ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದ್ದು ಸೆಸ್‌, ಸರ್‌ಚಾರ್ಜ್‌ನಲ್ಲೂ ಪಾಲು ಕರ್ನಾಟಕದ ವಾದ

Bengaluru: ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ಅಷ್ಟೇ ಅಲ್ಲ ರಾಜ್ಯ (kar claim for cess surcharge) ವಾರ್ಷಿಕವಾಗಿ 5 ಲಕ್ಷ ಕೋಟಿ

ರೂಪಾಯಿ ಸೆಸ್‌, ಸರ್‌ಚಾರ್ಜ್‌ ಸಂಗ್ರಹಿಸುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಜಿಎಸ್‌ಟಿಯಲ್ಲಿ ಮಾತ್ರವಲ್ಲ ಸೆಸ್‌ (Cess), ಸರ್‌ಚರ್ಜ್‌ನಲ್ಲೂ ಪಾಲು ನೀಡಬೇಕು ಜೊತೆಗೆ ಆರ್ಥಿಕ ಉತ್ತೇಜನ

ಕೊಡಬೇಕು ಎಂಬ ವಾದವನ್ನು ಕರ್ನಾಟಕ (Karnataka) ಸರ್ಕಾರ 16ನೇ ಹಣಕಾಸು ಆಯೋಗ ರಚನೆಗೂ ಮುನ್ನ ಕೇಂದ್ರ ಹಣಕಾಸು ಇಲಾಖೆಗೆ ಮಂಡಿಸಿದೆ.

2026- 27 ರಿಂದ 2030- 31ನೇ ಅವಧಿಗೆ ಕೇಂದ್ರ ಹಣಕಾಸು ಸಚಿವಾಲಯವು 16ನೇ ಹಣಕಾಸು ಆಯೋಗ ರಚನೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಅದರಂತೆ ಆಯೋಗಕ್ಕೆ

ನಿಗದಿಪಡಿಸಬೇಕಾದ ನಿಯಮ, ನಿಬಂಧನೆಗಳನ್ನು ಅಂತಿಮಗೊಳಿಸಲು ರಾಜ್ಯಗಳಿಂದ ಸಲಹೆಯನ್ನು ಕೋರಿತ್ತು. ರಾಜ್ಯ ಸರಕಾರವು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲಹೆಗಳನ್ನು

ನೀಡಿದ್ದು, ಸಾಕಷ್ಟು ಅಂಶಗಳು ರಾಜ್ಯಕ್ಕೆ ಆರ್ಥಿಕ ನೆರವು ಒದಗಿಸುವ ಸ್ವರೂಪದ್ದಾಗಿರುವುದು ವಿಶೇಷ.

ರೈಲಿನಲ್ಲಿ ಬೆಂಕಿ: ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ, ತಪ್ಪಿದ ಭಾರಿ ಅವಘಡ

ಕೇಂದ್ರದ ತೆರಿಗೆ ಆದಾಯಕ್ಕೆ ಸೆಸ್‌, ಸರ್‌ಚಾರ್ಜ್‌ (Surcharge) ಆದಾಯವನ್ನು ಪರಿಗಣಿಸದ ಕಾರಣ ರಾಜ್ಯಗಳಿಗೆ ಅದರಲ್ಲಿ ಪಾಲು ಸಿಗುತ್ತಿಲ್ಲ. ವಾರ್ಷಿಕವಾಗಿ 5 ಲಕ್ಷ ಕೋಟಿ ರೂ. ಅನ್ನು ಕೇಂದ್ರ

ಸರಕಾರವು ರಾಜ್ಯಗಳಿಂದ ಸೆಸ್‌, ಸರ್‌ಚಾರ್ಜ್‌ ರೂಪದಲ್ಲಿ ಸಂಗ್ರಹಿಸುತ್ತಿದೆ. ಆದರೆ ಕೇಂದ್ರ ತೆರಿಗೆ ವರಮಾನಕ್ಕೆ ಸೆಸ್‌ (Cess), ಸರ್‌ಚಾರ್ಜ್ ಪರಿಗಣಿಸಿದರೆ ರಾಜ್ಯಕ್ಕೆ ಸಾವಿರಾರು

ಕೋಟಿ ರೂ. ಹೆಚ್ಚುವರಿ ನೆರವು ಸಿಗಲಿದ್ದು, ಆ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ (kar claim for cess surcharge) ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ಹೆಚ್ಚು ಜಿಎಸ್‌ಟಿ ಸಂಗ್ರಹಕ್ಕೆ ಒತ್ತು ನೀಡಿ ಆರ್ಥಿಕತೆ ಬೆಳವಣಿಗೆಗೆ ಕಾರಣವಾಗುತ್ತಿದೆ. ಇಂತಹ ರಾಜ್ಯಗಳಿಗೆ

ಉತ್ತೇಜನ ನೀಡಿ ಇತರ ರಾಜ್ಯಗಳಿಗೂ ಪ್ರೇರಣೆ ನೀಡುವತ್ತ ಚಿಂತಿಸಬೇಕು ಎಂದೂ ರಾಜ್ಯ ಸರಕಾರ ಸಲಹೆ ಕೊಟ್ಟಿದೆ.

ಬೆಂಗಳೂರು (Bengaluru), ಕೋಲ್ಕೊತ್ತಾ, ಮುಂಬಯಿ (Mumbai), ಹೈದರಾಬಾದ್‌, ಚೆನ್ನೈನಂತಹ (Chennai) ಮಹಾನಗರ ಮತ್ತು ರಾಜ್ಯಗಳ ತಲಾವಾರು ಆದಾಯ ಪರಿಗಣಿಸುವಾಗ

ಇತರ ಪ್ರದೇಶವೆಂದು ಗುರುತಿಸುವ ಕೆಲಸ ಆಗಬೇಕು. ಕೆಲ ಮಹಾನಗರಗಳು ಇಡೀ ರಾಜ್ಯದ ತಲಾದಾಯ ನಿರ್ಧರಿಸುವಷ್ಟು ಪ್ರಭಾವ ಬೀರುತ್ತವೆ. ಇದರಿಂದ ರಾಜ್ಯದ ಒಟ್ಟಾರೆ ತಲಾದಾಯ ಹೆಚ್ಚಿದೆ

ಎಂಬ ಭಾವನೆ ಮೂಡುತ್ತದೆ. ಮಹಾನಗರ ಹೊರತುಪಡಿಸಿ ಅದೇ ರಾಜ್ಯದ ಇತರೆ ಪ್ರದೇಶಗಳ ತಲಾದಾಯ ಬಹಳ ಕಡಿಮೆ ಇರುತ್ತದೆ ಎಂಬುದನ್ನು ಪರಿಗಣಿಸಬೇಕೆಂಬ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಾಕಷ್ಟು ಮಂದಿ ಉದ್ಯೋಗ ಹುಡುಕಿಕೊಂಡು ನಾನಾ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿದ್ದು, ಹೀಗಾಗಿ ವರಮಾನದಲ್ಲಿ ಪಾಲು ನಿಗದಿ ವೇಳೆ ಆರ್ಥಿಕ ಬೆಳವಣಿಗೆ, ನಗದೀಕರಣವನ್ನು ಪರಿಗಣಿಸಬೇಕು.

ಅಲ್ಲದೆ ನಗರಗಳಲ್ಲಿ ಮೂಲಸೌಕರ್ಯ, ಇತರ ಸವಲತ್ತುಗಳಿಗೆ ಹೆಚ್ಚಿನ ಹೂಡಿಕೆಗೆ ನೆರವು ನೀಡಬೇಕು. 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯವಾಗಿ 15ನೇ ಹಣಕಾಸು

ಆಯೋಗವು ಅನುದಾನ ಪ್ರಮಾಣ ನಿಗದಿಪಡಿಸುತ್ತಿದೆ. ಇದರಿಂದ ಕರ್ನಾಟಕಕ್ಕೆ ನಿಗದಿಪಡಿಸುವ ಪಾಲಿನ ಮೊತ್ತ ಕಡಿಮೆಯಾಗುತ್ತಿದೆ. ಹಾಗಾಗಿ 1971ರ ಜನಗಣತಿ ಪರಿಗಣಿಸುವಂತೆಯೂ ಸಲಹೆ ನೀಡಿದೆ.

ಭವ್ಯಶ್ರೀ ಆರ್.ಜೆ

Exit mobile version