ಬೆಂಗಳೂರು ಮೆಟ್ರೋನಲ್ಲಿ 96 ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳ ಸಂಬಳ ರೂ. 82660

Bengaluru: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)ನಲ್ಲಿ 96 ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್ ಹುದ್ದೆಗಳಿಗೆ (job opportunity in bmrcl) ಅರ್ಜಿ ಸಲ್ಲಿಸಲು ಇದೊಂದು ಸುವರ್ಣವಕಾಶ.

ಬೆಂಗಳೂರು-ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.ಹೌದು ಅಧಿಸೂಚನೆ ಮೇ 2023 ಮೂಲಕ ಟ್ರೇನ್ ಆಪರೇಟರ್,ಸ್ಟೇಷನ್ ಕಂಟ್ರೋಲರ್ (Controller)
ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.31-ಮೇ-2023 ರಂದು ಅಥವಾ ಮೊದಲು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Metro Train

BMRCL ಸಂಸ್ಥೆಯ ಅಧಿಸೂಚನೆ

ಉದ್ಯೋಗ ಖಾಲಿ ಇರುವ ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ಹುದ್ದೆಗಳ ಸಂಖ್ಯೆ: 96
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್
ವೇತನ: ರೂ.35000-82660/- ಪ್ರತಿ ತಿಂಗಳು

ವಯೋಮಿತಿ:
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ (Corporation) ಲಿಮಿಟೆಡ್ ಉದ್ಯೋಗ ನೇಮಕಾತಿ ಅಧಿಸೂಚನೆಗಳ (job opportunity in bmrcl) ಪ್ರಕಾರ, 16-ಮೇ-2023 ರಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು.

ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ (Psychometric) ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ನೇರ ಸಂದರ್ಶನ

ವಿದ್ಯಾರ್ಹತೆ :

  1. ಕಡ್ಡಾಯವಾಗಿ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು,
  2. ಡಿಪ್ಲೊಮಾ ಅಥವಾ ಯಾವುದೇ ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್/ಇಂಡಸ್ಟ್ರಿಯಲ್ (Industrial) ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್(Engineering)

ಅರ್ಜಿ ಸಲ್ಲಿಸುವುದು ಹೇಗೆ?

english.bmrc.co.in ಅಧಿಕೃತ ವೆಬ್‌ಸೈಟ್‌ನಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 16-05-2023 ರಿಂದ 31-ಮೇ-2023 ರವರೆಗೆ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ (Online) ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಅರ್ಜಿದಾರರು ದೃಢೀಕರಿಸಿದ ದಾಖಲೆಗಳೊಂದಿಗೆ : ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, K.H ರಸ್ತೆ, ಶಾಂತಿನಗರ(Shantinagar) , ಬೆಂಗಳೂರು – 560027 ಗೆ 07-ಜೂನ್-2023 ರಂದು ಅಥವಾ ಮೊದಲು ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-ಮೇ-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-ಮೇ-2023
ಅರ್ಜಿಯ ಹಾರ್ಡ್ ಪ್ರತಿಯನ್ನು ಕಳುಹಿಸಲು ಕೊನೆಯ ದಿನಾಂಕ: 07-ಜೂನ್-2023

BMRCL ಪ್ರಮುಖ ಲಿಂಕ್‌ಗಳು :
ಅಧಿಕೃತ ವೆಬ್‌ಸೈಟ್: english.bmrc.co.in
ಗಮನಿಸಿ: ಯಾವುದೇ ಸಮಸ್ಯೆಗಳು/ಸವಾಲುಗಳನ್ನು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ,ಎದುರಿಸಿದರೆ, ಸಮಸ್ಯೆಯನ್ನು ಪರಿಹರಿಸಲು ದಯವಿಟ್ಟು ಇ-ಮೇಲ್ (helpdesk@bmrc.co.in) ಕಳುಹಿಸಿ

ರಶ್ಮಿತಾ ಅನೀಶ್

Exit mobile version