ಜನಾರ್ದನ ರೆಡ್ಡಿ ದಂಪತಿಗೆ ಶಾಕ್​ ಕೊಟ್ಟ ನ್ಯಾಯಾಲಯ : ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ

Bangalore : ಶಾಸಕ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ (Janardhan Reddy property confiscation) ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಿಬಿಐ

ವಿಶೇಷ ನ್ಯಾಯಾಲಯ ಆದೇಶಿಸಿದೆ. ಕ್ರಿಮಿನಲ್ ಪ್ರಕರಣ ಪೂರ್ಣಗೊಳ್ಳುವವರೆಗೆ ಒಟ್ಟು 77 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಜನಾರ್ದನ ರೆಡ್ಡಿಗೆ ಸೇರಿದ ಒಟ್ಟು 124 ಆಸ್ತಿಗಳನ್ನು ವಶಪಡಿಸಿಕೊಳ್ಳಲು ಸಿಬಿಐ(CBI) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯಡಿ

ಒಟ್ಟು 77 ಆಸ್ತಿಗಳನ್ನು ನ್ಯಾಯಾಲಯ ಈಗಗಲೇ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ಜನವರಿ 12, 2023 ರಂದು ಜನಾರ್ದನ ರೆಡ್ಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ

ಗೃಹ ಸಚಿವಾಲಯ ಅನುಮತಿ ನೀಡಿತ್ತು. ಹೈಕೋರ್ಟ್ (High Court) ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ

ಜ.12ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಸಂಬಂಧ ಪ್ರತಿಕ್ರಿಯೆ ನೀಡಲು ಅವಕಾಶ (Janardhan Reddy property confiscation) ಕಲ್ಪಿಸಿತ್ತು.

ಇದನ್ನು ಓದಿ:  ಬಿಜೆಪಿ ಸರಕಾರದ ವಿರುದ್ಧ ಇರುವ 40 ಪರ್ಸೆಂಟ್​ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್​ಗೆ ಕುಮಾರಸ್ವಾಮಿ ಸವಾಲು

ಕಳೆದ ವರ್ಷ ಆಗಸ್ಟ್‌ನಲ್ಲಿ ಜನಾರ್ದನ ರೆಡ್ಡಿ ಅವರ ತೆಲಂಗಾಣ (Telangana) ಮತ್ತು ಆಂಧ್ರಪ್ರದೇಶದ (Andhra Pradesh) ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ಅರ್ಜಿ ಸಲ್ಲಿಸಿತ್ತು.

ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಿಬಿಐ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.

ಕರ್ನಾಟಕ ಹೈಕೋರ್ಟಿನಲ್ಲಿ ಈ ಅರ್ಜಿಯ ವಿಚಾರಣೆ ನಡೆದು 5 ತಿಂಗಳು ಕಳೆದರೂ ಸರ್ಕಾರ ಏಕೆ ನಿರ್ಧಾರ ಕೈಗೊಂಡಿಲ್ಲ?

ನಿರ್ಧಾರ ಕೈಗೊಳ್ಳದಿರುವುದೂ ನಿಮ್ಮ ದೃಷ್ಟಿಯಲ್ಲಿ ಒಂದು ಕ್ರಮವಿರಬಹುದು. ಆದರೆ ರಾಜ್ಯ ಸರ್ಕಾರಕ್ಕೆ (Government) ಕೋರ್ಟ್ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿತ್ತು.

ಅಷ್ಟೇ ಅಲ್ಲದೆ ಖಡಕ್ ಸೂಚನೆ ಸರ್ಕಾರದ ಪ್ರತಿಕ್ರಿಯೆ ತಿಳಿಸಲು ಕೊಟ್ಟಿತ್ತು. ಇದಾದ ಬಳಿಕ ರಾಜ್ಯ ಗೃಹ ಇಲಾಖೆ ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಆಸ್ತಿ ಜಪ್ತಿ ಮಾಡುತ್ತೇವೆ ಎನ್ನುವವರಿಗೆ ಹೆದರಲ್ಲ ಎಂದಿದ್ದ ರೆಡ್ಡಿ :

ಜ.11ರಂದು ಕೊಪ್ಪಳ(Koppal) ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೆಡ್ಡಿ, ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂಬ ಭಯ ನನಗಿಲ್ಲ.

ನಾನು ಜೈಲಿನ 4×5 ಅಡಿ ಜಾಗದಲ್ಲಿ ಇದ್ದವನು. ನಾನು ಯಾವುದಕ್ಕೂ ಹೆದರುವುದಿಲ್ಲ, ನನ್ನ ಬಂಧನದ ಸಮಯದಲ್ಲಿ, 1,200 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಇದನ್ನು ಓದಿ: ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡೋದು ಹೇಗೆ? ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಈ ಸೇವೆ ಲಭ್ಯ?

ಆದರೆ ನಾನು ಹೈಕೋರ್ಟ್‌ನಲ್ಲಿ ಗೆದ್ದಿದ್ದೇನೆ ಮತ್ತು ಈಗ “ಸುಪ್ರೀಂ ಕೋರ್ಟ್” (Supreme Court) ಮೆಟ್ಟಿಲೇರಿದ್ದಾರೆ. 1,200 ಕೋಟಿ ಇದ್ದ ಆಸ್ತಿ ಈಗ ಆಸ್ತಿ 4,000 ಕೋಟಿಯಾಗಿದೆ.

ಹನುಮ ಹುಟ್ಟಿದ ನಾಡಿಗೆ ಬಂದು ಲಕ್ಷ್ಮಿಯ ಕೃಪೆ ಪಡೆದೆ. ನಾನು ಇನ್ನು ಅಳುವುದಿಲ್ಲ. 12 ವರ್ಷಗಳ ಹಿಂದೆ ನನ್ನ ಕಣ್ಣೀರು ನಿಂತುಹೋಯಿತು ಎಂದು ಅವರು ಹೇಳಿದರು.

ರಶ್ಮಿತಾ ಅನೀಶ್

Exit mobile version