ಶೀಘ್ರದಲ್ಲಿಯೇ ಟಾಟಾ ಎಲೆಕ್ಟ್ರಾನಿಕ್ಸ್ ನಿಂದ ಐಫೋನ್‌ ಉತ್ಪಾದನೆ

Karnataka : ಕಳೆದ ಕೆಲವು ವರ್ಷಗಳಿಂದ ಆಪಲ್ ಕಂಪನಿಯ (Apple Company) ಐಫೋನ್ (iPhone) ಭಾರತದಲ್ಲೇ ಉತ್ಪಾದನೆಯಾಗುತ್ತಿತ್ತು. ಈಗಾಗಲೇ ಐಫೋನ್ 13, ಐಫೋನ್ 14 ಸೇರಿದಂತೆ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ 2 ಪ್ರಮುಖ (iPhone from Tata Electronics) ಕಂಪನಿಗಳು ಅಂದರೆ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಉತ್ಪಾದಿಸುತ್ತಿದ್ದವು.

ಆದರೆ ಇನ್ನು ಮುಂದೆ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

ಎಲೆಕ್ಟ್ರಾನಿಕ್ ಉಪಕಾರಣಗಳಲ್ಲಿ ಒಂದಾದ ಮೊಬೈಲ್ ಗೆ ಇಂದು ಮಕ್ಕಳಿಂದ ಹಿಡಿದು ಎಲ್ಲರೂ ಅವಲಂಬಿತರಾಗಿದ್ದಾರೆ.

ಇತ್ತೀಚೆಗೆ ವಿವಿಧ ಮಾದರಿಗಳಲ್ಲಿ ಬೇರೆ ಬೇರೆ ಕಂಪನಿಗಳ ಮೊಬೈಲ್ ಫೋನ್ ಗಳು ಬಿಡುಗಡೆ ಆಗುತ್ತಿವೆ.

ಅದರಲ್ಲೂ ಈಗ ಐಫೋನ್ನನ್ನು ತುಂಬಾ ಜನ ಬಳಕೆ ಮಾಡುತ್ತಿದ್ದಾರೆ. ನಮ್ಮ ಭಾರತದಲ್ಲಿ,

ಮುಖ್ಯವಾಗಿ ಕರ್ನಾಟಕದಲ್ಲಿ (Karnataka) ಕೂಡ ವಿಸ್ಟ್ರಾನ್ ಕಂಪನಿಯು (Wistron Company) ಈ ಐಫೋನ್ ಅನ್ನು ತಯಾರಿಸುತ್ತಿದೆ.

ಆದರೆ ಇನ್ನು ಮುಂದೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಐಫೋನ್ ತಯಾರಿಸುತ್ತದೆ ಅಂದರೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇದನ್ನೂ ಓದಿ : https://vijayatimes.com/girl-kidnapped-in-rajasthan/

ಸುಮಾರು 20 ವರ್ಷಗಳ ಹಿಂದೆ ಆಪಲ್ ಕಂಪನಿಯು ಭಾರತಕ್ಕೆ ಲಗ್ಗೆಯಿಟ್ಟಿದ್ದು, ಇದೀಗ ಸುದೀರ್ಘ ಇತಿಹಾಸವನ್ನು ಹೊಂದಿದೆ.

2020ರ ಸೆಪ್ಟೆಂಬರ್‌ನಲ್ಲಿ ಪ್ರಥಮವಾಗಿ ಆಪಲ್ ಕಂಪನಿ ಭಾರತ ದೇಶದಲ್ಲಿ ತನ್ನ ಮೊದಲ ಆನ್‌ಲೈನ್ (iPhone from Tata Electronics) ಸ್ಟೋರ್ ಅನ್ನು ಪ್ರಾರಂಭಿಸಿತು.

ಇತ್ತೀಚೆಗೆ ಭಾರತದ ಮೊದಲ ಆಪಲ್ ಸ್ಟೋರ್ ಮಹಾರಾಷ್ಟ್ರದ ಮುಂಬೈ ಹಾಗೂ ರಾಜಧಾನಿ ದೆಹಲಿಯಲ್ಲಿ (Delhi) ಉದ್ಘಾಟನೆಗೊಡಿತ್ತು.

ವಿಸ್ಟ್ರಾನ್ ಸಂಸ್ಥೆ ಆಪಲ್ ಕಂಪನಿಗೆ ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು.

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ (Narasapura Industrial Area) ಸುಮಾರು 4,000 ರಿಂದ 5,000 ಕೋಟಿ ರೂ.

ಮೌಲ್ಯದ ಘಟಕವನ್ನು ವಿಸ್ಟ್ರಾನ್ ಹೊಂದಿದೆ. ಈ ಘಟಕವು ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : https://vijayatimes.com/new-order-from-punjab-govt/

ಆದರೆ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತಿದೆ.ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲಿಯೇ

ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಸ್ವಾಧೀನಪಡಿಸಿಕೊಳ್ಳಲಿರುವುದರಿಂದ ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೂಡ ಕೈಗೆತ್ತಿಕೊಳ್ಳಲಿದೆ.

Exit mobile version