ಸಂಶೋದನೆಯಲ್ಲಿ ತಿಳಿದು ಬಂದಿದೆ.

Exit mobile version