ಇಸ್ರೇಲ್ – ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಭಾರಿ ಸ್ಫೋಟಕಕ್ಕೆ 500 ಜನರ ಮಾರಣಹೋಮ

Tel Aviv: ಮಂಗಳವಾರ ಗಾಜಾದಲ್ಲಿನ (Gaza) ಆಸ್ಪತ್ರೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 500 ಜನರು (Israel-Hamas war – Gaza Hospital) ಮೃತಪಟ್ಟಿದ್ದಾರೆ ಎಂದು

ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ (Reuters) ವರದಿ ಮಾಡಿದ್ದು, ಈ ಘಟನೆ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಇಸ್ರೇಲಿ ವಾಯುದಾಳಿಯು

ಅಮಾಯಕರನ್ನು ಕೊಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದರೆ, ಪ್ರತ್ಯಾರೋಪ ಮಾಡಿರುವ ಇಸ್ರೇಲ್ (Israel), ಹಮಾಸ್ ಉಗ್ರರ ರಾಕೆಟ್ ದಾಳಿ ಕೈಕೊಟ್ಟು ಈ ಅವಘಡ ಸಂಭವಿಸಿದೆ ಎಂದಿದೆ.

ಇಸ್ಲಾಮಿಕ್ ಜಿಹಾದ್ ಈ ಘಟನೆಗೆ ಕಾರಣವಾಗಿದ್ದು, ವಿವಿಧ ಮೂಲಗಳ ಗುಪ್ತಚರ ಮಾಹಿತಿಗಳು ತಿಳಿಸಿರುವ ಪ್ರಕಾರ, ಉಡಾಯಿಸಿದ ರಾಕೆಟ್ (Rocket) ವಿಫಲಗೊಂಡು ಗಾಜಾದ ಆಸ್ಪತ್ರೆಗೆ

ಅಪ್ಪಳಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದ್ದು, ಈ ಘಟನೆ ಸಂದರ್ಭದಲ್ಲಿ ಇಸ್ರೇಲ್ ಆಸ್ಪತ್ರೆ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆ ನಡೆಸುತ್ತಿರಲಿಲ್ಲ ಹಾಗೂ ಅಲ್ಲಿ ಬಳಸಿದ ರಾಕೆಟ್‌ಗಳು

ತಮ್ಮ ಸಾಧನಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ವಕ್ತಾರ ಡೇನಿಯಲ್ ಹಗಾರಿ (Israel-Hamas war – Gaza Hospital) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಜಾದಲ್ಲಿನ ಬ್ಯಾಪ್ಟಿಸ್ಟ್ ಅರಬ್ ನ್ಯಾಷನಲ್ (Baptist Arab National) ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮೂಲಕ ನಡೆಸಿದ ಬರ್ಬರ ಹತ್ಯಾಕಾಂಡದಲ್ಲಿನ ತನ್ನ ಹೊಣೆಗಾರಿಕೆಯಿಂದ ಸುಳ್ಳುಗಳ

ಹೆಣಿಗೆಗಳ ಮೂಲಕ ಹಾಗೂ ಪ್ಯಾಲೆಸ್ಟೀನ್‌ನ ಇಸ್ಲಾಮಿಕ್ ಜಿಹಾದ್ ಚಳವಳಿಯ ಕಡೆ ಬೆರಳು ತೋರಿಸುವ ಮೂಲಕ ತಪ್ಪಿಸಿಕೊಳ್ಳಲು ಜಿಯೋನಿಸ್ಟ್ ಶತ್ರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ

ಎಂದು ಹಮಾಸ್ (Hamas) ಉಗ್ರ ಸಂಘಟನೆಯ ಮಿತ್ರ ಗುಂಪು ಇಸ್ಲಾಮಿಕ್ ಜಿಹಾದ್ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಆರೋಪಿಸಿದೆ.

ದಾಳಿಗೆ ಎಲ್ಲೆಡೆ ವ್ಯಾಪಕ ಆಕ್ರೋಶ
ಇಸ್ರೇಲ್‌ಗೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿಯೇ ಈ ಭಯಾನಕ ದಾಳಿ ನಡೆದಿದ್ದು, ಗಾಜಾದಲ್ಲಿನ ಅಲ್- ಅಹ್ಲಿ ಅರಬ್ ಆಸ್ಪತ್ರೆಯಲ್ಲಿ

ನಡೆದ ಸ್ಫೋಟ ಮತ್ತು ಅದರ ಪರಿಣಾಮ ಉಂಟಾದ ಭಾರಿ ಜೀವ ಹಾನಿಯಿಂದ ನನಗೆ ಆಕ್ರೋಶ ಹಾಗೂ ದುಃಖ ಉಂಟಾಗಿದೆ” ಎಂದು ಬೈಡನ್ ಕೂಡ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (Antonio Guterres) ಅವರು ಈ ಭೀಕರ ವಾಯು ದಾಳಿಯನ್ನು ಬಲವಾಗಿ ಖಂಡಿಸಿದ್ದು, ಇದು ‘ಭಯಾನಕ ದಾಳಿ’ ಎಂದಿದ್ದಾರೆ.

ಸಂತ್ರಸ್ತರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದ್ದು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ರಕ್ಷಣೆ ಹೊಂದಿವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮೈಸೂರು ದಸರಾ 2023 : ಆನ್ಲೈನ್ನಲ್ಲಿ ಪಾಸ್ ಖರೀದಿಗೆ ಅವಕಾಶ ; ದರ ಎಷ್ಟು, ಖರೀದಿ ಹೇಗೆ?

Exit mobile version