ಓಟು ಮಾಡು ಕರುನಾಡು : ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌, ಬೆಂಗಳೂರಿನಲ್ಲಿ ಬಿರುಸಾಗುತ್ತಿಲ್ಲ ಮತದಾನ

Bengaluru : ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka assembly election) ಮತಹಬ್ಬಕ್ಕೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಜನ ಅತ್ಯುತ್ಸಾಹದಿಂದ ಮತ (karavali district polling) ಚಲಾಯಿಸುತ್ತಿದ್ರೆ, ಬೆಂಗಳೂರು ನಗರದಲ್ಲಿ ಮತದಾರ ಅಷ್ಟೊಂದು ಆಸಕ್ತಿದಾಯಕವಾಗಿ ಮತ ಚಲಾಯಿಸುತ್ತಿಲ್ಲ.

ಒಟ್ಟಾರೆ ಇಂದು ಮದ್ಯಾಹ್ನ 1 ಗಂಟೆಯ ತನಕ ಕರ್ನಾಟಕ ರಾಜ್ಯದಲ್ಲಿ ಒಟ್ಟು ಶೇಕಡಾ 37.3ರಷ್ಟು ಮತದಾನ ನಡೆದಿದೆ.

ಕರ್ನಾಟಕ ಕರಾವಳಿ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲಿ (Udupi District) ಇದುವರೆಗೆ ಅತೀ ಹೆಚ್ಚು 47.49 ಮತದಾನ (Voting) ಆಗಿದೆ.

ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44.17 ಮತ್ತು ಬೆಂಗಳೂರು ಗ್ರಾಮಾಂತರ 40.2 ಮತದಾನ ಆಗಿದೆ.

ಇನ್ನು ಬೆಂಗಳೂರು ಸೆಂಟ್ರಲ್ 29.4, ಬೆಂಗಳೂರು ಉತ್ತರ 29.9, ಬೆಂಗಳೂರು ದಕ್ಷಿಣ 30.7, ಬೆಂಗಳೂರು ನಗರ 31.5, ಹಾಸನ 40.84, ಚಿಕ್ಕಬಳ್ಳಾಪುರ 40.17, ಶಿವಮೊಗ್ಗ 41.0,

ಕೋಲಾರದಲ್ಲಿ ಶೇಕಡಾ 36.87 ರಷ್ಟು ಮತದಾನವಾಗಿದೆ. ಬೆಂಗಳೂರಿನಲ್ಲಿ ಕಳೆದ ಬಾರಿಗೆ ಹೋಲಿಸಿದರೆ (karavali district polling) ಅಥವಾ ಪ್ರತಿ ಬಾರಿಯೂ ಅತೀ ಕಡಿಮೆ ಮತದಾನ ನಡೆಯುತ್ತಿರುತ್ತದೆ.

ಆದರೆ ಈ ಬಾರಿ ಬೆಳಗ್ಗೆಯಿಂದಲೇ ಹಿರಿಯ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದಾರೆ ಆದರೆ ಯುವ ಜನತೆ ಸಂಖ್ಯೆ ಕಡಿಮೆಯಿದೆ.

ಇದನ್ನೂ ಓದಿ : https://vijayatimes.com/assembly-election-2023/

ಬಹುಷಃ ಮಧ್ಯಾಹ್ನದ ಬಳಿಕ ಯುವಜನತೆ ಮತಗಟ್ಟೆಗೆ ಆಗಮಿಸುವ ನಿರೀಕ್ಷೆ ಸಹ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಾಯುಭಾರ ಕುಸಿತದಿಂದಾಗಿ ಬಂಗಾಳಕೊಳ್ಳಿಯಲ್ಲಿ (bangala kolli) ಉಂಟಾಗಿರುವ ಚಂಡಮಾರುತದಿಂದಗಿ

ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮಳೆ ಬರುವ ಸಾಧ್ಯತೆ ಇದೆ ಆದ್ದರಿಂದ ಈ ಬಾರಿ ಬಹಳಷ್ಟು ಮಂದಿ ಬೆಳಗ್ಗೆ ಮತ ಹಾಕಲು ಆಸಕ್ತಿ ತೋರಿಸಿದ್ದಾರೆ.


ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣ ನೋಡುವುದಾದ್ರೆ ಆರ್ ಆರ್ ನಗರ 31.72, ಶಾಂತಿನಗರ 25.86, ಶಿವಾಜಿನಗರ

29.75, ಸಿ ವಿ ರಾಮನ್ ನಗರ 26.85, ಮಲ್ಲೇಶ್ವರಂ 32.08, ಮಹಾಲಕ್ಷ್ಮಿ ಲಾಔಟ್ 34.2, ಪುಲಿಕೇಶಿ ನಗರ 28.65,

ಸರ್ವಜ್ಞನಗರ 25.08, ಹೆಬ್ಬಾಳ 32.96, ಕೆ ಆರ್ ಪುರ 29.43 , ಬಸವನಗುಡಿ 33.34, ಗೋವಿಂದರಾಜನಗರ 30.72, ಜಯನಗರದಲ್ಲಿ ಶೇ 34.82ರಷ್ಟು ಮತದಾನ ನಡೆದಿದೆ.

ಇದನ್ನೂ ಓದಿ : https://vijayatimes.com/heavy-rain-in-karnataka/


ಈ ಹಿಂದೆ ಬೆಂಗಳೂರಿನಲ್ಲಿ ವೀಕೆಂಡ್‌ನಲ್ಲಿ ಚುನಾವಣೆ ಇದ್ದಾಗ ಪ್ರತಿ ಬಾರಿ ಕೂಡ ಅತೀ ಕಡಿಮೆ ಪ್ರಮಾಣದ ಮತದಾನ ನಡೆಯುತ್ತಿತ್ತು.ಆದರೆ ಈ ವರ್ಷ ವಾರದ ಮಧ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ.

Exit mobile version