ತುಮಕೂರಿನಲ್ಲೂ ಐಫೋನ್ ತಯಾರಿಕೆ ಘಟಕ ಸ್ಥಾಪನೆ : 14 ಸಾವಿರ ಉದ್ಯೋಗ ಸೃಷ್ಟಿ ಭರವಸೆ!

Bengaluru : ದೇವನಹಳ್ಳಿ (Devanahalli) ಐಟಿಐಆರ್ ವಲಯದಲ್ಲಿ ಫಾಕ್ಸ್ ಕಾನ್ ಸ್ಥಾಪಿಸಲು ಉದ್ದೇಶಿಸಿರುವ ಐಫೋನ್ (iPhone manufacturing unit Tumkur) ತಯಾರಿಕಾ ಘಟಕಕ್ಕೆ

ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಕಾರ್ಖಾನೆ ಸ್ಥಾಪಿಸಲು ಫಾಕ್ಸ್ ಕಾನ್ ಪ್ರಸ್ತಾವನೆ ಸಲ್ಲಿಸಿದೆ. ಸರಕಾರ ಹಾಗೂ ಕಂಪನಿ ಜತೆಗಿನ ಒಪ್ಪಂದ ಯಶಸ್ವಿಯಾದರೆ ತುಮಕೂರಿನಲ್ಲಿ

8,800 ಕೋಟಿ ರೂ. ಹೂಡಿಕೆಯಿಂದ 14,000 ಉದ್ಯೋಗ (iPhone manufacturing unit Tumkur) ಸೃಷ್ಟಿಯಾಗಲಿದೆ.

ಈ ನಿಟ್ಟಿನಲ್ಲಿ ಸಿಇಒ ಬ್ರ್ಯಾಂಡ್ ಚೆಂಗ್ (CEO Brand Cheng) ನೇತೃತ್ವದ ಎಫ್ ಐಐ (FII) ನಿಯೋಗದೊಂದಿಗೆ ಸೋಮವಾರ ಸಂಸತ್ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

(Siddaramaiah) ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಉತ್ತಮ ವಾತಾವರಣವಿದೆ, ಶಿಕ್ಷಣ ಮತ್ತು ಕೈಗಾರಿಕೆಗಳ

ನಡುವೆ ನಿರಂತರ ಸಂಪರ್ಕ ಮತ್ತು ಸಮನ್ವಯವಿದೆ, ನುರಿತವರೂ ಇದ್ದಾರೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಘಟಕ ಸ್ಥಾಪನೆಗೆ ಭೂಮಿ ಸಮೀಕ್ಷೆ
ಫಾಕ್ಸ್‌ಕಾನ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾದ ಫಾಕ್ಸ್‌ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್‌ಐಟಿ)(FIT) ಇದಕ್ಕಾಗಿ 8,800 ಕೋಟಿ ರೂ. ಹೂಡಿಕೆ ಮಾಡುವ ಯೋಜನೆಯನ್ನು

ಹಾಕಿಕೊಂಡಿದೆ. ಇದು ಅಂದಾಜು 14,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಘಟಕವನ್ನು ನಿರ್ಮಿಸಲು 100 ಎಕರೆ ಭೂಮಿ ಅಗತ್ಯವಿದೆ. ಸೋಮವಾರ ತುಮಕೂರಿನ(Tumkur) ಜಪಾನ್

ಇಂಡಸ್ಟ್ರಿಯಲ್ ಟೌನ್ ಷಿಪ್ ನಲ್ಲಿ ಲಭ್ಯವಿರುವ ಭೂಮಿಯನ್ನು ನಿಯೋಗದ ಸದಸ್ಯರು ಪರಿಶೀಲಿಸಿದರು.

ಏನೆಲ್ಲಾ ಉತ್ಪಾದನೆ ಆಗಲಿದೆ??
ಎಫ್ಐಐ ಘಟಕವು ಮೊಬೈಲ್ ಫೋನ್ ಪರದೆಗಳು, ಹೊರ ಕವಚ ಮತ್ತು ಇತರ ಆಟೋ ಭಾಗಗಳನ್ನು ಉತ್ಪಾದಿಸುತ್ತದೆ. ದೇವನಹಳ್ಳಿ ಬಳಿ ಉದ್ದೇಶಿತ ಐಫೋನ್ ತಯಾರಿಕಾ

ಘಟಕವು ಎಂಡ್ ಅಸೆಂಬ್ಲಿ’ ಘಟಕವಾಗಿದ್ದರೆ, , ಎಫ್‌ಐಐ ಸೌಲಭ್ಯವು ಪೂರಕ ಸೌಲಭ್ಯವಾಗಲಿದೆ.

ಎಂ.ಬಿ.ಪಾಟೀಲ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್(M.B Patil) ಮಾತನಾಡಿ, ಫಾಕ್ಸ್‌ಕಾನ್‌ ಸಂಸ್ಥೆಯು ರಾಜ್ಯದಲ್ಲಿ ಅರೆವಾಹಕ ಸೇರಿದಂತೆ ಇತರೆ ಯಾವುದೇ ಉದ್ಯಮವನ್ನು

ಸ್ಥಾಪಿಸಲು ಬಯಸಿದಲ್ಲಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್‌

ಸಭೆಯಲ್ಲಿ ಐಟಿ-ಬಿಟಿ(IT BT) ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಮತ್ತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿದ್ದರು. ಎಫ್‌ಐಐ ಜನರಲ್ ಮ್ಯಾನೇಜರ್ ಮೈಕೆಲ್

ಲಿಂಗ್, ಜೇಸನ್ ಲಾವ್, ಎಂಜಿ ಲಿನ್, ನಿರ್ದೇಶಕರಾದ ಸೆಂಥಿಲ್ ಕುಮಾರ್, ಭರತ್ ದಂಡಿ ಮತ್ತಿತರರು ಹಾಜರಿದ್ದರು. ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್,

ಕೈಗಾರಿಕಾ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ಗುಂಜನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ರಶ್ಮಿತಾ ಅನೀಶ್

Exit mobile version