ಜತಿಂಗ ಇದು ಸರಣಿ ಆತ್ಮಹತ್ಯೆಯ ತಾಣ ; ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮನುಷ್ಯರಲ್ಲ, ಪಕ್ಷಿಗಳು!

Jathinga

ಸುಂದರ ಗಿರಿವನಗಳಿಂದ ಆವೃತ್ತವಾದ ಅಸ್ಸಾಂ(Assam) ಸ್ವರ್ಗಕ್ಕೆ ಸಮ. ಆದರೆ, ಇಂತಹ ನೆಲದಲ್ಲೊಂದು ವಿಚಿತ್ರ ಜಾಗವಿದೆ.

ಉತ್ತರ ಕ್ಯಾಚರ್ ಹಿಲ್ ಜಿಲ್ಲೆಯ ಪ್ರಧಾನ ಕೇಂದ್ರವಾದ ಹಫ್ಲಾಂಗ್‌ನಿಂದ 20 ಕಿಲೋ ಮೀಟರ್ ಕ್ರಮಿಸಿದರೆ ಜತಿಂಗ ಎಂಬ ಗ್ರಾಮ ಸಿಗುತ್ತದೆ. ಇದು ಕೂಡಾ ಸುಂದರ ಗ್ರಾಮ. ಆದರೆ, ಈ ಸುಂದರ ಹಳ್ಳಿ ಹೆಚ್ಚು ಪ್ರಸಿದ್ಧಿಯಾಗಿರುವುದು ಹಕ್ಕಿಗಳ ದುರಂತ ಕಥೆಯಿಂದ.

ಸದ್ಯದ ನಂಬಿಕೆ ಪ್ರಕಾರ, ಈ ಜತಿಂಗ ಹಕ್ಕಿಗಳ ಪಾಲಿನ ನರಕ. ಇಲ್ಲಿಗೆ ಬಂದು ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬುದು ಸುಮಾರು ನೂರಾರು ವರ್ಷಗಳಿಂದಲೂ ಇರುವ ನಂಬಿಕೆ.

ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ನೋಡ ನೋಡುತ್ತಿದ್ದಂತೆಯೇ ಹಕ್ಕಿಗಳು ನೆಲಕ್ಕುರುಳಿ ಜೀವ ಬಿಡುತ್ತಿವೆ! ನೂರಾರು ವರ್ಷಗಳ ಹಿಂದೆ ಇಲ್ಲಿದ್ದ ಮೂಲ ನಿವಾಸಿಗಳು ಮೊದಲು ಈ ಹಕ್ಕಿಗಳ ಸಾವನ್ನು ಕಂಡಿದ್ದರು.

https://vijayatimes.com/employee-gets-unexpected-salary/

ಇದು ಇವರನ್ನು ಆತಂಕಕ್ಕೆ ತಳ್ಳಿತ್ತು. ದೇವರ ಕೋಪದ ಪರಿಣಾಮವೇ ಹೀಗಾಗುತ್ತಿದೆ ಎಂದು ಭಯಭೀತರಾದ ಇವರು ಹಳ್ಳಿಯನ್ನೇ ತೊರೆದು ಬೇರೆಡೆಗೆ ಹೋಗಿದ್ದರು. ಇದಾದ ಬಳಿಕ ಸುಮಾರು 1905 ರಲ್ಲಿ ಇಲ್ಲಿ ನೆಲೆಸಿದ್ದ ಒಂದಷ್ಟು ಜನ ಜಾನುವಾರುಗಳನ್ನು ತಿನ್ನುತ್ತಿದ್ದ ಹುಲಿಯ ಬೇಟೆಗೆಂದು ರಾತ್ರಿ ಹೋಗಿದ್ದ ವೇಳೆ, ಇವರು ಹಿಡಿದಿದ್ದ ಪಂಜಿನ ಬೆಳಕಿಗೆ ಆಕರ್ಷಿತವಾದ ನೂರಾರು ಹಕ್ಕಿಗಳು ಓಡಿ ಬರುತ್ತಿದ್ದವು. ಆದರೆ, ಹೀಗೆ ಬರುವಾಗ ಹಕ್ಕಿಗಳು ನೆಲಕ್ಕುರುಳಿ ಜೀವ ಬಿಡುತ್ತಿದ್ದವು!

ಹೀಗಾಗಿ, ಇವರೂ ಕೂಡ ಭಯಗೊಂಡಿದ್ದರು. ಅಸ್ಸಾಂನ ಪ್ರಸಿದ್ಧ ಪಕ್ಷಿ ತಜ್ಞ ಡಾ. ಅನ್ವರುದ್ದೀನ್ ಚೌಧರಿ ತಮ್ಮ ದಿ ಬರ್ಡ್ಸ್ ಆಫ್ ಅಸ್ಸಾಂ’ ಪುಸ್ತಕದಲ್ಲಿ ಇಂತಹದ್ದೇ ಘಟನೆ ಮಿಜೋರಾಂನಲ್ಲೂ ನಡೆಯುತ್ತದೆ ಎಂದು ಹೇಳಿದ್ದಾರೆ. ಕೆಲವೊಂದು ಸಲ ಹಕ್ಕಿಗಳು ಒಂದು ಸ್ಥಳದಿಂದ ಇನ್ನೊಂದು ಜಾಗಕ್ಕೆ ವಲಸೆ ಹೋಗುತ್ತವೆ. 

ಈ ಸಂದರ್ಭದಲ್ಲಿ ಆಗುವ ಒತ್ತಡದಿಂದ ರಾತ್ರಿ ಹೊತ್ತು ಇವುಗಳು ಬೆಳಕಿನತ್ತ ಆಕರ್ಷಿತವಾಗುತ್ತದೆ. ಆಗ ಬೆಳಕಿನೆಡೆಗೆ ಹಾರುವಾಗ ಡಿಕ್ಕಿಯಾಗಿ ಹಕ್ಕಿಗಳು ಸಾವನ್ನಪ್ಪುತ್ತವೆ ಅಥವಾ ಗಾಯಗೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

1950 ರಲ್ಲಿ ಪಕ್ಷಿತಜ್ಞರಾದ ಸಲೀಂ ಅಲಿ ಅವರು ಈಹಕ್ಕಿಗಳ ಆತ್ಮಹತ್ಯೆ’ಯ ಅಧ್ಯಯನ ನಡೆಸಿದರು. `ವೈಲ್ಡ್ ಲೈಫ್ ಆಫ್ ಇಂಡಿಯಾ’ ಎಂಬ ಗ್ರಂಥದಲ್ಲಿ ಈ ಘಟನೆ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಆಗುತ್ತಿದೆ, ಅಕ್ಕಪಕ್ಕದ ಇತರ ಸ್ಥಳಗಳಲ್ಲಿ ಯಾವೊಂದು ಘಟನೆಯೂ ನಡೆಯುತ್ತಿಲ್ಲ. ಇದು ಸಹಜವಾಗಿಯೇ ಅಚ್ಚರಿ ಮೂಡಿಸುತ್ತದೆ ಎಂದು ತಿಳಿಸಿದ್ದಾರೆ. ಸದ್ಯ ಜತಿಂಗದ ಬಗ್ಗೆ ಕುತೂಹಲಗಳು ಹಾಗೆಯೇ ಇವೆ. ಅಧ್ಯಯನಗಳೂ ನಡೆಯುತ್ತಿವೆ.

ಒಂದೊಂದು ಅಧ್ಯಯನದಲ್ಲೂ ಹೊಸ ಹೊಸ ಅಂಶಗಳು, ಅಭಿಪ್ರಾಯಗಳು ಬೆಳಕಿಗೆ ಬರುತ್ತಿವೆ. ಆದರೆ, ಜತಿಂಗದಲ್ಲಿ ನಡೆಯುವ ಈ ಘಟನೆ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.
Exit mobile version