ಕರ್ನಾಟಕದ ಈ 5 ನಗರಗಳಲ್ಲಿ 5G ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಿದ ಜಿಯೋ

Bengaluru : ಭಾರತದ ಟೆಲಿಕಾಂ ಆಪರೇಟರ್ ಕಂಪನಿ ರಿಲಯನ್ಸ್ ಜಿಯೋ(Reliance Jio) ಮಂಗಳವಾರ ಕರ್ನಾಟಕದ 5 ನಗರಗಳಲ್ಲಿ ತನ್ನ ಮೊದಲ 5G ಇಂಟರ್ನೆಟ್(Jio 5G in Karnataka) ಸೇವೆಗಳನ್ನು ಪ್ರಾರಂಭಿಸಿದೆ.

ಈ ಸೇವೆ ರಾಜಧಾನಿ ಬೆಂಗಳೂರು(Bengaluru) ನಗರದ ಹೊರಗಿನ ಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಟೆಲಿಕಾಂ ದೈತ್ಯ ಜಿಯೋ ಘೋಷಿಸಿದೆ.

ಮಂಗಳವಾರದಂದು ಜಿಯೋ ಭಾರತದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿತು.

ಕರ್ನಾಟಕದಲ್ಲಿ ಬಾಗಲಕೋಟೆ(Bagalkote), ಚಿಕ್ಕಮಗಳೂರು(Chikmagaluru), ಹಾಸನ(Hassan), ಮಂಡ್ಯ(Mandya) ಮತ್ತು ತುಮಕೂರಿನ(Tumkur) ಜಿಯೋ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5G ನೆಟ್‌ವರ್ಕ್ ಪಡೆಯಲಿದ್ದಾರೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

ಇದರೊಂದಿಗೆ, ಜಿಯೋ ತನ್ನ 5G ಇಂಟರ್ನೆಟ್ ಸೇವೆಗಳನ್ನು ದೇಶದ 184 ನಗರಗಳಿಗೆ ವಿಸ್ತರಿಸಿದೆ.

ಈ ಹಿಂದೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ(Mysore) ಜನರಿಗೆ ಹೊಸ ವರ್ಷದ ಉಡುಗೊರೆಯಾಗಿ, 5G ನೆಟ್‌ವರ್ಕ್ ಅನ್ನು ಪ್ರಾರಂಭಿಸಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ರಿಲಯನ್ಸ್ ಜಿಯೋ ಭಾರತದಲ್ಲಿ 5 ಜಿ ಚಾಲಿತ ಸಾರ್ವಜನಿಕ ವೈ-ಫೈ(Wi-fi) ಸೇವೆಯನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿತ್ತು.

ಸ ಜಿಯೋ 5G ಸಾರ್ವಜನಿಕ ವೈ-ಪೈ ಸೇವೆಯ ಪ್ರಯೋಜನವು ದೇಶದ ಕೆಲವು ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುತ್ತದೆ ಎಂದು ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ(Akash Ambani) ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹಳೇ ಚಿತ್ರದಂತೆ, ಮೋದಿಯವರು ಹೊಸ ಚಿತ್ರದಂತೆ : ನಟ ಜಗ್ಗೇಶ್ ವ್ಯಂಗ್ಯ

ಇನ್ನು ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಣಾಸಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ಜಿಯೋ ತನ್ನ 5ಜಿ ಇಂಟರ್‌ನೆಟ್‌ಸೇವೆಗಳನ್ನು ಪ್ರಾರಂಭಿಸಿತು.

ಇದಕ್ಕೂ ಮುನ್ನ ಜುಲೈನಲ್ಲಿ, ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ(Namma Metro) 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿತು.

https://youtu.be/a0qBOWBhfpQ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೆಚ್ಚಿನ ಇಂಟರ್ನೆಟ್ ವೇಗವನ್ನು ಸಾಧಿಸಲು ಟೆಲಿಕಾಂ ರೆಗ್ಯುಲೇಟರಿ

ಅಥಾರಿಟಿ ಆಫ್ ಇಂಡಿಯಾದ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ ಎಂದು ಘೋಷಿಸಿತು.

ಸದ್ಯ ಭಾರತದಲ್ಲಿ ಜಿಯೋ 5ಜಿ ಸೇವೆಗಳನ್ನು 200ಕ್ಕೂ ಹೆಚ್ಚು ನಗರಗಳಲ್ಲಿ ನೀಡುತ್ತಿದ್ದು, ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಿಲ್ಲ.

ಮುಂದಿನ ದಿನಗಳಲ್ಲಿ ಈ ಶುಲ್ಕ ವಿಧಿಸುವ ಕುರಿತು ಕಂಪನಿ ಪ್ರಕಟಣೆ ನೀಡಲಿದೆ ಎನ್ನಲಾಗಿದೆ. ಸದ್ಯ ಜಿಯೋ ನೀಡುತ್ತಿರುವ 5ಜಿ ಸೇವೆಗಳನ್ನು ಎಲ್ಲ ಜಿಯೋ ಬಳಕೆದಾರರು 4ಜಿ ಸೇವೆಯ ಶುಲ್ಕದ ಅಡಿಯಲ್ಲೇ ಪಡೆದುಕೊಳ್ಳಬಹುದು.

Exit mobile version