ಹುಬ್ಬಳ್ಳಿ ಗಲಭೆಯ ಪುಂಡರ ಕುಟುಂಬಕ್ಕೆ 5 ಸಾವಿರ ರೂ. ರಂಜಾನ್ ಫುಡ್ ಕಿಟ್ : ಜಮೀರ್ ಅಹ್ಮದ್!

Jameer ahmed

ಹುಬ್ಬಳ್ಳಿಯಲ್ಲಿ(Hubbali) ನಡೆದ ಕೋಮುಗಲಭೆಯಲ್ಲಿ ಭಾಗಿಯಾಗಿ ಬಂಧಿತರಾಗಿರುವ ಮುಸ್ಲಿಂ(Muslim) ಯುವಕರ ಕುಟುಂಬಗಳಿಗೆ ಕಾಂಗ್ರೆಸ್ ಶಾಸಕ(Congress MLA) ಜಮೀರ್ ಅಹ್ಮದ್ ಖಾನ್(Jameer Ahmed Khan) 5 ಸಾವಿರ ರೂ. ನಗದು ಮತ್ತು ರಂಜಾನ್(Ramzan) ಹಬ್ಬದ ಪುಡ್‍ಕಿಟ್ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ ಸೇರಿದಂತೆ ಅನೇಕರ ಆಸ್ತಿಪಾಸ್ತಿಗಳನ್ನು ಸುಟ್ಟು ಹಾಕಿರುವ ಗಲಭೆಕೋರರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಬಹಿರಂಗವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಕೋಮುಗಲಭೆ ನಡೆಸಿದ ಪುಂಡರ ಕುಟುಂಬಗಳಿಗೆ 5 ಸಾವಿರ ರೂ. ನಗದು ಮತ್ತು ರಂಜಾನ್ ಫುಡ್ ಕಿಟ್ ನೀಡುವ ಮೂಲಕ ಶಾಸಕ ಜಮೀರ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಮತ್ತು ಪುಡ್‍ಕಿಟ್ ವಿತರಿಸಲು ನಿರ್ಧರಿಸಲಾಗಿದೆ. ಕಸಬಾ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಶಾದಿ ಮಹಲ್‍ನಲ್ಲಿ ತಮ್ಮ ಬೆಂಬಲಿಗರ ಮೂಲಕ ಶಾಸಕ ಜಮೀರ್ ಅಹ್ಮದ್ ಈ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಸದ್ಯ ಜಮೀರ್ ಅಹ್ಮದ್ ಮೆಕ್ಕಾದಲ್ಲಿದ್ದು, ಅಲ್ಲಿಂದಲೇ ಗಲಭೆಕೋರರ ಕುಟುಂಬಗಳಿಗೆ ಬೇಕಾದ ಸಹಾಯ ಮಾಡಲು ಮುಂದಾಗಿದ್ದಾರೆ. ಇನ್ನು ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿರುವ ಜಮೀರ್ ಅಹ್ಮದ್, ಪವಿತ್ರ ರಂಜಾನ್ ಹಬ್ಬದ ವೇಳೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ.

ಜೊತೆಗೆ ಮತ್ತೊಮ್ಮೆ ಈ ರೀತಿಯ ತಪ್ಪು ಮಾಡದಂತೆ ಆ ದೇವರು ಅವರಿಗೆಲ್ಲಾ ಬುದ್ದಿ ನೀಡಲೆಂದು ಪ್ರಾರ್ಥನೆ ಮಾಡುತ್ತೇನೆ. ಸದ್ಯ ನಾನು ಮೆಕ್ಕಾದಲ್ಲಿ ಪವಿತ್ರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಈ ಸಮಯದಲ್ಲಿ ಮಕ್ಕಳಿಗೆ, ತಾಯಂದಿರಿಗೆ ಈ ಸಹಾಯಹಸ್ತ ನೀಡಿದ್ದೇನೆ. ನನ್ನ ಈ ಸಹಾಯಹಸ್ತಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸ ಇಲಾಖೆ ಶಿಕ್ಷೆ ನೀಡಲಿ.

ನನ್ನ ಈ ಸಹಾಯಹಸ್ತ ತಪ್ಪಿಸ್ಥರಿಗೆ ಉತ್ತೇಜನವಲ್ಲ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ಜಮ್ಮೀರ್ ಅಹ್ಮದ್ ಈ ನಡೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

Exit mobile version