ಭಾರತದ ಸ್ಟೀಲ್ ಮ್ಯಾನ್ ಎಂದೇ ಖ್ಯಾತರಾದ ಜಮ್ಶಿದ್ ಜೆ ಇರಾನಿ ನಿಧನ ; ಅನೇಕ ಗಣ್ಯರಿಂದ ಸಂತಾಪ

New Delhi : ಭಾರತದ ಸ್ಟೀಲ್ ಮ್ಯಾನ್(Steel Man) ಎಂದೇ ಖ್ಯಾತರಾಗಿದ್ದ ಜಮ್ಶಿದ್ ಜೆ ಇರಾನಿ(Jamshed J Irani) ಅವರು ಸೋಮವಾರ ಜಮ್ಶೆಡ್‌ಪುರದಲ್ಲಿ(Jamshed J Irani Is no more) ಕೊನೆಯುಸಿರೆಳೆದಿದ್ದಾರೆ.

86ನೇ ವಯಸ್ಸಿನಲ್ಲಿ ನಿಧನರಾದ ಇರಾನಿ ಅವರ ನಿಧನಕ್ಕೆ ಟಾಟಾ ಸ್ಟೀಲ್(Tata Steel) ಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ.

“ಭಾರತದ ಸ್ಟೀಲ್ ಮ್ಯಾನ್ ಎಂದು ಪ್ರೀತಿಯಿಂದ ಕರೆಯಲ್ಪಡಯವ ಪದ್ಮಭೂಷಣ ಡಾ. ಜಮ್ಶಿದ್ ಜೆ ಇರಾನಿ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ.

ಟಾಟಾ ಸ್ಟೀಲ್ ಕುಟುಂಬವು, ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತನ್ನ ಸಂತಾಪವನ್ನು ಸೂಚಿಸುತ್ತದೆ ಎಂದು ಟಾಟಾ ಸ್ಟೀಲ್ ಟ್ವೀಟ್‌ ಮೂಲಕ ವ್ಯಕ್ತಪಡಿಸಿದೆ.

ಇರಾನಿ ಅವರ ಪತ್ನಿ ಡೈಸಿ ಇರಾನಿ ಮತ್ತು ಅವರ ಮೂವರು ಮಕ್ಕಳಾದ ಜುಬಿನ್, ನಿಲೋಫರ್ ಮತ್ತು ತನಾಜ್ ಅವರನ್ನು ಅಗಲಿದ್ದಾರೆ.

https://fb.watch/gwwCgtaPlf/ Kannada Rajyotsava : ಕರ್ನಾಟಕದ ಬಗ್ಗೆ, ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?

ಇರಾನಿ ಅವರು ಜೂನ್ 2011 ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾಗುವ ಮೊದಲು ನಾಲ್ಕು ದಶಕಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದ್ದರು.

ಇರಾನಿ ಅವರು ಜೂನ್ 2, 1936 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ಅವರಿಗೆ ಜನಿಸಿದ ಪುತ್ರ.

1956 ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಮತ್ತು 1958 ರಲ್ಲಿ ನಾಗ್ಪುರ ವಿಶ್ವವಿದ್ಯಾನಿಲಯದಿಂದ ಭೂವಿಜ್ಞಾನದಲ್ಲಿ ತಮ್ಮ ಎಂಎಸ್ಸಿಯನ್ನು ಪೂರ್ಣಗೊಳಿಸಿದರು.

ಇರಾನಿ ಅವರು 1960 ರಲ್ಲಿ ಲೋಹಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಮತ್ತು 1963 ರಲ್ಲಿ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದಿಂದ ಜೆಎನ್ ಟಾಟಾ ವಿದ್ವಾಂಸರಾಗಿ ಲೋಹಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದರು.

1963 ರಲ್ಲಿ ಶೆಫೀಲ್ಡ್‌ನಲ್ಲಿರುವ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌ಗೆ ಆರಂಭಿಕನಾಗಿ ಸೇರಿದರು. ನಂತರ ಅವರು 1968 ರಲ್ಲಿ ಟಾಟಾ ಸ್ಟೀಲ್‌ಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ಸೇರಿದರು.

1981 ರಲ್ಲಿ ಟಾಟಾ ಸ್ಟೀಲ್ ಮಂಡಳಿಗೆ ಸೇರಿದರು ಮತ್ತು 2001 ರಿಂದ ಒಂದು ದಶಕದವರೆಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು.

https://twitter.com/TataSteelLtd/status/1587153205418491904?s=20&t=IYRcsdYT2lZit9ZKkHHEcg

ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಜೊತೆಗೆ, ಡಾ. ಇರಾನಿ ಅವರು ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಮ್ಶಿದ್ ಜೆ ಇರಾನಿ ಅವರಿಗೆ ಅನೇಕ ಗಣ್ಯರು ಟ್ವೀಟ್(Tweet) ಮಾಡುವ ಮುಖೇನ ತಮ್ಮ ಸಂತಾಪ ಸೂಚಿಸಿದ್ದಾರೆ.

Exit mobile version