Tehran : ಇರಾನ್ನಲ್ಲಿ (Iran) ಹಿಜಾಬ್ (Hijab) ವಿರುದ್ದ ನಡೆಯುತ್ತಿರುವ ಪ್ರತಿಭಟನೆ (Protest) ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆ,
ಇರಾನ್ನ ಎಲ್ಲ ಪ್ರಾಂತ್ಯಗಳಿಗೂ ಹಬ್ಬಿದ್ದು, ಇದೀಗ ಶಾಲಾ ವಿದ್ಯಾರ್ಥಿನಿಯರು ಕೂಡಾ “ನಾವು ಹಿಜಾಬ್ ಧರಿಸುವುದಿಲ್ಲ” ಎಂದು ಬೀದಿಗಿಳಿದಿದ್ದಾರೆ.

ಹಿಜಾಬ್ ಧರಿಸದೇ ಶಾಲೆಗೆ ಬಂದ ವಿದ್ಯಾರ್ಥಿನಿಯೋರ್ವಳನ್ನು ಶಾಲಾ ಆಡಳಿತ ಮಂಡಳಿ ಡಿಬಾರ್ ಮಾಡಿ, ಶಾಲೆಯಿಂದ ಹೊರ ಹಾಕಿರುವ ಘಟನೆಯ ವಿರುದ್ದ ಇಡೀ ವಿದ್ಯಾರ್ಥಿನಿಯರ ಸಮೂಹ ಬೀದಿಗಿಳಿದಿದೆ.
ಈ ವೇಳೆ ಶಾಲಾ ಮುಖ್ಯಸ್ಥರ ಮೇಲೆ ವಿದ್ಯಾರ್ಥಿನಿಯರು ನೀರಿನ ಬಾಟಲಿಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ, ಅನೇಕ ಶಿಕ್ಷಕರು ಸ್ಥಳದಿಂದ ಓಡಿ ಹೋಗಿದ್ದಾರೆ.
ಈ ವಿಡಿಯೋ(Video) ಇದೀಗ ಎಲ್ಲೆಡೆ ವೈರಲ್(Viral) ಆಗಿದ್ದು, ವಿದ್ಯಾರ್ಥಿನಿಯರ ಹೋರಾಟಕ್ಕೆ (Iran Students Hijab Protest)ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. “ನಾವು ಸಾಯಲು ಸಿದ್ದರಾಗಿಯೇ ಬಂದಿದ್ದೇವೆ. ಹೀಗಾಗಿ ನಾವು ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲ ಒಂದಾಗಿದ್ದೇವೆ.
ಇದನ್ನೂ ಓದಿ : https://vijayatimes.com/sonia-gandhi-helped-fallen-girl/
ನಮ್ಮ ಹೋರಾಟ ಮಹಿಳೆಯರ ಧಮನಕಾರಿ ನೀತಿಗಳ ವಿರುದ್ದವಾಗಿದ್ದು, ಹಿಜಾಬ್ ಅನ್ನು ಒತ್ತಾಯ (Iran Students Hijab Protest)ಪೂರ್ವಕವಾಗಿ ನಮ್ಮ ಹೇರಲು ನಾವು ಬೀಡುವುದಿಲ್ಲ. ಅದು ನಮ್ಮ ಆಯ್ಕೆಯೇ ಹೊರತು, ನಿಮ್ಮ ಹಕ್ಕಲ್ಲ.
ಹಿಜಾಬ್ ಧರಿಸುವುದು, ಬಿಡುವುದು ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗಿದ್ದಾರೆ.

ಇನ್ನು ಇರಾನ್ ರಾಜಧಾನಿ ಟೆಹರಾನ್ನಲ್ಲಿ ಹಿಜಾಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು(Mahsa Amini) ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸರು ಬಂಧನದ ವೇಳೆ ಮಹ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದಳು.
ಈ ಘಟನೆಯ ನಂತರ ಇಡೀ ಇರಾನ್ನ ಮಹಿಳೆಯರು ಹಿಜಾಬ್ ವಿರುದ್ದ ಬೀದಿಗಿಳಿದರು.
https://twitter.com/SlavaUk30722777/status/1577188249985916928?s=20&t=OEo2oAQJQv1uaqBeKL9QmQ
ಕಳೆದ ಒಂದು ತಿಂಗಳಿಂದ ಇರಾನ್ನಾದ್ಯಂತ ಹಿಜಾಬ್ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇರಾನ್ ಸರ್ಕಾರ ಬಲವಂತವಾಗಿ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೂ, ದಿನೇ ದಿನೇ ಹೋರಾಟದ ತೀವ್ರತೆ ಹೆಚ್ಚಾಗುತ್ತಿದೆ. ವಿಶ್ವ ಸಮುದಾಯ ಇರಾನ್ ಮಹಿಳೆಯರಿಗೆ ಬೆಂಬಲ ವ್ಯಕ್ತಪಡಿಸಿದೆ.
- ಮಹೇಶ್.ಪಿ.ಎಚ್