ಜುಲೈ 26 ವಿಜಯ್ ದಿವಸ್ ; ಕಾರ್ಗಿಲ್ ಯುದ್ದದ 10 ಅಚ್ಚರಿಗಳು..!

Kargil Vijay Diwas : ಜುಲೈ 26 ಭಾರತೀಯರ ಪಾಲಿಗೆ ಮಹತ್ವದ ದಿನವಾಗಿದೆ. ಪಾಕಿಸ್ತಾನದ ವಿರುದ್ದ ನಡೆದ ಕಾರ್ಗಿಲ್ ಕದನದಲ್ಲಿ ನಮ್ಮ ಭಾರತೀಯ ಸೇನೆ ವಿಜಯ ಸಾಧಿಸಿದ ನೆನಪಿಗಾಗಿ

ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಹೀಗಾಗಿ ವಿಜಯ್ ದಿವಸ್ ದಿನದ ಕೆಲ ಪ್ರಮುಖ ಸಂಗತಿಗಳ ವಿವರ (kargil vijay diwas) ಇಲ್ಲಿದೆ ನೋಡಿ.

ಕಾರ್ಗಿಲ್ ಯುದ್ದವು 1999ರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು.

ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ಒಳನುಸುಳುವಿಕೆ ಮತ್ತು ಒಳನುಗ್ಗುವಿಕೆಯ ಪರಿಣಾಮವಾಗಿ ಯುದ್ಧವು ಸಂಭವಿಸಿದೆ.

ಈ ಯುದ್ದದಲ್ಲಿ ಭಾರತೀಯ ಸೇನೆ ಕಾರ್ಗಿಲ್ ಜಿಲ್ಲೆಯಲ್ಲಿರುವ 18,000 ಅಡಿ ಎಚ್ಚರದಲ್ಲಿರುವ ಅತ್ಯಂತ ಸವಾಲಿನ ಪರ್ವತ ಪ್ರದೇಶಗಳಲ್ಲಿ ಹೋರಾಟ ಮಾಡಬೇಕಾಯಿತು.

ಇದನ್ನು ಓದಿ: ಪೋಷಕಾಂಶಗಳ ‘ಶಕ್ತಿ ಕೇಂದ್ರ’ ಕಪ್ಪು ಎಳ್ಳು: ಚರ್ಮ ರೋಗಕ್ಕೆ ರಾಮಬಾಣ ಹೇಗೆ ಗೊತ್ತಾ?

ಈ ಯುದಲ್ಲಿ ಅಧಿಕೃತವಾಗಿ 500 ಭಾರತೀಯ ಸೈನಿಕರು ವೀರ ಮರಣ ಹೊಂದಿದರೆ, 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡರು. ಆದರೆ ಮೂಲಗಳ ಪ್ರಕಾರ 1300ಕ್ಕೂ ಅಧಿಕ ಪಾಕಿಸ್ತಾನದ ಸೈನಿಕರು

ಈ ಯುದ್ದದಲ್ಲಿ ಸಾವನ್ನಪ್ಪಿದ್ದಾರೆ.

ಈ ಯುದ್ಧದಲ್ಲಿ ಪರ್ವತಗಳ ಮೇಲಿದ್ದ ಪಾಕಿಸ್ತಾನ ಸೇನೆಯನ್ನ ಹಿಮ್ಮಟ್ಟಿಸಲು ಫಿರಂಗಿ, ವಾಯುದಳ ಮತ್ತು ಪದಾತಿ ದಳವನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು.

ಭಾರತೀಯ ವಾಯುಪಡೆಯು ಯುದ್ದದ ಸಮಯದಲ್ಲಿ ವೈಮಾನಿಕ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು, ಶತ್ರುಗಳನ್ನು ವ್ಯೂಹಾತ್ಮಕ ಸ್ಥಾನಗಳಿಂದ ಹೊರಹಾಕಲು ನಿರ್ಣಾಯಕ

ವಾಯುದಾಳಿಗಳನ್ನು ನಡೆಸಿತು.

ಈ ಯುದ್ದದ ಸಮಯದಲ್ಲಿ ಅಮೇರಿಕಾ ಭಾರತಕ್ಕೆ ನೀಡಿದ್ದ ಜಿಪಿಎಸ್ ತಂತ್ರಜ್ಞಾನವನ್ನು ಹಿಂಪಡೆಯಿತು.

ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ “ಯೇ ದಿಲ್ ಮಾಂಗೆ ಮೋರ್” ಎಂಬ ಘೋಷಣೆ ಹೆಚ್ಚು ಪ್ರಸಿದ್ದಿ ಪಡೆಯಿತು.

ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ರ ಆಯಕಟ್ಟಿನ ಶಿಖರಗಳನ್ನು ಪುನಃ ವಶಪಡಿಸಿಕೊಂಡಿತು.

ಕಾರ್ಗಿಲ್ ಯುದ್ಧವು 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಎರಡು ದೇಶಗಳು ನೇರ ಮಿಲಿಟರಿ ಯುದ್ದವಾಗಿತ್ತು.

2ನೇ ಮಹಾಯುದ್ದದ ನಂತರ ಅತಿಹೆಚ್ಚು ಬಾಂಬ್ ಪ್ರಯೋಗಿಸಿದ ಯುದ್ದ ಇದಾಗಿತ್ತು.

1999ರಲ್ಲಿ ಲಾಹೋರ ಒಪ್ಪಂದದ ಮೂಲಕ ಯುದ್ದವನ್ನು ಕೊನೆಗೊಳಿಸಲಾಯಿತು.

ಕಾರ್ಗಿಲ್ ಯುದ್ದದ ಪ್ರಮುಖ ದಿನಾಂಕಗಳು :
– ಮೇ 10, 1999- ಭಾರತೀಯ ಸೇನೆ ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿತು.

– ಮೇ 26, 1999- ಭಾರತೀಯ ಸೇನೆಯು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು.

– ಮೇ 31, 1999- ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕೃತವಾಗಿ ಯುದ್ದ ಘೋಷಿಸಿದರು.

– ಜುಲೈ 5, 1999- ಕಾರ್ಗಿಲ್ನಿಂದ ಪಾಕ್ ಪಡೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪಾಕ್ ಪ್ರಧಾನಿ ಷರೀಫ್ ಘೋಷಿಸಿದ್ದಾರೆ.

– ಜುಲೈ 26, 1999 – ಕಾರ್ಗಿಲ್ ಯುದ್ಧವು ಕೊನೆಗೊಳ್ಳುತ್ತದೆ. ‘ಆಪರೇಷನ್ ವಿಜಯ್’ಘೋಷಣೆ ಮಾಡಲಾಯಿತು.

Exit mobile version