ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನಲ್ಲಿ ವಿವಿಧ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನಲ್ಲಿ (Boarder Security Force) ವಿವಿಧ ಹುದ್ದೆಗಳಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆಯ ಪ್ರಕಾರ ಸಹಾಯಕ ಸಬ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. SSLC, ITI, PUC, ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ
ಕಾನ್ಸ್ಟೇಬಲ್ (Constable) (ಸ್ಟೋರ್ಮನ್) : 03
ಅಸಿಸ್ಟಂಟ್ ಏರ್ಕ್ರ್ಯಾಫ್ಟ್ ಮೆಕ್ಯಾನಿಕ್ (ಎಎಸ್ಐ) : 08
ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ಎಎಸ್ಐ) : 11

ಶೈಕ್ಷಣಿಕ ವಿದ್ಯಾರ್ಹತೆ : ಕಾನ್ಸ್ಟೇಬಲ್ ಹುದ್ದೆಗೆ SSLC ಪಾಸ್ ಮಾಡಿರಬೇಕು. ಇತರೆ ಹುದ್ದೆಗೆ ಡಿಪ್ಲೊಮ ಪಾಸ್ ಮಾಡಿರಬೇಕು.

ಬಿಎಸ್ಎಫ್ ಇಂಜಿನಿಯರಿಂಗ್ ವಿಭಾಗದ (ಗ್ರೂಪ್ ಬಿ) ಹುದ್ದೆಗಳು
ಸಬ್ಇನ್ಸ್ಪೆಕ್ಟರ್ (ವರ್ಕ್ಸ್) : 13
ಸಬ್ ಇನ್ಸ್ಪೆಕ್ಟರ್ ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್) : 09
ಶೈಕ್ಷಣಿಕ ವಿದ್ಯಾರ್ಹತೆ : ಸಿವಿಲ್ (Civil) ಹಾಗೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ

ಬಿಎಸ್ಎಫ್ ಇಂಜಿನಿಯರಿಂಗ್ (BSF Engineering) ವಿಭಾಗ (ಗ್ರೂಪ್ ಸಿ) ಹುದ್ದೆಗಳು
ಕಾನ್ಸ್ಟೇಬಲ್ (ಜೆನೆರೇಟರ್ ಮೆಕ್ಯಾನಿಕಲ್) : 14
ಕಾನ್ಸ್ಟೇಬಲ್ (ಲೈನ್ಮನ್) : 09
HC (ಪ್ಲಂಬರ್ ) : 1
HC (ಕಾರ್ಪೆಂಟರ್) : 1
ಕಾನ್ಸ್ಟೇಬಲ್ (ಜೆನೆರೇಟರ್ ಆಪರೇಟರ್) : 13
ವಿದ್ಯಾರ್ಹತೆ : SSLC ಜತೆಗೆ ಐಟಿಐ ಪಾಸ್ ಮಾಡಿರಬೇಕು.

ಹುದ್ದೆವಾರು ವೇತನ ವಿವರ
ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) : ರೂ.29200-92300.
ಕಾನ್ಸ್ಟೇಬಲ್ : ರೂ.21,700-69,100.
ಸಬ್ ಇನ್ಸ್ಪೆಕ್ಟರ್ (ಗ್ರೂಪ್ ಬಿ) : ರೂ.35400-1,12,400.
ಹೆಡ್ ಕಾನ್ಸ್ಟೇಬಲ್ (ಹೆಚ್ಸಿ) : ರೂ.25500-81100.

ವಯಸ್ಸಿನ ಅರ್ಹತೆ
ಸಬ್ ಇನ್ಸ್ಪೆಕ್ಟರ್ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಕಾನ್ಸ್ಟೇಬಲ್ ಹುದ್ದೆಗೆ 18-25 ವಯೋಮಾನದವರು ಅರ್ಜಿ ಸಲ್ಲಿಸಬಹುದು.
ASI ಹುದ್ದೆಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಕಾನ್ಸ್ಟೇಬಲ್ ಹುದ್ದೆಗಳಿಗೆ 20 – 25 ವಯೋಮಾನದವರು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 09-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 08-04-2024

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್: https://rectt.bsf.gov.in/

Exit mobile version